(JavaScript required to view this email address)
Mangalore

News & Articles

ಹೈದರಾಬಾದ್ ನಲ್ಲಿ ಕಥಾ ಬಿಂದು ಪ್ರಕಾಶನದ ಕನ್ನಡ ಕಲರವ

ಕಾದಂಬರಿಗಾರ ಪಿ ವಿ ಪ್ರದೀಪ್ ಕುಮಾರ್ ಅವರ ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕರ್ನಾಟಕ ಸಾಹಿತ್ಯ ಮಂದಿರ ಹೈದರಾಬಾದ್ ಇವರ ಜಂಟಿ ಆಶಯದಲ್ಲಿ ಕನ್ನಡ ಕಂಪು ಕಾರ್ಯಕ್ರಮವು ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ 5.5.2024 ರಂದು ಜರಗಿತು. ಈ ಸಂದರ್ಭದಲ್ಲಿ  ಪ್ರಭಾ ಶಾಸ್ತ್ರಿ ಜೋ  ಶ್ಯುಲ ತೆಲುಗಿಗೆ ಭಾಷಾಂತರಿಸಿದ ಪಿ ವಿ ಪ್ರದೀಪ್ ಕುಮಾರ್ ಅವರ ಕನ್ನಡ ಕಾದಂಬರಿ ಮರಣ ಶಾಸನದ ತೆಲುಗು ಆವೃತ್ತಿ ಲೋಕಾರ್ಪಣೆಗೊಂಡಿತು. ಅನುವಾದಕರಾದ ಪ್ರಭಾಶಾಸ್ತ್ರಿ ಜೋಶ್ಯುಲ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ಸಾಹಿತ್ಯ ಡಾ ಕೊಳಚಪ್ಪೆ ಗೋವಿಂದ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನುವಾದಿತ ಕೃತಿಯನ್ನು ಪಿವಿ ಪ್ರದೀಪ್ ಕುಮಾರ್ ಬಿಡುಗಡೆ ಮಾಡಿದರು. 


ಹೈದರಾಬಾದ್ ನಲ್ಲಿ ಕಥಾ ಬಿಂದು ಪ್ರಕಾಶನದ ಕನ್ನಡ ಕಲರವ
ಡಾ. ವಿಠ್ಠಲ್ ಜೋಶಿ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಮುಂದಿರ ಹಾಗೂ ಜೆ. ಎಸ್ ನರಸಿಂಹ ಮೂರ್ತಿ ಜೋಯಿಸ್   ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸುನೀತಾ ಪ್ರದೀಪ್ ಕುಮಾರ್, ಕೆ.ವಿ. ಲಕ್ಷ್ಮಣ ಮೂರ್ತಿ, ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿ ಜಯಂತ ಪೂಜಾರಿ ಮಂಗಳೂರು ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದ ಬಿಕೆ ಮಾಧವ್ ರಾವ್ ಮತ್ತು ಡಾ ಕೊಳ್ಚಪ್ಪೆ ಗೋವಿಂದ ಭಟ್ ಶ್ರೀ ಶ್ರೀ ಕಲಾ ವೇದಿಕೆ ಕೊಡ ಮಾಡಿದ  ಸಾಹಿತ್ಯ ರತ್ನ  ಪ್ರಶಸ್ತಿ ಸ್ವೀಕರಿಸಿದರು. ಇದೇ ವೇದಿಕೆಯಲ್ಲಿ ವೀಣಾ ಕಾರಂತ ಅವರ ಎರಡು ಕೃತಿಗಳು, ವಿದ್ಯಾ ರಕ್ಷಿತ್ ಪುತ್ತೂರು ಅವರ "ವಿಶ್ರುತ" ಕನ್ನಡ  ಕವನ ಸಂಕಲನ, ಲಲಿತಾ ಮಹಾಂತೇಶ ಅರಳಿ ರಾಣೆಬೆನ್ನೂರು ಅವರ "ಅರಳಿದ ಮೊಗ್ಗು" ಕವನ ಸಂಕಲನ ಕೃತಿಗಳು ಲೋಕಾರ್ಪಣೆಗೊಂಡುವು. ಹಿರಿಯ ಸಾಹಿತಿ ಶ್ರೀಮತಿ ಪೂರ್ಣಿಮಾ ಭಗವಾನ್ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ  ಕವಿಗೋಷ್ಠಿ ಸಂಪನ್ನವಾಯಿತು. ಮೈಸೂರಿನ ನಿವೃತ್ತ ಉಪನ್ಯಾಸಕರು ಮತ್ತು ಕಲಾವಿದರಾದ ನಾಟಕ ಭಾರ್ಗವ ಕೆಂಪರಾಜು ಮತ್ತು ಬೆಂಗಳೂರಿನ ಸಾಹಿತಿ ಶ್ರೀಮತಿ ಜಯಂತಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕನ್ನಡದ 15 ಕ್ಕೂ ಮಿಕ್ಕಿ ಕವಿ ಕಲಾವಿದರು ಗೋಷ್ಠಿಯಲ್ಲಿ ಭಾಗವಹಿಸಿದರು.


ಹೈದರಾಬಾದ್ ನಲ್ಲಿ ಕಥಾ ಬಿಂದು ಪ್ರಕಾಶನದ ಕನ್ನಡ ಕಲರವ
ಕಾರ್ಯಕ್ರಮವನ್ನು ಕುಮಾರಿ ಅಪೂರ್ವ ಕಾರಂತ ಮತ್ತು ದೀಪ್ತಿ ರೋಹಿತ್ ನಿರೂಪಿಸಿದರು. ರಾಧಾಮಣಿ ಕೋಲಾರ ಅವರು ಸಹಕರಿಸಿದರು.  ಸಾಧಕರಾದ ಶಿಕ್ಷಕಿ ಸುಂದರಮ್ಮ, ಮೂಡಿಗೆರೆಯ ಶಕುಂತಲಾ ಪಾಟೀಲ್, ತುಮಕೂರಿನ ಗೀತಾ ಟೀಚರ್, ಹಣಕಾಸು ಸಂಸ್ಥೆಯ ಪ್ರಬಂಧಕಿ ಲೀಲಾ ಗುರುರಾಜ್, ರಾಣಿಬೆನ್ನೂರಿನ ಗೃಹಣಿ ಲಲಿತಾ ಮಹಾಂತೇಶ ಅರಳಿ ಮತ್ತು ಅನುವಾದಕಿ ಪ್ರಭಾ ಶಾಸ್ತ್ರಿ ಜೋಶ್ಯುಲ, ನಿವೃತ್ತ  ಉಪನ್ಯಾಸಕರಾದ ಕುಸುಮ ಹತ್ಯಾಳ ಬೀದರ್ ಮತ್ತು ಕಲಾವತಿ ಕೋಬಾಳ ಗುಲ್ಬರ್ಗ  ಅವರಿಗೆ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಂತರ ಶುಭಾಷಿಣಿ ಚಂದ್ರ ಕನ್ನಟ್ಟಿ ಪಾರೆ ನೇತೃತ್ವದಲ್ಲಿ ಸಾಂಸ್ಕೃತಿಕ ಕಾಯ೯ಕ್ರಮ ನಡೆಯಿತು

ವಿಶೇಷವಾಗಿ ಜರಗಿದ ದ್ವಿಭಾಷಾ ಕವಿಗೋಷ್ಠಿ ತೆಲುಗು ಮತ್ತು ಕನ್ನಡ ಕವಿಗಳನ್ನು ಆಕರ್ಷಿಸಿದ್ದು ಗಮನ ಸೆಳೆಯಿತು.


ಹೈದರಾಬಾದ್ ನಲ್ಲಿ ಕಥಾ ಬಿಂದು ಪ್ರಕಾಶನದ ಕನ್ನಡ ಕಲರವ
ಸುದ್ದಿ ಕಳಿಸಿದವರು 

ಡಾ. ಕೊಳ್ಚಪ್ಪೆ ಗೋವಿಂದ ಭಟ್
ಮಂಗಳೂರು
ಹೈದರಾಬಾದ್ ನಲ್ಲಿ ಕಥಾ ಬಿಂದು ಪ್ರಕಾಶನದ ಕನ್ನಡ ಕಲರವ

Comments (0)




Be the first to comment using the form below.