(JavaScript required to view this email address)
Mangalore

News & Articles

ಮಂಗಳೂರು ನವೆಂಬರ್ 1
ಕರ್ನಾಟಕ ರಕ್ಷಣಾ ವೇದಿಕೆ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಂಗಳೂರಿನ ಲೇಖಕರಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ಇಂದು ಸಂಜೆ 6:00ಗೆ ಪ್ರಧಾನ ಮಾಡಲಾಗಿದೆ.
ಮೂಲತ: ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ಇವರು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.  35 ವರ್ಷ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ  ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ. 16 ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ನೆಲಸಂಪಿಗೆ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ 2020ರ ಶ್ರೀ ಕೆ ವಾಸುದೇವಾಚಾರ್ಯ ದತ್ತಿ ಪ್ರಶಸ್ತಿ ದೊರಕಿದೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಸುಮಾರು 200 ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಕಥಾಬಿಂದು ಪ್ರಕಾಶನ ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಸ್ಪರ್ಧಾತ್ಮಕ ಬೆಲೆಯಲ್ಲಿ ಪುಸ್ತಕ ಪ್ರಕಟಣೆಗೆ ಕಳೆದ ತಿಂಗಳು ಪ್ರಕಟಣೆ ಹೊರಡಿಸಿತು. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದುದರಿಂದ 50 ಕೃತಿಗಳನ್ನು ಮಾತ್ರ ಪ್ರಕಟಣೆಗೆ ಆಯ್ದುಕೊಳ್ಳಲಾಯಿತು. ನಾವು ಸಮಯಕ್ಕೆ ಪುಸ್ತಕಗಳನ್ನು ಪ್ರಕಟಿಸಿ ಅಕ್ಟೋಬರ್ 29ಕ್ಕೆ ಪುಸ್ತಕ ಬಿಡುಗಡೆ ಮಾಡಿ ನಿಮ್ಮ ವಿಶ್ವಾಸಕ್ಕೆ ಪಾತ್ರರಾಗಿದ್ದೇವೆ. ಕಳೆದ ಬಾರಿ ನಿರಾಶೆಗೊಂಡ ಕವಿಗಳಿಗೆ ಈಗ ಇನ್ನೊಂದು ಅವಕಾಶ ಒದಗಿ ಬಂದಿದೆ. ಕವಿಗಳ ಬೇಡಿಕೆಯನ್ನು ಗಮನದಲ್ಲಿರಿಸಿ ಈ ಕೆಳಗಿನ ಎರಡು ಯೋಜನೆಗಳನ್ನು ಪ್ರಕಟಿಸುತ್ತಿದ್ದೇನೆ
ಯೋಜನೆ 1
30 ಪುಟಗಳ ಸೆಂಟರ್ ಪಿನ್ನಿಂಗ್ ಪುಸ್ತಕ 20 ಪ್ರತಿಗಳು 
ಒಟ್ಟು ಶುಲ್ಕ ರೂ 3500/-
ಯೋಜನೆ 2
56 ಪುಟಗಳ ಪ್ರೊಫೆಷನಲ್ ಬೈಂಡಿಂಗ್ ಪುಸ್ತಕ ಪ್ರತಿಗಳು 50
ಒಟ್ಟು ಶುಲ್ಕ ರೂ 6,000/-
ಎರಡೂ ಯೋಜನೆಗಳಲ್ಲಿ ನಮೂದಿಸಿದ ಶುಲ್ಕ ಕವರ್ ಪೇಜ್ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಸನ್ಮಾನದ ಖರ್ಚು ಸೇರಿದೆ.
ಎರಡು ಯೋಜನೆಗಳಿಗೆ ಹಸ್ತಪ್ರತಿಯನ್ನು  ಟೈಪ್ ಮಾಡಿ,  ಕವನಗಳಿಗೆ ಮುನ್ನುಡಿ, ಆಶಯ ನುಡಿ ಮತ್ತು ಬೆನ್ನುಡಿಯ ಜೊತೆಗೆ ಪ್ರೂಫ್ ಓದಿ ಸರಿ ಮಾಡಿದ ಕರಡನ್ನು ಕಳಿಸಲು ಕೊನೆಯ ದಿನಾಂಕ 30.11.23
ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು.
ಮೊಬೈಲ್ ಸಂಖ್ಯೆ 9341410153
ಕಥಾಬಿಂದು ಪ್ರಕಾಶನ ಮಂಗಳೂರು
ಕವನಗಳನ್ನು ಒಂದೇ ಫೈಲ್ ನಲ್ಲಿ ಜೋಡಿಸಿ ಕಳಿಸಬೇಕಾದ ವಾಟ್ಸಾಪ್ ನಂಬರ್ 9341410153




ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಪಿ.ವಿ. ಪ್ರದೀಪ್ ಕುಮಾರ್
ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Comments (0)




Be the first to comment using the form below.