ಸತ್ಯವತಿ ಕೊಳಚಿಪ್ಪು ಅಧ್ಯಕ್ಷತೆಯಲ್ಲಿ ಎನ್ ಎ ಅಬ್ದುಲ್ ಖಾದರ್, ಪುಷ್ಪಪ್ರಸಾದ್ ಉಡುಪಿ, ದೀಪಿಕಾ, ಸರಸ್ವತಿ ಕೋಟೇಶ್ವರ, ಸುಭಾಷಿಣಿ ಚಂದ್ರ, ಅಣ್ಣಪ್ಪ ಜೆಡ್ಡಿನ ಮನೆ, ಸುನೀತಾ ಪ್ರದೀಪ್ ಕುಮಾರ್, ದಯಾನಂದ ಪೆರಾಜೆ, ಜಾನಕಿ ದೇವಿ, ಸುಜಾತ ಹೆಗಡೆ, ಸುಮನ್ ರಾವ್, ಸೌಮ್ಯ ಪಿ ಭಟ್, ಸುನೀತ ನೆಲೆಗದ್ದೆ, ದೇವನೂರು ಅಚ್ಯುತರಾವ್, ಜಯಾನಂದ ಪೆರಾಜೆ, ಜ್ಯೋತಿ ಮಾಳಿ, ಖಾಕಿ ಕವಿ ಮಂಜುನಾಥ್, ಉಷಾ ಪ್ರಕಾಶ್ ಸಾಗರ, ರೂಪ ರಜಪೂತ, ವೀಣಾ ಕಾರಂತ್ ತಮ್ಮ ಕವನ ವಾಚನ ಮಾಡಿದರು. ಅಪೂರ್ವ ಆದರ್ಶ ದಂಪತಿ ರಾಜ್ಯ ಸೌರಭರತ್ನ ಪ್ರಶಸ್ತಿಯನ್ನು ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭವನ ಸಂಸ್ಥೆಯ ಮೂಲಕ ಕನ್ನಡ ಭಾಷೆ, ಸಂಸ್ಕೃತಿಗಳ ನವೋತ್ಥಾನಕ್ಕೆ ದುಡಿಯುತ್ತಿರುವ ವಾಮನ್ ರಾವ್- ಸಂಧ್ಯಾರಾಣಿ ಟೀಚರ್ ದಂಪತಿಗಳಿಗೆ ನೀಡಿ ಪುರಸ್ಕರಿಸಲಾಯಿತು. ಸುಜಾತ ಎಸ್ ಹೆಗಡೆ, ಸುಮಂತ ರಾವ್ ಮಂಡ್ಯ, ಗಾಯತ್ರಮ್ಮ ಶಿವಮೊಗ್ಗ, ಅನಂತ ಕೃಷ್ಣ ನಾಯಕ್, ಜ್ಯೋತಿ ನೇರಕೆ, ರಮೇಶ ಪೂಜಾರಿ, ಕೆ ಜಿ ವೆಂಕಟೇಶ್ ಹರಿದಾಸ ಶ್ರೀ ಜಯಾನಂದ ಕುಮಾರ್, ಡಾ ಚಿ ದೇ ಸೌಮ್ಯ, ಕೆ ಕೃಷ್ಣಪ್ಪ ನಿಂಗಾ ರೆಡ್ಡಿ ಟಿ, ವೀಣಾ ಅಣ್ಣಪ್ಪ ಚೌಗಲ, ಪಿವಿ ಮಲ್ಲಿಕಾರ್ಜುನಯ್ಯ ಮತ್ತು ಷಡಕ್ಷರಿ ಎಚ್ ಪ್ರಶಸ್ತಿಗೆ ಭಾಜನರಾದರು. ಕವಯತ್ರಿ ಪಂಕಜ ರಾಮ ಭಟ್ ಮಾತನಾಡಿ ಕಾವ್ಯ ಪ್ರಯೋಜನವನ್ನು ತಿಳಿಸಿದರು.
ಅಧ್ಯಕ್ಷ ಭಾಷಣ ಮಾಡಿದ ಡಾ. ಶುಭಾ ವಿಷ್ಣು ಸಭಾಹಿತ ಅವರು ಕುವೆಂಪು ಅವರ ಸಾಹಿತ್ಯ ಸೇವೆಯನ್ನು ನೆನಪಿಸಿಕೊಂಡು ದಿನಗಳಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸುವಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
Comments (0)
Post Comment
Report Abuse
Be the first to comment using the form below.