ಪರಶುರಾಮ ಕ್ಷೇತ್ರ ದಿವ್ಯ ಮಯ್ಯ ಅವರ ಕೃತಿ ಅನಾವರಣ
ಕಥಾಬಿಂದು ಸಾಹಿತ್ಯ ಸಮ್ಮೇಳನದಲ್ಲಿ ದಿವ್ಯ ಮಯ್ಯ ಅವರ ಕೃತಿ
ಪರಶುರಾಮ ಕ್ಷೇತ್ರ ಕಥಾಬಿಂದು ಪ್ರಕಾಶನದ ಪ್ರಕಟಣೆಗೊಂಡು
ಬಿಡುಗಡೆಗೊಳ್ಳಲಿದೆ ಎಂದು ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪಿ. ವಿ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಪರಶುರಾಮ ಕ್ಷೇತ್ರ ಹೆಸರೇ ಸೂಚಿಸುವಂತೆ ಇದು ದಕ್ಷಿಣಕನ್ನಡ ಜಿಲ್ಲೆಯ ಕರಾವಳಿಯ ಭಾಗವಾದ ತುಳುನಾಡಿನ ಕುರಿತು ಪೌರಾಣಿಕ ಹಿನ್ನಲೆಯಲ್ಲಿ ಬರೆದಂತಹ ಕೃತಿ. ತುಳುನಾಡ ಜನರ ಆಚರಣೆಗಳು, ಸಂಸ್ಕೃತಿ ಧಾರ್ಮಿಕ ನಂಬಿಕೆಗಳ ಬಗೆಗಿನ ಮಾಹಿತಿಗಳನ್ನು ಒಳಗೊಂಡ ಕೃತಿ.
ನನಗೆ ತಿಳಿದ ಮಟ್ಟಿಗೆ ತುಳುನಾಡ ಕುರಿತು ನನ್ನಯ ಅನಿಸಿಕೆಯನ್ನು ಈ ಕೃತಿಯಲ್ಲಿ ಬಿಂಬಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಕೃತಿಯನ್ನು ಓದಿದ ಮನಸ್ಸುಗಳ ಆಲೋಚನೆ, ಬೆಳೆದಂತಹ ಪರಿಸರಕ್ಕೆ ಅನುಗುಣವಾಗಿ ಈ ವಸ್ತುವಿಷಯದ ಬಗೆಗಿನ ಅನಿಸಿಕೆ ಅವಲಂಬಿಸಿರುತ್ತದೆ ಎಂಬುದು ನನ್ನಯ ಅನಿಸಿಕೆ.
ಇಲ್ಲಿ ಅನೇಕ ವಿಷಯಗಳನ್ನು ಪೌರಾಣಿಕ ಹಿನ್ನಲೆಯನ್ನು ಆಧರಿಸಿ ನಾನು ಬರೆದಿರುವೆ. ಹಿರಿಯರು ಪಾಲಿಸಿಕೊಂಡು ಬಂದAತಹ ಸಂಸ್ಕೃತಿ ಸಂಪ್ರದಾಯ, ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಯು ಇರಬಹುದು. ಇಲ್ಲಿ ಬರೆದ ಪ್ರತಿಯೊಂದು ವಿಷಯವು ಕೇವಲ ನನ್ನ ವಿಚಾರಗಳು ಮಾತ್ರವಲ್ಲ. ನನ್ನ ಅನುಭವಗಳ ಜೊತೆಗೆ ಕೆಲವೊಂದು ಲೇಖನ, ಪುಸ್ತಕಗಳನ್ನು ಓದಿ, ಅಗತ್ಯವಿದ್ದ ಅಂಶಗಳನ್ನು ನನ್ನ ಕೃತಿಯಲ್ಲಿ ಅಳವಡಿಸಿದ್ದೇನೆ. ಪರಶುರಾಮ ಕ್ಷೇತ್ರದ ಕುರಿತು ಪೌರಾಣಿಕ ಮಾಹಿತಿಯನ್ನು ನನ್ನ ತಂದೆಯೇ ನನಗೆ ತಿಳಿಸಿಕೊಟ್ಟಿರುವರು. ಅನೇಕ ವಿಚಾರಧಾರೆಯನ್ನು ತಿಳಿಸಿದ ನನ್ನ ತಂದೆ- ತಾಯಿಯವರಿಗೆ ನನ್ನಯ ಮನದಾಳದ ಕೃತಜ್ಞತೆಗಳು. ಹಾಗೆಯೇ ಇನ್ನು ತುಳುನಾಡ ಕುರಿತು ವರ್ಣಿಸ ಹೊರಟಾಗ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ನಾಗಬೆರ್ಮ ಕೃತಿಯಿಂದ ಕೆಲವು ವಿಷಯಗಳನ್ನು ಆಯ್ದು ಬರೆದಿರುವೆ. ಹಾಗೆಯೇ ತುಳುನಾಡ ದೈವಗಳ ಬಗೆಗೆ ವಾರ್ತಾ ಪತ್ರಿಕೆಯಲ್ಲಿ ಬಂದAತಹ ಲೇಖನದಿಂದ ಸೂಕ್ತ ವಿಷಯವನ್ನು ಆಯ್ದು ಬರೆದಿರುವೆ. ಜಾತ್ರೆಯ ಸಮಯದಲ್ಲಿ ನಡೆಯುವ ಬಟ್ಟಲುಕಾಣಿಕೆಯ ಕುರಿತು ಫೇಸ್ ಬುಕ್ನಲ್ಲಿ ಪ್ರಕಟವಾದ ಲೇಖನದಿಂದ ಒಂದಿಷ್ಟು ಅಂಶವನ್ನು ಅರಿತು ಬರೆದ ವಿಷಯಗಳು ಇವೆ. ಇನ್ನು ವಿಷಯದ ಮಧ್ಯದಲ್ಲಿ ಸೂಕ್ತವೆನಿಸುವ ಕೆಲವೊಂದು ಚಿತ್ರಗಳನ್ನು ಅಂತರ್ಜಾಲದಿAದ ಸಂಗ್ರಹಿಸಿ, ವಿಷಯಕ್ಕೆ ಸಂಬAಧಿಸಿದ,ಸೂಕ್ತವೆನಿಸಿದ ಚಿತ್ರವನ್ನು ಕೃತಿಯಲ್ಲಿ ಬಳಸಿರುವೆನು. ತುಳುಲಿಪಿಯಲ್ಲಿ ಪುಸ್ತಕದ ಹೆಸರನ್ನು ಬರೆಯಲು ಸಹಕರಿಸಿದವರು ಖ್ಯಾತ ಪತ್ರಕರ್ತ ರಾದ ಶೇಖರ್ ಸರ್ ಇವರು. ಈ ಕೃತಿಯನ್ನು ಬರೆಯಲು ಪರೋಕ್ಷವಾಗಿ ಸಹಕರಿಸಿದ ನಿಮಗೆಲ್ಲರಿಗೂ ನನ್ನ ಮನದಾಳದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹೀಗೆ ಪರಶುರಾಮ ಕ್ಷೇತ್ರದ ಬಗ್ಗೆ ನನಗೆ ತಿಳಿದಿರುವ ಕೆಲವೊಂದು ಮಾಹಿತಿ ಜೊತೆಗೆ ಬಲ್ಲವರಿಂದ ಕೇಳಿ ತಿಳಿದು, ಕೃತಿ, ಲೇಖನಗಳನ್ನು ಓದಿ ತಿಳಿದು ನನಗೆ ತಿಳಿದಿರುವ ಅಲ್ಪ ಸ್ವಲ್ಪ ಜ್ಞಾನದೊಂದಿಗೆ ತಿಳಿದ ಕೆಲವು ವಿಷಯಗಳನ್ನು ಪೌರಾಣಿಕ ದೃಷ್ಟಿಕೋನದ ಅಧಾರದಲ್ಲಿ ಬರೆದಂತಹ ಕೃತಿ ಪರಶುರಾಮ ಕ್ಷೇತ್ರ ! ಈ ಪುಸ್ತಕಕ್ಕೆ ಚಂದದ ಮುಖಪುಟವನ್ನು ವಿನ್ಯಾಸ ಮಾಡಿ ಈ ಪುಸ್ತಕವನ್ನು ಬಿಡುಗಡೆಗೊಳಿಸುತ್ತಿರುವ ಕಥಾಬಿಂದು ಪ್ರಕಾಶನದ ರೂವಾರಿ ಆದಂತಹ ಶ್ರೀ ಪಿ. ವಿ ಪ್ರದೀಪ್ ಕುಮಾರ್ ಇವರಿಗೆ ನನ್ನ ಮನದಾಳದ ಕೃತಜ್ಞತೆಗಳು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದು ತುಳುನಾಡಿನ ಕುರಿತಾಗಿ ಅಲ್ಪ ಸ್ವಲ್ಪ ಜ್ಞಾನವನ್ನು ಸೇರಿಸಿ ಬರೆದ ಪರಶುರಾಮ ಕ್ಷೇತ್ರ ಕೃತಿಯ ಬಗೆಗೆ ನನಗೆ ಹೆಮ್ಮೆ ಇದೆ. ಈ ಕೃತಿಯನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ಇ ಮೇಲ್ ಮೂಲಕ ತಪ್ಪದೇ ತಿಳಿಸಿ ನನ್ನ ಇ ಮೇಲ್
ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ
ದಿವ್ಯ ಮಯ್ಯ
Comments (0)
Post Comment
Report Abuse
Be the first to comment using the form below.