ಚಾಮರಾಜಪೇಟೆ: ಕಥಾಬಿಂದು ಸಾಂಸ್ಕೃತಿಕ ಸಾಹಿತ್ಯ ವೇದಿಕೆ (ರಿ) ಮಂಗಳೂರು, ಸಮೃದ್ಧಿ ಫೌಂಡೇಶನ್ (ರಿ) ಕೊಮ್ಮಘಟ್ಟ ಇವರ ಸಂಯುಕ್ತ ಸಹಕಾರದಲ್ಲಿ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇಲ್ಲಿ ನೆರವೇರಿದಂತಹ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ದಿನಾಂಕ 22-02-2022 ಭಾನುವಾರದಂದು ದರ್ಶಿನಿ ಪ್ರಸಾದ್ ರವರ ಚೊಚ್ಚಲ ಕವನ ಸಂಕಲನ ಮನದನಿಯ ಚಿತ್ತಾರ ಲೋಕಾರ್ಪಣೆಗೊಂಡಿತು.
ಮನದನಿಯ ಚಿತ್ತಾರ ಕವನ ಸಂಕಲನದಲ್ಲಿ ಸುಮಾರು 94 ಕವನಗಳಿದ್ದು ಬೇರೆಬೇರೆ ಭಾವದ ಕವನಗಳನ್ನು. ಕರುನಾಡ ಚಿತ್ತಾರ, ಪ್ರೇಮ ಚಿತ್ತಾರ, ವಾತ್ಸಲ್ಯ ಚಿತ್ತಾರ, ಹಾಸ್ಯ ಚಿತ್ತಾರ, ಪರಿಸರ ಚಿತ್ತಾರ, ಜಾನಪದ ಚಿತ್ತಾರ, ಜಡೆ ಸಾಲು ಚಿತ್ತಾರ, ಭಕ್ತಿ ಚಿತ್ತಾರ, ಜೀವನ ಚಿತ್ತಾರ, ಹೀಗೆ ಒಂಬತ್ತು ವಿಭಾಗಗಳಾಗಿ ಮಾಡಿ ಒಂದು ವಿಭಿನ್ನವಾದ ಕವನ ಸಂಕಲನವಾಗಿ ಹೊರತಂದಿದ್ದಾರೆ.
ಪ್ರತಿ ಚಿತ್ತಾರದ ಆರಂಭದಲ್ಲಿ ತಮ್ಮ ಆತ್ಮೀಯರಿಂದ ಅಮೂಲ್ಯ ಅನಿಸಿಕೆಗಳನ್ನು ಸಂಗ್ರಹಿಸಿ ಕವನಸಂಕಲನದ ಪುಟವಾಗಿಸಿದ್ದಾರೆ. ದರ್ಶಿನಿ ಪ್ರಸಾದ್ ರವರ ತಾಯಿ ಕಮಲಮ್ಮ ಸಣ್ಣಪ್ಪಗೌಡ ರವರು ಕೃತಿಯನ್ನು ಬಿಡುಗಡೆ ಮಾಡಿದರು. ಕವನ ಸಂಕಲನದ ಮುನ್ನುಡಿ ಬರಹಗಾರರಾದ ಎಂ.ಎಲ್. ಚೆನ್ನೆ ಗೌಡರು ಸಾಹಿತಿಗಳು, ಹಾಸನ, ಇವರು ಕೃತಿಯನ್ನು ಅದ್ಭುತವಾಗಿ ವಿಮರ್ಶೆ ಮಾಡಿದರು. ಹಾಗೂ ದರ್ಶಿನಿ ಪ್ರಸಾದ್ ರವರ ಪತಿ ರಘು ಪ್ರಸಾದ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಧಾ ಕಂದಕೂರ ನಿರೂಪಿಸಿದರು. ಅಧ್ಯಕ್ಷತೆ ಸಿದ್ದಲಿಂಗಯ್ಯ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ (ರಿ) ಭದ್ರಾವತಿ ವಹಿಸಿದ್ದರೆ, ಉದ್ಘಾಟನೆ ಕೆ. ರವೀಂದ್ರಶೆಟ್ಟಿ ಉಳಿದೊಟ್ಟು ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ ಇವರು ನೆರವೇರಿಸಿದರು.
ಪ್ರಸ್ತಾವನೆಯನ್ನು ಪಿ.ವಿ. ಪ್ರದೀಪ್ ಕುಮಾರ್, ಖ್ಯಾತ ಲೇಖಕ ಕಾದಂಬರಿಕಾರರು ಹಾಗೂ ರುದ್ರಾರಾಧ್ಯ, ಸಮೃದ್ಧಿ ಫೌಂಡೇಶನ್ (ರಿ) ಅವರು ವಂದನಾರ್ಪಣೆ ಗೈದರು.
Comments (0)
Post Comment
Report Abuse
Be the first to comment using the form below.