(JavaScript required to view this email address)
Mangalore

News & Articles

ಕುಸುಮಾ ಹತ್ಯಾಳ, ಬೀದರ  ಜಿಲ್ಲೆಯ ಮಹಿಳಾ ಲೇಖಕಿಯರಲ್ಲಿ ಒಬ್ಬರು. ಕವನ, ಲೇಖನ,ಗಜಲ್ ,ಚುಟುಕು, ಪ್ರಬಂಧ, ನುಡಿಮುತ್ತುಗಳು, ಹೈಕುಗಳು,ಸೇರಿದಂತೆ ಹಲವು ಪ್ರಕಾರಗಳಲ್ಲಿ ಬರೆಯುತ್ತಾರೆ.  ಅಂತರಂಗದ ಹಾಯ್ಕುಗಳು, ಮೌನ ಮೃದಂಗ ಮತ್ತು ಹೃದಯ ಗೀತೆ ಅವರ ಮೂರು ಪ್ರಕಟಿತ ಕೃತಿಗಳು. ಅವರ ಸಾಹಿತ್ಯ ಸಾಧನೆಗೆ ಗಣಕರಂಗ ಪ್ರಶಸ್ತಿ, ಸಾಂಸ್ಕೃತಿಕ ಸಾರಥಿ ಪ್ರಶಸ್ತಿ ಮತ್ತು ಅಂತರ್ಜಾಲ ಸ್ಪರ್ಧೆಗಳ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನ ಮತ್ತು ಉಪನ್ಯಾಸ ಮಾಡಿದ್ದಾರೆ.

ಬಹುಮುಖ ಪ್ರತಿಭೆಯ ಕುಸುಮಾ ಹತ್ಯಾಳ ಬೀದರ್
ಕುಸುಮ ಹತ್ಯಾಳ ಬಿಎ, ಬಿ ಎಡ್, ಎಂಎ(ಕನ್ನಡ) ಎಂ ಎ (ಇತಿಹಾಸ) ಮತ್ತು ಎಂ  ಇಡಿ ವೃತ್ತಿಪರ ಕಲಿಕೆ ಮಾಡಿ ನನಗೆ ಕಾಲೇಜಿನಲ್ಲಿ ಐದು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕುಸುಮ ಅವರು ಗಾಯಕಿ ಮತ್ತು ಸಂಘಟಕಿ ಕೂಡ. ಅವರು ಸುಮಾರು ನಾನೂರಕ್ಕೂ ಹೆಚ್ಚು ಗೀತೆಗಳಿಗೆ ಸ್ವರ ನೀಡಿದ್ದಾರೆ.
ಬಹುಮುಖ ಪ್ರತಿಭೆಯ ಕುಸುಮಾ ಹತ್ಯಾಳ ಬೀದರ್
ಕುಸುಮ ಹತ್ಯಾಳ ಅವರು ಕಥಾಬಿಂದು ಪ್ರಕಾಶನದ ನೇತೃತ್ವದಲ್ಲಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳ್ಳಿಯಲ್ಲಿ ಆಗಸ್ಟ್ 27ರಂದು ಆಯೋಜಿಸಲಾಗಿರುವ "ಕಥಾಬಿಂದು ಸಾಹಿತ್ಯ ಸಂಭ್ರಮ" ಕಾರ್ಯಕ್ರಮದಲ್ಲಿ "ಸಾಹಿತ್ಯ ರತ್ನ" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಬಹುಮುಖ ಪ್ರತಿಭೆಯ ಕುಸುಮಾ ಹತ್ಯಾಳ ಬೀದರ್
ಪರಿಚಯಿಸಿದವರು
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು 7045353049
ಬಹುಮುಖ ಪ್ರತಿಭೆಯ ಕುಸುಮಾ ಹತ್ಯಾಳ ಬೀದರ್
ಬಹುಮುಖ ಪ್ರತಿಭೆಯ ಕುಸುಮಾ ಹತ್ಯಾಳ ಬೀದರ್
ಬಹುಮುಖ ಪ್ರತಿಭೆಯ ಕುಸುಮಾ ಹತ್ಯಾಳ ಬೀದರ್

Comments (0)




Be the first to comment using the form below.