(JavaScript required to view this email address)
Mangalore

News & Articles

ವಾಮನ ರಾವ್ ಬೇಕಲ್ ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಕೈಂಕರ್ಯಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ. 2001ರಲ್ಲಿ ಸೀತಮ್ಮ ಪುರುಷ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ), ಕನ್ನಡ ಭವನ ಪ್ರಕಾಶನ ಕಾಸರಗೋಡು, ಕನ್ನಡ ಭವನ ಸಾರ್ವಜನಿಕ ವಾಚನಾಲಯ ಅವರ ಸಕ್ರಿಯ ಭಾಗವಹಿಸುವಿಕೆಯಿಂದ ನಡೆಯುವ ಕನ್ನಡಪರ ಸಂಸ್ಥೆಗಳು. ಕಾಸರಗೋಡು ಜಿಲ್ಲೆಗೆ ಆಗಮಿಸುವ ಹೊರನಾಡಿನ ಕನ್ನಡ ಸಾಹಿತಿಗಳು, ಸಾಂಸ್ಕೃತಿಕ ಯಾತ್ರಾರ್ತಿಗಳಿಗೆ ಕನ್ನಡ ಭವನ ಉಚಿತ ವಸತಿ ವ್ಯವಸ್ಥೆ ಒದಗಿಸುತ್ತಿದೆ. 

ಕಳೆದ ಎರಡು ದಶಕಗಳಿಗೂ ದೀರ್ಘಕಾಲ ಇಷ್ಟು ಕನ್ನಡಪರ ಸೇವೆ,ಸಾಮಾಜಿಕ ಮತ್ತು ಧಾರ್ಮಿಕ ಪರ ಸೇವೆಗಳನ್ನು ಯಾವುದೇ ಸಂಘ-ಸಂಸ್ಥೆ, ಸರಕಾರದ ನೆರವಿಲ್ಲದೆ ವಾಮನ ರಾವ್ ಬೇಕಲ್ ಅವರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಜನಪದ ಸಾಧನೆಗಳನ್ನು ಗಮನಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಫೋರ್ಚೂನ್ ಐಟಿಸಿ, ಹೊಸೂರ್ ತಮಿಳುನಾಡು ಈ ಸಂಸ್ಥೆ 30 11 24ರಂದು ಹೊಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೋಶಿಯಲ್ ಸರ್ವಿಸ್ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. 

ಹೊರನಾಡ ಕನ್ನಡಿಗರು ವಾಮನ್ ರಾವ್ ಬೇಕಲ್ ಅವರ ಈ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ 

ಶ್ರೀ ವಾಮನ ರಾವ್ ಬೇಕಲ್ ಅವರಿಗೆ ಗೌರವ ಡಾಕ್ಟರೇಟ್
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ಶ್ರೀ ವಾಮನ ರಾವ್ ಬೇಕಲ್ ಅವರಿಗೆ ಗೌರವ ಡಾಕ್ಟರೇಟ್

Comments (0)




Be the first to comment using the form below.