(JavaScript required to view this email address)
Mangalore

News & Articles

ನಮ್ಮ ಮಧ್ಯೆದ ಹಿರಿಯ ಗಜಲ್ ಲೇಖಕ ವೃತ್ತಿಯಿಂದ ವೈದ್ಯರು- ಶಸ್ತ್ರತಜ್ಞರಾದ ಡಾ.ಸುರೇಶ ನೆಗಳಗುಳಿ ಅವರು ಈಗಾಗಲೇ ಅನೇಕ ಕೃತಿಗಳನ್ನು ಪ್ರಕಟಿಸುವ ಮೂಲಕ ಕರಾವಳಿ ಕರ್ನಾಟಕದಲ್ಲಿ ಜನಪ್ರಿಯರು. ಎಲ್ಲಾ ಗಜಲ್ ಓದಿದೆ.ಮೆಲ್ನೋಟಕ್ಕೆ ಅಷ್ಟೇನು ತಟ್ಟದೆ ಇದ್ದ ಇವರ ಗಜಲ್ ಗಳು ಬಾಷೆಯ ಸಂವಹನದ ಕಾರಣದಿಂದ ಅರ್ಥವಾಗದೇ ಹೋದದ್ದೇ ಹೆಚ್ಚು.ಆ ಕಾರಣದಿಂದಾಗಿ ಪರಿಪೂರ್ಣ ಮನಸುಕೊಟ್ಟು ಓದಿದಾಗ ಮಾತ್ರ ಇವರ ಗಜಲ್ ಗಳ ಆಳ ಅಗಲ ಅರ್ಥವಾಗಬಲ್ಲವು.ಈ ಸಾಲು ಗಮನಿಸಿ,

*ಕಡಲ ನೀರು ಎಂದಾದರೂ ಬತ್ತುವುದೇ*
*ಒಡಲಾರುವ ಅಪೇಕ್ಷೆ ನನಗಿರಲಿಲ್ಲ*

ಗಜಲ್ ಬಯಸುವ ಮಧುರಾನುಭೂತಿಗಳಾದ ಪ್ರೀತಿ, ಪ್ರೇಮ, ಪ್ರಣಯ, ಅನುರಾಗ, ವಿರಹ, ನೋವು, ವಿಷಾದ ಹೀಗೆ ಏನೆಲ್ಲ ತಮ್ಮ ಲೌಕಿಕದ ಅನುಭವಗಳನ್ನು ಅಲೌಕಿಕಗೊಳಿಸಿ ಅನುಭಾವದ ನೆಲೆಗೆ ತಲುಪಿಸುವ ಇವರ ಗಜಲ್ ಗಳು ಅಪಾರ ಚಿಂತನೆಗೆ ಹಚ್ಚುತ್ತವೆ. ಮನಕೊಟ್ಟು ಓದಬೇಕಷ್ಟೇ.


ಡಾ.ಸುರೇಶ ನೆಗಳಗುಳಿ
*ಬೇಕುಗಳು ಎಂದಿಗೂ ಹಾಕಿರವು ಬೇಲಿಯನು*
*ಈಶ'ನಾಣತಿಯನು ಮೀರುವುದು ಸಾಧ್ಯವೇ?*

*ಕದ ಹಾಕಿದ ಮಾತ್ರಕೆ ನೇಸರ ಸೋಲಲೆಂತು ಸಾಧ್ಯ*
*ಬದಿಯ ಬದುವುಗಳಲ್ಲಿ ಬರಿದೇ ಪಟ್ಟ ಭಾಧೆಗಳೆಷ್ಟೋ*
ಇವು ಅಪಾರ ಅರ್ಥವ್ಯಾಪ್ತಿ ಹೊಂದಿವೆ.ಅನುಭವಿಸಿದವರಿಗೆ ಅರ್ಥವಾದೀತು.


ಡಾ.ಸುರೇಶ ನೆಗಳಗುಳಿ
*ಮುಡಿದ ಮಲ್ಲಿಗೆ ಹೂವು ಬಾಡುತಿವೆ ನೋಡು*
*ನಡೆವ ಮನಸಿನ ಗತಿಯು ಕಾಡುತಿದೆ ನೋಡು* 
...ಹೀಗೆ ಸೂಕ್ಷ್ಮಾತಿಸೂಕ್ಷ್ಮವಾಗಿ ಮನಸ್ಸಿಗೆ ತಟ್ಟುವ ಗಜಲ್ ಗಳು ಕೃತಿಯುದ್ದಕ್ಕೂ ಇವೆ.
*ಗಗನಕೆಲ್ಲಿಯ ಮುನಿಸು ಧರೆಯ ತೋಯಿಸಲು ಇಳಿಸಿ ವರ್ಷಧಾರೆ*
*ಸುರೇಶನ ಮೈಯ ತುಂಬಾ ಪರಕಾಯ ಪ್ರವೇಶ ಮಾಡಿದವಳು ಎಲ್ಲಿ ಹೋದಳು*
ಹೀಗೆಂದು ಹೋದವಳಿಗಾಗಿಯೇ ನಮ್ಮಂತೆ ಚಿಂತಿಸುತ್ತಾ ಕೂಡದೇ...ತಮ್ಮ ಸುತ್ತಲಿನ ಎಲ್ಲ ವಿಷಯಗಳ ಕುರಿತು ಅವರು ಗಜಲ್ ಆಗಿಸಿದ್ದು ಅವರ ಸ್ಥಿತ್ ಪ್ರಜ್ಞತೆಯನ್ನು,ಅವರ ಗಟ್ಟಿತನವನ್ನು ತೋರುತ್ತದೆ. ಅದಕ್ಕೆ ಅವರದೇ ಆದ ಓದಿನ ವೈದ್ಯಕೀಯ ಕಾರಣವು ಇರಬಹುದೇನೋ. ದೇಹದಲ್ಲಿ ಎಲುಬು, ಕರುಳು, ಮಾಂಸಗಳಿರುವ0ತೆ ಹೃದಯ ಹಾಗೂ ಮನಸು ಸಹ ಮಾಂಸ ಮಜ್ಜನದಿಂದ ನಿರ್ಮಾಣಗೊಂಡ ಅಂತಹದೇ ಒಂದು ಎಂಬುದು ಬಲ್ಲಿದರೇನೋ.ಆ ಕಾರಣದಿಂದ ಅವರು ಒಂದು *ಮಾನಸಿಕ ದೂರ* ದಲ್ಲಿ ನಿಂತು   ತಮ್ಮ ಗಜಲ್ ಕಾವ್ಯಗಳನ್ನು ರಚಿಸಿದ್ದಾರೆ.ಇದು ಭಾವುಕ ಜೀವಿಗಳಿಗೆ ಕಷ್ಟ.ಈ ಹಿರಿಯ ಜೀವಿ *ಡಾ.ಸುರೇಶ ನೆಗಳಗುಳಿ* ಅವರಿಗೆ ಸಾಹಿತ್ಯ ಲೋಕ ಗುರ್ತಿಸಲಿ.ಅವರ ಬರವಣಿಗೆಗೆ ಒಂದು ಮಾನ್ಯತೆ ಸಿಗಲೆಂದು ಮನದುಂಬಿ ಹಾರೈಸುವೆ.
*ಸಿದ್ಧರಾಮ ಹೊನ್ಕಲ್*
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಯಾದಗಿರಿ ಜಿಲ್ಲೆ
ಡಾ.ಸುರೇಶ ನೆಗಳಗುಳಿ
ಡಾ.ಸುರೇಶ ನೆಗಳಗುಳಿ
ಡಾ.ಸುರೇಶ ನೆಗಳಗುಳಿ
ಡಾ.ಸುರೇಶ ನೆಗಳಗುಳಿ

Comment (1)




DS

Dr Suresh Negalaguli commented on August 2nd, 2023 at 8:32 AM 
ಕಥಾಬಿಂದು ನಾಮವಾದರೆ ಕಥಾಸಿಂಧು ದೃಷ್ಟಿಗೋಚರ ಇದು ಪಿ.ವಿ.ಪ್ರದೀಪ ಕುಮಾರರ ಸಾಧಕ ರೂಪ. ಅದ್ವಿತೀಯ ಕಾದಂಬರಿ‌‌ ಕಾರ ,ಅಸಾಮಾನ್ಯ ಪ್ರಕಾಶಕ ಇವರು. ಇವರ ಕಾರ್ಯ ಕಾರಣಗಳು ಅನಂತವಾಗಲಿ ಎಂಬ ಹರಕೆ ನನ್ನದು.ಸರ್ವಕರ್ಮ ಯಶವಕೋರುವೆ ನಾನು.ಸುರೇಶ ನೆಗಳಗುಳಿ