ಶ್ರೀಯುತ ಶಿವಪ್ರಸಾದ ಕೊಕ್ಕಡ ಇವರು ಶ್ರೀಮತಿ ಮೋಹಿನಿ ಹಾಗೂ ಕೊರಗಪ್ಪ ನಾಯ್ಕ ದಂಪತಿಗಳಿಗೆ 28-01-1982 ರಂದು ಜನಿಸಿದರು. ತಂಗಿಯರು ಲಕ್ಷೀ ಹಾಗೂ ದಿವ್ಯ ತಮ್ಮ ಬಾಲಕೃಷ್ಣ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಬಾಲ್ಯ ಜೀವನ ನಡೆಸಿ 10ನೇ ತರಗತಿ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದರು. ಶಾಲಾ ಕಾಲೇಜು ದಿನಗಳಲ್ಲಿ ನಾಟಕ ನೃತ್ಯ ರೂಪಕ ಯಕ್ಷಗಾನ ಮತ್ತು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹವ್ಯಾಸಿ ಯಕ್ಷಗಾನ ಕಲಾವಿದ ವಿಶ್ವ ತುಳು ಸಮ್ಮೇಳನದಲ್ಲಿ ಏರ್ಪಡಿಸಿದ ಯಕ್ಷಗಾನದ ಬಣ್ಣದ ವೇಷ ಸ್ಪರ್ಧೆಯಲ್ಲಿ ಸ್ಥಾನ ಪಡೆದವರು. 2009ರ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಕರಾವಳಿ ಉತ್ಸವ ಹಾಗೂ ಹಂಪೆ ವಿಜಯನಗರಕ್ಕೆ 500ನೇ ವರ್ಷದ ಸಂಭ್ರಮಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕದಲ್ಲಿ ಭಾಗವಹಿಸಿದರು. ಕರಾವಳಿಯ ಪ್ರತಿಷ್ಠಿತ ಸುದ್ದಿ ವಾಹಿನಿಗಳಾದ ಮಂಗಳೂರಿನ ನಮ್ಮ ಟೀವಿ ಹಾಗೂ ಸ್ಪಂದನಟೀವಿ ಯಲ್ಲಿ ನಿರೂಪಕರಾಗಿ. ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದಾರೆ. ಪುತ್ತೂರಿನ ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘದ ನಿರ್ದೇಶಕರಾಗಿ. ಶ್ರೀ ಶಾರದಾಂಬ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಗವಣೆಗಾರ್ ಕುಟುಂಬದ ಧಾರ್ಮಿಕ ಅನುಷ್ಠಾನ ಅಭಿವೃದ್ಧಿ ಸಾಧನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಸ್ತುತ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕರ್ನಾಟಕ ರಾಜ್ಯದ ಜೊತೆ ಕಾರ್ಯದರ್ಶಿ ಆಗಿದ್ದು ಕರ್ನಾಟಕ ಜನಪದ ಪರಿಷತ್ ಇದರ ಮಂಗಳೂರು ತಾಲೂಕಿನ ಜೊತೆ ಕಾರ್ಯದರ್ಶಿ ಯಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ, ಉದ್ಯೋಗದಲ್ಲಿ ಫಾರ್ಚುನ್ ಫೈನಾನ್ಸ್ ಮಂಗಳೂರು ಇದರ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
6ವರ್ಷದ ಅವಳಿ ಮಕ್ಕಳಾದ ಮಾಸ್ಟರ್ ವೈಭವ್ ಕುಮಾರಿ ವೈಷ್ಣವಿ ಹಾಗೂ ಮಕ್ಕಳ ತಾಯಿ ಮಲ್ಲಿಕಾ ಅವರ ಜೊತೆ ಪುಟ್ಟ ಸಂಸಾರ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಹಲವಾರು ವೇದಿಕೆಯಲ್ಲಿ ಕಾರ್ಯಕ್ರಮ ನಿರೂಪಣೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಷಣ ಕವಿಗೋಷ್ಠಿಗಳಲ್ಲಿ ಭಾಗವಹಿಸುವಿಕೆ ಸಾಹಿತ್ಯ ಪ್ರಕಾರಗಳಾದ ಕವನ, ಚಿತ್ರ-ಕವನ, ಹಾಯ್ಕುಗಳು, ಟಂಕಗಳು, ಮಾತ್ರ ಗಣ ಆಧಾರಿತ ಪ್ರಕಾರಗಳು, ವಿಮರ್ಶೆಗಳು, ಲೇಖನ ಹೀಗೆ ಅನೇಕ ಸಾಹಿತ್ಯದ ಪ್ರಕಾರಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಯಾದ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ಉಡುಪಿಯ ರಾಜಾಂಗಣ ದಲ್ಲಿ ಕಥಾ ಬಿಂದು ಧ್ರುವತಾರೆ, ಹಾಗೂ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆಸಲ್ಪಟ್ಟ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇಲ್ಲಿ ಕನ್ನಡಶ್ರೀ ರಾಜ್ಯಮಟ್ಟದ ಪ್ರಶಸ್ತಿ ನವ ಪರ್ವ ಫೌಂಡೇಶನ್ ಬೆಂಗಳೂರು ನಡೆಸಿದ ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಇದರಲ್ಲಿ ನವ ಪರ್ವ ಸಾಹಿತ್ಯ ರತ್ನ ಪ್ರಶಸ್ತಿ ಸಾಮಾಜಿಕ ಕಳಕಳಿ ಶಿವಪ್ರಸಾದ ರವರ ಗುಣ.
Comments (0)
Post Comment
Report Abuse
Be the first to comment using the form below.