ಮರಣ ದಂಡನೆಗೆ ಗುರಿಯಾದ ಖೈದಿಯೊಬ್ಬ ನೇಣಿನ ಕುಣಿಕೆಯಿಂದ ಪಾರಾಗುವ ಗುರಿಯಿಂದ ಜೈಲಿನ ಭದ್ರಕೋಟೆಯ ಗೋಡೆಯನ್ನು ಛೇದಿಸಿ ಪರಾರಿಯಾಗುತ್ತಾನೆ. ತನ್ನನ್ನು ನೇಣುಗಂಬವೇರುವಂತೆ ಮಾಡಿದವರ ಮೇಲೆ ಸೇಡು ತೀರಿಸಲು ಪ್ರಾರಂಭಿಸುತ್ತಾನೆ. ಅವನು ಜಯಗಳಿಸಿದನೇ... ಇಲ್ಲವೇ ನೇಣುಗಂಬಕ್ಕೆ ಕೊರಳೊಡ್ಡಿದನೇ...? ಎನ್ನುವುದು ಕೊನೆಯಲ್ಲಿ ತಿಳಿಯುತ್ತದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಕಾದಂಬರಿ ‘ಮರಣ ಶಾಸನ’ ಮಂಗಳ ವಾರಪತ್ರಿಕೆಯಲ್ಲಿ ೫೨ವಾರಗಳ ಕಾಲ ಧಾರಾವಾಹಿಯಾಗಿ ಮೂಡಿ ಬಂದು ಅಪಾರ ಓದುಗರು ಮೆಚ್ಚಿ ಅದ್ಭುತ ಕಾದಂಬರಿ ಎಂದೇ ಹೇಳಿದ್ದಾರೆ.