(JavaScript required to view this email address)
Mangalore

News & Articles

ಇಂದಿನ ಜೀವನ ಕ್ರಮದಲ್ಲಿ ಪ್ರವಾಸ ಹೋಗುವುದು ಒಂದು ಮುಖ್ಯ ಅಂಶವಾಗಿ ಬೆಳೆದು ಬಂದಿರುತ್ತದೆ. ಕೆಲವರಿಗೆ ಇದು ಲೋಕಾನುಭವಕ್ಕೆ ಕಾರಣವಾದರೆ ಇನ್ನು ಕೆಲವರಿಗೆ ಜಾರಿತ್ರಿಕ, ಧಾರ್ಮಿಕ, ಸಾಮಾಜಿಕ ಆಸಕ್ತಿ ಮುಖ್ಯವಾಗಿರುತ್ತದೆ. ಇಂತಹ ಪ್ರವಾಸ ಹೋಗುವುದರಿಂದ ಹೆಚ್ಚಿನ ಪ್ರಯೋಜನವಾಗಬೇಕಾದರೆ ಈಗಾಗಲೇ ಅಲ್ಲಿಗೆ ಭೇಟಿ ಮಾಡಿರುವವರ ಅನುಭವ ತುಂಬಾ ಉಪಯುಕ್ತ. ಇಂತಹ ಕಥನ ಸಾಹಿತ್ಯವನ್ನು ಓದುವುದರಿಂದ ಆಯಾ ತಾಣದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಿಳಿದು ಬೇಕಾದ ಮುನ್ನಚ್ಚರಿಗೆ ತೆಗೆದುಕೊಂಡು ನಮ್ಮ ಪ್ರವಾಸ ನೆನಪು ಉಳಿಯುವಂತೆ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದ ಪಶ್ಚಿಮ ತೀರದ ಸುಂದರ ಪ್ರದೇಶ. ಬೇರೆ ಬೇರೆ ಋತುಗಳಲ್ಲಿ ವಿಶಿಷ್ಟವಾದ ಅನುಭವಗಳನ್ನು ಕೊಡುತ್ತದೆ. ನಿಸರ್ಗದ ಸೌಂದರ್ಯ ನಿರೀಕ್ಷಿಸಿ ಬರುವ ಪ್ರವಾಸಿಗಳಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ಆಪ್ತವಾಗುತ್ತವೆ. ವಿವಿಧ ಧರ್ಮಗಳ ಶ್ರದ್ಧಾ ಕೇಂದ್ರಗಳು ಅಲ್ಲಲ್ಲಿ ಎದುರಾಗಿ ಮನಸ್ಸಿಗೆ ಧನ್ಯತಾ ಭಾವ ಮೂಡುತ್ತದೆ. ಕಾಮಧೇನು ಶ್ರೀ ಕ್ಷೇತ್ರಗಳ ಸಂದರ್ಶನ ಎಂಬ ಶೀರ್ಷಿಕೆಯ ಪ್ರವಾಸ ಕಥನ ಈ ಪ್ರದೇಶವನ್ನು ಸಂದರ್ಶಿಸುವವರಿಗೆ ಅತ್ಯಂತ ಉಪಯುಕ್ತ ಕೈಪಿಡಿಯಾಗಿದೆ. ಪ್ರವಾಸ ಆಸಕ್ತರಾದ ನಿವೃತ್ತ ಪ್ರಾಂಶುಪಾಲ ಶ್ರೀ ಕೆಂಪರಾಜು ತಮ್ಮ ಅನುಭವಗಳನ್ನು ವಿಸ್ತೃತವಾಗಿ ಈ ಕೃತಿಯಲ್ಲಿ ಬರೆದಿದ್ದಾರೆ. ವ್ಯಾಪಕ ಪ್ರವಾಸ ಮಾಡಿರುವ ಅವರು ಪ್ರವಾಸ ಪ್ರಿಯ. ತೀರ್ಥಸ್ಥಳಗಳಿಗೆ ಹೋಗುವವರಿಗೆ ಉಪಯುಕ್ತ ಮಾಹಿತಿಯನ್ನು ಅವರು ಈ ಕೃತಿಯಲ್ಲಿ ಮೂಡಿಸಿದ್ದಾರೆ. ಇದರಲ್ಲಿ ಪುಣ್ಯ ಸ್ಥಳಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ತಲಕಾಡು, ಸಿಂಗನಲ್ಲೂರು ಕರಿಬಸವೇಶ್ವರ, ಮಾದೇಶ್ವರ ಬೆಟ್ಟ ಮುಂತಾದ ಸ್ಥಳಗಳ ಪರಿಚಯಾತ್ಮಕ ಲೇಖನಗಳಿವೆ. ಈ ಕೃತಿಯ ವಿಶೇಷವೆಂದರೆ ಆಯ್ದುಕೊಂಡ ತಾಣಗಳ ಇತಿಹಾಸ, ನಂಬಿಕೆಗಳು, ಐತಿಹ್ಯ, ಪರಿಸರ ಮುಂತಾದ ವಿವರಗಳನ್ನು ಚೆನ್ನಾಗಿ ಮೂಡಿಸಿದ್ದಾರೆ. ಚಾರಣ ಪ್ರದೇಶಗಳ ಪರಿಚಯ ಮತ್ತು ಭೌಗೋಳಿಕ ಸ್ಥಿತಿಗತಿಗಳ ಬಗ್ಗೆ ಸೂಕ್ಷ್ಮ ವಿವರಗಳು ಓದುಗರಿಗೆ ಲಭ್ಯ. ಎಪ್ಪತ್ತು ಪುಟಗಳಲ್ಲಿ ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿಗಳನ್ನು ಕಟ್ಟಿಕೊಟ್ಟಿರುವುದು ಮಹತ್ವದ ಸಮಾಜಮುಖಿ ಉಪಕ್ರಮವಾಗಿದೆ. ಈ ಪ್ರದೇಶದಲ್ಲಿ ಪ್ರವಾಸ ಹೊರಟವರಿಗೆ ಇದೊಂದು ಸ್ವಯಂ ಪೂರ್ಣ ಮಾರ್ಗದರ್ಶಿ ಕೈಪಿಡಿ. ಪ್ರವಾಸ ಕಥನದ ಲೇಖಕರಾದ ಶ್ರೀ ಕೆಂಪರಾಜು ಅವರು ನಿವೃತ್ತ ಪ್ರಾಂಶುಪಾವರು. ಈಗಾಗಲೇ ಬೇರೆ ಕೃತಿಗಳನ್ನು ರಚಿಸಿರುವ ಇವರಿಗೆ ಪ್ರವಾಸ ಕಥನ ರೂಢಿಸಿದೆ. ಅವರ ಈ ಕೃತಿ ಅವರಿಗೆ ಜನಪ್ರಿಯತೆ ಮತ್ತು ಯಶಸ್ಸನ್ನು ತರಲಿ ಎಂಬ ಹಾರೈಕೆಗಳು.

ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ವಾಮನ್ ರಾವ್ ಬೇಕಲ್.
ಸ್ಥಾಪಕ ಅಧ್ಯಕ್ಷರು ಕನ್ನಡ ಭವನ, ಕಾಸರಗೋಡು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು ಶ್ರೀ ಕ್ಷೇತ್ರಗಳ ದರ್ಶನದ ಈ ಕೃತಿಗೆ ಆಶಯ ನುಡಿಯನ್ನು ಬರೆದು ಕೊಡಿ ಎಂದು ಕೇಳಿದಾಗ ನನಗೆ ಪುಸ್ತಕ ಪ್ರಕಟನೆಯ ತುಂಬಾ ಕೆಲಸಗಳು. ನೊಡಲು ಎರಡು ಸಾಲು ಬರೆಯ ಬೇಕಾದರೆ ಕೃತಿಯನ್ನು ಸಂಪೂರ್ಣ ಓದ ಬೇಕಲ್ಲ. ಓದದೆ ಬರೆಯಲು ಸಾಧ್ಯವಿಲ್ಲ ಓದುವ ಕೆಲಸಕ್ಕೆ ಕೈ ಹಾಕಿದಾಗ, ಧರ್ಮಸ್ಥಳ ಪೂರ್ವ ಇತಿಹಾಸ ಅದರ ಜೊತೆಗೆ ಧರ್ಮಾಧಿಕಾರಿಗಳ ಪಟ್ಟಾಭಿಷೇಕ ಕಾರ್ಯಕ್ರಮದ ಹಿನ್ನಲೆಯನ್ನು ತಿಳಿದು ಕೊಂಡೆ ಅದರ ಜೊತೆಗೆ ಧರ್ಮಸ್ಥಳ ನಾಮಕರಣ ಹೇಗಾಯ್ತು ಧರ್ಮಸ್ಥಳ ಕ್ಷೇತ್ರ ಪರಿಸರ ಬಗ್ಗೆ ಮಾಹಿತಿ , ಶ್ರೀ ಹೆಗ್ಗಡೆಯವರ ಸಲಹೆ ನ್ಯಾಯ ತೀರ್ಮಾನ, ಮಾನವ ಧರ್ಮದ ಪ್ರತೀಕ, ಶ್ರೀ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಹೀಗೆ ಆ ಮಾಹಿತಿಗಳು ತಿಳಿದ ನಂತರ ನನ್ನ ಮತ್ತು ಯೋಜನೆಯ ಸಂಬAಧ, ಶ್ರೀ ಪರಮ ಪವಿತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿ, ಶ್ರೀ ಪರಮ ಪೂಜ್ಯ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ಚರಿತ್ರೆ, ಶ್ರೀ ಕ್ಷೇತ್ರದ ಮಹಿಮೆ, ಶ್ರೀ ಮಾತೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಕೋಲಾ ಮಹರ್ಷಿ, ಶ್ರೀ ಶಂಕರಾಚಾರ್ಯರು, ಓಂ ಶ್ರೀ ಶಕ್ತಿಯೇ ನಮಃ ಸ್ಕಂದಗಿರಿ  (ಪಾರ್ವತಿಬೆಟ್ಟ), ಸ್ಕಂದಗಿರಿ (ಶ್ರೀ ದೇವಿ ಪಾರ್ವತಿಬೆಟ್ಟ), ಶ್ರೀ ಹಿಮದ್ ಗೋಪಾಲಕೃಷ್ಣ ಬೆಟ್ಟ, ಹುಲುಗನಮೊರಡಿ ವೆಂಕಟರಮಣ ಸ್ವಾಮಿ, ೨- ಜನನ ವೃತ್ತಾಂತ, ವ್ಯಾಘ್ರಾನಂದರ ಕೃಪೆ, ದಕ್ಷಿಣದೆಡೆಗೆ, ಪ್ರಭುಲಿಂಗ ಬೆಟ್ಟಕ್ಕೆ ಪಯಣ, ಸಿಂಗನಲ್ಲೂರು ಕರಿಬಸವೇಶ್ವರ, ಬೇವಿನಟ್ಟಿ ಕಾಳಿ ಅಹಂ ಪತನ , ಮುಕದೆಳ್ಳಿ ಮಾರಮ್ಮನಿಗೆ ದರ್ಶನ, ಆನೆ ತಲೆ ದಿಬ್ಬ, ಭಕ್ತ ಸಂಸಾರಿ ಸಂಗಪ್ಪ ತಾರಯ್ಯ ಮತ್ತು ಬಾಲಯ್ಯ, ಕಾರಯ್ಯ, ಬಿಲ್ಲಯ್ಯ, ಇಕ್ಕೇರಿ ದೇವಮ್ಮ (ವಿಷದ ಕಜ್ಜಾಯ), ಜುಂಜೆಗೌಡನಿAದ ದೇವಾಲಯ ನಿರ್ಮಾಣ, ದುಷ್ಠ ಶ್ರವಣಾಸುರನ ಗರ್ವಭಂಗ, ಶಂಕರಪ್ರಿಯಾ ದಂಪತಿಗಳ ಎಣ್ಣೆಮಜ್ಜನ, ಮಾದೇಶ್ವರರ ಲಿಂಗರೂಪ, ಉಪಸಂಹಾರ ಈ ಎಲ್ಲಾ ವಿಷಯವನ್ನು  ಓದುವುದರ ಜೊತೆ ಜೊತೆಗೆ ಆಶಯ ನುಡಿಯನ್ನು ಬರೆಯುವ ಪುಣ್ಯ ಕೆಲಸಕ್ಕೆ ಕಾರಣನಾದೆ ಎನ್ನುವ ಕೃತಾರ್ಥ ಭಾವ ನನ್ನ ಮನದಲ್ಲಿ ಮೂಡಿತು.
ಶುಭವಾಗಲಿ

ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ಪಿ. ವಿ. ಪ್ರದೀಪ್ ಕುಮಾರ್
ಲೇಖಕ, ಕಾದಂಬರಿಕಾರ, ಸಂಘಟಕ, 
ಕಥಾಬಿಂದು ಪ್ರಕಾಶನ ಮಂಗಳೂರು.
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು
ನಾಟಕ ಭಾರ್ಗವ ಕೆಂಪರಾಜು ಅವರ ಕಾಮಧೇನು

Comments (0)




Be the first to comment using the form below.