(JavaScript required to view this email address)
Mangalore

News & Articles

ಕವನ ಮನಸ್ಸಿನಲ್ಲಿ ಮೂಡುವ ಭಾವ ವಿಶೇಷ. ಎಲ್ಲ ಮನುಷ್ಯ ಜೀವಿಗಳಲ್ಲಿ ಒಂದು ಭಾವಲೋಕ ಇರುತ್ತದೆ. ಅವರವರ ಶ್ರಮ ಮತ್ತು ಶ್ರದ್ಧೆಯ ಆಧಾರದ ಮೇಲೆ ಯಶಸ್ಸು ಸಿಗುತ್ತದೆ. ಪ್ರತಿಭೆಯಿದ್ದರಂತೂ ಮೂಡಿ ಬರುವ ಕಾವ್ಯ ಕುಸುಮಗಳು ಸುಂದರವೂ ಪರಿಮಳ ಭರಿತವೂ ಆಗಿರುತ್ತವೆ. ಮನಸ್ಸಿಗೆ ಬಂದ ಭಾವಗಳನ್ನು ಆಗಿಂದಾಗ್ಗೆ ದಾಖಲಿಸಿದರೆ ಸೊಬಗು ಎದ್ದು ಕಾಣುತ್ತದೆ. ಮನಸ್ಸಿನಲ್ಲಿ ಲಹರಿ ಮೂಡಿದಾಗ ಸರಾಗವಾಗಿ ಭಾವಗಳು ಉದ್ಭವಗೊಂಡು ಕಣ್ಣ ಮುಂದೆ ಕುಣಿಯುವಂತೆ ಅನಿಸುತ್ತದೆ. ಅದೇ ಸ್ಪೂರ್ತಿಕಾಲ. ಕಾವ್ಯ ಪ್ರಚೋದನೆಗೆ ಯಾವುದೇ ತಾರತಮ್ಯವಿರುವುದಿಲ್ಲ. ಲಿಂಗ ಭೇದವಾಗಲೀ ವಯೋ ಭೇದವಾಗಲಿ ಇರುವುದಿಲ್ಲ. ತುಡಿತ ಬರುವಾಗ ಸಮಯ ಮಾಡಿಕೊಂಡು ಬರುವ ಭಾವಗಳನ್ನು ದಾಖಲಿಸಿದರೆ ಸುಂದರ ಕವನವಾಗುತ್ತದೆ. ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ. ಬಾಲ್ಯದಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡವರು. ದೀರ್ಘಕಾಲದ ಸೇವೆಯ ಬಳಿಕ ಬ್ಯಾಂಕ್ ಉದ್ಯೋಗ ದಿಂದ ನಿವೃತ್ತಿ ಪಡೆದ ಮೇಲೆ ಬರವಣಿಗೆ ಆರಂಭಿಸಿದರು. ಹಾಗೆ ಬರೆಯತೊಡಗಿ ದವರು ತಮ್ಮ ಭಾವಶುದ್ಧತೆ ಮತ್ತು ವಯೋ ಪ್ರಬುದ್ಧತೆಯಿಂದ ಫ್ರೌಢ ಕವನಗಳನ್ನು ಬರೆಯಲು ಪ್ರಯತ್ನಿಸಿದ್ದಾರೆ. ಈ ಸಂಕಲನದಲ್ಲಿ ಸುಮಾರು ೩೦ ಕವನಗಳಿವೆ. ಒಂದರ0ತಿಲ್ಲ ಇನ್ನೊಂದು. ವಸ್ತು ವಿಶಿಷ್ಟತೆ ಎದ್ದು ಕಾಣುತ್ತದೆ. ಆಧ್ಯಾತ್ಮಿಕತೆ, ದೇಶಪ್ರೇಮ, ಸಮಾನತೆ, ಸೇವಾ ಮನೋಭಾವದಂತಹ ಮಾನವ ಒಳಿತಿನ ಚಿಂತನೆಗಳು ಕವನಗಳಲ್ಲಿ ಹಾಸು ಹೊಕ್ಕಾಗಿವೆ. ಎಲಾ ಕವನಗಳಲ್ಲಿ ನೀತಿ ಬೋಧೆ ಇದ್ದು ಸಮಾಜ ಮುಖಿಯಾಗಿರುವುದು ಕವನಗಳ ಹೆಚ್ಚುಗಾರಿಕೆ ಮತ್ತು ಉಪಯುಕ್ತತೆ. ಮುಂದಿನ ದಿನಗಳಲ್ಲಿ ಅನುಭವ ಜನ್ಯ ಸುಧಾರಣೆಗಳಿಂದ ಇನ್ನೂ ಮೌಲಿಕ ಕೃತಿಗಳು ಸಾಹಿತ್ಯ ಲೋಕಕ್ಕೆ ನೀಡಲಿ ಎಂಬ ಶುಭ ಹಾರೈಕೆಗಳು. 


ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಶುಭಾಶಯಗಳೊಂದಿಗೆ,

ಡಾ.ಕೊಳ್ಚಪ್ಪೆ ಗೋವಿಂದ ಭಟ್
ಕವಿ ಮತ್ತು ಸಾಹಿತಿ, ಮಂಗಳೂರು.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಬದುಕಿನ ಹಲವಾರು ಮಜಲುಗಳಲ್ಲಿ ಮನದೊಳಗೆ ಸುಳಿದಾಡಿದ ವಿಚಾರಗಳಿಗೆ ಒಂದು ಸುಂದರ ರೂಪವನ್ನು ಕೊಟ್ಟು ಕನ್ನಡ ಕವನಗಳ ಮೂಲಕ ಹೊರಹೊಮ್ಮಿಸುವ ಚಿಕ್ಕ ಪ್ರಯತ್ನ ಮಾಡಿದ್ದೇನೆ. ನಾನು ಬರೆದ ಮೊದಲ ಕವನವನ್ನು ಓದಿ ಮೆಚ್ಚಿ ಬೆನ್ನು ತಟ್ಟಿದ ಆತ್ಮೀಯ ಅಭಿಮಾನಿ ಬಳಗದ ಪ್ರೋತ್ಸಾಹ ನನಗೆ ಮತ್ತಷ್ಟು ಹೆಚ್ಚಿನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದೆ. ಸಾಹಿತ್ಯದಲ್ಲಿ ಕೃಷಿ ಮಾಡಿ ಉತ್ತಮ ಗುಣಮಟ್ಟದ ಬರಹಗಳನ್ನು ನೀಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ. ಸಂಚಲನ ಸಂವಹನ ಹೆಸರೇ ಸೂಚಿಸುವಂತೆ ಮನದಲ್ಲಿ ಮೂಡಿದ ಅನೇಕ ವಿಚಾರಧಾರೆಗಳ ಸಂಚಲನವನ್ನು ಓದುಗರಿಗೆ ಬರಹಗಳ ಮೂಲಕ ಸಂವಹನ ಮಾಡುವ ಸಾಹಿತ್ಯ ಬರವಣಿಗೆ. ನಾನು ಬರೆದಿರುವ ಸಾವಿರಾರು ಕವನ, ಚಿತ್ರ ಕವನಗಳಲ್ಲಿ ಕೇವಲ ಮೂವತ್ತು ಕವನಗಳನ್ನು ಈ ಕವನ ಸಂಕಲನದಲ್ಲಿ ಪ್ರಕಟಿಸಿದೆ. ನಮ್ಮ ಸುತ್ತುಮುತ್ತಲು ನಡೆಯುವ ಘಟನೆಗಳು ಮತ್ತು ನಿಸರ್ಗ ಸಂಭವಗಳೇ ನನಗೆ ಈ ಪುಸ್ತಕ ಬರೆಯಲು ಪ್ರೋತ್ಸಾಹಿಸಿವೆ. ನನ್ನ ಕವನ ಸಂಕಲನಕ್ಕೆ ಚೊಕ್ಕದಾದ ಮುನ್ನುಡಿಯನ್ನು ಅಂದವಾಗಿ ಅತಿ ಶೀಘ್ರವಾಗಿ ಬರೆದು ಕೊಟ್ಟ ಡಾ.ಕೊಳ್ಚಪ್ಪೆ ಗೋವಿಂದ ಭಟ್‌ರವರಿಗೆ ಅನಂತಾನAತ ವಂದನೆಗಳು. ಪುಸ್ತಕ ಪ್ರಕಟಣೆ ಮಾಡೋಣವೆಂದು ಪ್ರೇರೇಪಿಸಿದ ಗೆಳತಿ ಜಯಂತಿ ಕನ್ನುಕರೆ, ಮಗಳು ಮೇಘ ಕೃಷ್ಣಮೂರ್ತಿ, ಇವರಿಗೆ ಧನ್ಯವಾದಗಳು. ಅಂದವಾದ ಮುಖಪುಟ ಚಿತ್ರದೊಂದಿಗೆ ಪುಸ್ತಕ ಪ್ರಕಟಣೆ ಕಾರ್ಯವನ್ನು ನಡೆಸಿಕೊಟ್ಟ ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಅವರಿಗೆ ವಂದನೆಗಳು.
“ಸ0ಚಲನ ಸಂವಹನ” ಕವನ ಸಂಕಲನ ನಿಮ್ಮ ಕೈಯ್ಯಲ್ಲಿರಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ವಿನಂತಿಸುತ್ತೇನೆ. ಓದುಗರ ಮತ್ತು ಸಹೃದಯರ ಪ್ರತಿಕ್ರಿಯೆಗಳೇ ಕವಿಗೆ ಸಿಗುವ ಆಶೀರ್ವಾದಗಳು ಎಂದು ನಂಬಿರುವೆನು. 

ಪೂರ್ಣಿಮಭಗವಾನ್, ಬೆಂಗಳೂರು
ಮೊ: 9481200863
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.
ಸಂಚಲನ-ಸ0ವಹನ ಪೂರ್ಣಿಮ ಭಗವಾನ್ ಅವರ ಚೊಚ್ಚಲು ಕವನ ಸಂಕಲನ.

Comment (1)




ಬಆ

ಬಿ ಆರ್ ಮೂರ್ತಿ commented on October 18th, 2023 at 11:41 AM 
ಅಭಿನಂದನೆಗಳು