ಪ್ರವೃತ್ತಿಯಲ್ಲಿ ಕವಿಸಾಹಿತಿ, ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಹಾ.ಮ.ಸತೀಶರು ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕೈಯಾಡಿಸಿದವರು.ಈಗಾಗಲೇ ಎಂಟು ಕೃತಿಗಳನ್ನು ಲೋಕಾರ್ಪಣೆ ಗೊಳಿಸಿದವರು.ಇದೀಗ ಮಕ್ಕಳಿಗಾಗಿ ಹೊರತರಲು ಯೋಚಿಸಿ ಹೊಳೆವ ನಕ್ಷತ್ರಗಳು ಮಕ್ಕಳ ಕವನ ಸಂಕಲನವನ್ನು ಮಂಗಳೂರಿನ ಕಥಾಬಿಂದು ಪ್ರಕಾಶನದ ಮಾನ್ಯ ಪಿ.ವಿ.ಪ್ರದೀಪ್ ಕುಮಾರ್ ಮುಂದಾಳತ್ವದಲ್ಲಿ ಹೊರಟ ಶ್ರೀ ಹಾ.ಮ.ಸತೀಶರ ಸಂಕಲನಕ್ಕೆ ಮುನ್ನುಡಿ ಮುಖೇನ ಎರಡು ಮಾತುಗಳನ್ನು ಬರೆಯಲು ಸಂತಸಪಡುತ್ತೇನೆ. ಬಾಲ್ಯದಿಂದಲೇ ತೋಚಿದ್ದನ್ನು ಗೀಚುವ ಸ್ವಭಾವದ ಸತೀಶರು ವಯಸ್ಸಿನಲ್ಲಿ ಸಣ್ಣವರಾದರೂ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರು.ನಟನೆ,ಉತ್ತಮ ಹಾಡುಗಾರ,ನೇರ ಮಾತಿನ ಸರಳ ವ್ಯಕ್ತಿತ್ವ ಇವರದು.ಬಂಟ್ವಾಳ ತಾಲೂಕಿನಲ್ಲಿ ಚುಟುಕು ಪ್ರಕಾರಕ್ಕೆ ಹೊಸ ಆಯಾಮ ನೀಡಿ ಯಶಸ್ವಿಯಾದವರು.ಮಕ್ಕಳ ಗೀತೆಯಲ್ಲಿ ಪದ ಲಾಲಿತ್ಯ,ರಾಗ,ಅವಶ್ಯಕವಿರುವಲ್ಲಿ ಪ್ರಾಸ,ಅಭಿನಯಕ್ಕೆ ಸೈ ಎನುವಂತೆ ಸರಳ ಪದಗೊಂಚಲುಗಳ ಹೆಣಿಗೆಯಿಂದ ಸಾಲುಗಳನ್ನು ಅಲಂಕರಿಸಿದ್ದಾರೆ.
ಅಂತಹ ಮಕ್ಕಳ ಕವನಗಳಲ್ಲಿ ಒಂದು ಉದಾಹರಣೆ ಕೊಡುತ್ತಿದ್ದರೆ ,
ಆಡಿನ ಮರಿಯೆ ಆಡಿನ ಮರಿಯೆ
ಹೊರಟೆ ನೀನು ಎಲ್ಲಿಗೆ ?
ಹುಲ್ಲ ಹುಡುಕಿ ಹೊರಟೆ ನಾನು
ಬಂದೆ ಈಗ ಇಲ್ಲಿಗೆ
Comments (0)
Post Comment
Report Abuse
Be the first to comment using the form below.