(JavaScript required to view this email address)
Mangalore

News & Articles

ಡಾ. ಆರ್.ಎಸ್. ರವೀಂದ್ರ (ರಾಸರ), ಇವರು ಮೂಲತಃ ರಸಾಯನಶಾಸ್ತ್ರ ಸಹ ಪ್ರಾಧ್ಯಾಪಕರು, ಆದರೂ ಕನ್ನಡ ಭಾಷೆಯ ಬಗ್ಗೆ ಇವರು ಬೆಳೆಸಿಕೊಂಡಿರುವ ಒಲವು-ಪ್ರೀತಿ ಜೊತೆಗೆ ಇವರ ಈವರೆಗಿನ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುತ್ತದೆ. 

‘ಕಾವ್ಯಬಿಂಬ’ ಇವರ ಮೂರನೇ ಕವನ ಸಂಕಲನ. ಮಾನವೀಯ ಮೌಲ್ಯಗಳು ತೆಳುವಾಗುತ್ತಿರುವ ಈ ಕಾಲ ಘಟ್ಟದಲ್ಲಿ ಅವ್ವ, ಅಪ್ಪ, ಮಗಳು, ಮಡದಿ ಇವರೊಂದಿಗಿನ ಸುಮಧುರ ಬಾಂಧವ್ಯವನ್ನು ಈ ಕವನ ಸಂಕಲನದಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಪರಿಸರ, ನಾಡು-ನುಡಿ ಬಗ್ಗೆಯೂ ತಮ್ಮ ಕಾವ್ಯ ಪ್ರತಿಭೆಯನ್ನು ಮೂಡಿಸಿದ್ದಾರೆ.

ಡಾ. ರವೀಂದ್ರರವರು ಕೇವಲ ಕವನ-ಕಾವ್ಯಗಳಿಗಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವಿಜ್ಞಾನ ಕುರಿತಾದ ಲೇಖನಗಳನ್ನು ಸಹ ಬರೆದು ‘ಸೈ’ ಎನಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇವರ ಕನ್ನಡದ ಸೇವೆ ನಿರಂತರವಾಗಿ ಸಾಗಲಿ ಮತ್ತು ಆ ಮೂಲಕ ನಮ್ಮ ನಾಡಿಗೆ ಒಬ್ಬ ಉತ್ತಮ ಕವಿ, ವಿಜ್ಞಾನ ಲೇಖಕರೊಬ್ಬರ ಸೇರ್ಪಡೆಯಾಗಲಿ ಎಂದು ಬಯಸಿ ಡಾ. ರವೀಂದ್ರ ರವರಿಗೆ ನನ್ನ ಅಭಿನಂದನೆಗಳನ್ನು ಹೇಳಬಯಸುತ್ತೇನೆ.

ಡಾ. ನಾಗಭೂಷಣ-

ಭೀಮ ಸಮುದ್ರ

ರಸಾಯನಶಾಸ್ತ್ರ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ-ಬೆಂಗಳೂರು  

ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’

ಡಾ. ಆರ್.ಎಸ್. ರವೀಂದ್ರ (ರಾಸರ) ರವರುಬೆಂಗಳೂರಿನ ರಾಜಾನುಕುಂಟೆ ಸಮೀಪ ಇರುವ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ರವೀಂದ್ರ ಅವರು ಬೆಂಗಳೂರಿನ ಅನೇಕ ಸಂಘ ಸಂಸ್ಥೆಗಳು ಏರ್ಪಡಿಸುವ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ, ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸುವುದು, ವಿಚಾರ ಗೋಷ್ಠಿಗಳಲ್ಲಿ ಉಪನ್ಯಾಸ, ಸಂವಾದ, ಪ್ರಬಂಧ ಮಂಡನೆ ಮಾಡುತ್ತಿರುತ್ತಾರೆ. ಬಹುಮುಖಿಯಾಗಿ ಚಿಂತಿಸುವ, ಸಮಾಜಪರ, ಕನ್ನಡಪರ ವಿಷಯ-ವಿಚಾರಗಳಲ್ಲಿ ತಮ್ಮ ಪ್ರವೃತ್ತಿ ಬೆಳೆಸಿಕೊಂಡು ನಿರಂತರ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಅವರು ಈಗಾಗಲೇ ವಿಜ್ಞಾನಕ್ಕೆ ಸಂಬಂಧಪಟ್ಟಪಠ್ಯ ಪುಸ್ತಕಗಳನ್ನು ಬರೆದಿರುತ್ತಾರೆ. ವಿಜ್ಞಾನದ ಬರಹಗಳನ್ನು ಬರೆದಿರುವ ಶ್ರೀಯುತರಿಗೆ ಅನೇಕ ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿ, ಗೌರವ, ಸನ್ಮಾನಗಳನ್ನು ನೀಡಿ ಗೌರವಿಸಿರುವುದನ್ನು ನಾನು ಕಂಡಿದ್ದೇನೆ. ಈ ಶುಭ ಸಂದರ್ಭದಲ್ಲಿ ತಮ್ಮ ಎಡೆಬಿಡದ ಕೆಲಸ ಕಾರ್ಯಗಳ ನಡುವೆ “ಕಾವ್ಯಬಿಂಬ” ಎಂಬ ಕವನ ಸಂಕಲನವನ್ನು ಪ್ರಕಟಿಸುತ್ತಿರುವುದನ್ನು ಕಂಡು ನನಗೆ ಸಂತೋಷವೂ, ಖುಷಿಯೂ ಅವರ ಬಗ್ಗೆ ಗೌರವವೂಮೂಡುತ್ತಿದೆ. ಅಭಿನಂದನೆಗಳು ರವೀಂದ್ರರವರೆ. ರವೀಂದ್ರ ಅವರ ಕವನ ಸಂಕಲನವು ಮೂವತ್ತು ಕವನಗಳ ಬಿಡಿ ಬಿಡಿ ಪದ್ಯಗಳಾಗಿವೆ. “ಕನ್ನಡ ಕಲರವ” ದಿಂದ ಆರಂಭಗೊಂಡು “ನನ್ನ ಕವನ” ಅವರ ಮೂವತ್ತನೇ ಕವನವಾಗಿರುತ್ತದೆ. ಕನ್ನಡ ನಾಡು-ನುಡಿ ಅಭಿಮಾನ-ಗೌರವ ಹೊಂದದವನ ಎದೆ ಸುಡುಗಾಡು ಎಂದು ಮಹಾಕವಿ ಕುವೆಂಪು ರವರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಚಿರಂತವಾದ ಕನ್ನಡಕ್ಕೆ ನಾ ಗೀತೆಯೊಂದ ಬರೆಯುವ ಬಯಕೆ- ಎಂದು ಪ್ರಾರಂಭಿಸುವ ಕವಿಯು ಧರ್ಮಾಂಧತೆಯು ಭಾರತವನ್ನು ಆವರಿಸಿರುವ ಒಂದು ಪಿಡುಗು ಎಂದೇ ಭಾವಿಸಿದ್ದಾರೆ. ಈ ಕವನದ ಸಾಲುಗಳು ಅವರಿಗಿರುವ ವೈಚಾರಿಕ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಈ ನೆಲ ವಿಜ್ಞಾನದಲ್ಲಿ ವಿಶ್ವ ವಿಶ್ವವಿಖ್ಯಾತವಾಗಲಿ, ಈ ನೆಲ ಹಸಿರಾಗಲಿ ನಮ್ಮ ಉಸಿರಾಗಲಿ. ತನು ಮನ ಎಲ್ಲವು ನಿತ್ಯ ವಿನೂತನವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುವಲ್ಲಿ ತಮಗಿರುವ ಕನ್ನಡ ಬಗೆಗಿನ ಮಹತ್ವದ ಪ್ರೀತಿಯನ್ನು ತೋರಿಸುತ್ತಾರೆ. “ಪುಣ್ಯ ನದಿ ಕಾವೇರಿ” ಕವಿತೆಯಲ್ಲಿ ಭಾಗಮಂಡಲದಿ ಬುವಿಗಿಳಿದು ಬಂದವಳು..... ನೀನಾದೆ ನಾಡಿನ ಕಾವಲು ದೇವತೆ. ನೀ ಕರುನಾಡ ಕುವರಿ, ನಿನ್ನ ಮಹಿಮೆ ಅಪಾರ – ಎಂದು ಕಾವೇರಿ ಮಾತೆಯನ್ನು ಪ್ರಸಕ್ತ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿ, ಕಾವೇರಿ ಮಹಾತ್ಮೆಯನ್ನು ಹಾಸನ, ಮಂಡ್ಯ, ಮೈಸೂರು, ಬೆಂಗಳೂರಿನ ಜೀವನಾಡಿಯಾಗಿ, ವರದಾತೆಯಾಗಿ ಕಾವೇರಿಯನ್ನು ವರ್ಣಿಸುತ್ತಾರೆ. ಶ್ರೀಗಂಧದ ತವರೂರು ಈ ಕನ್ನಡ ನಾಡು ಎಂದು ಚಿತ್ರಿಸುತ್ತಾರೆ. ರೈತರ ನರನಾಡಿಯ ಚಿಲುಮೆ ಎಂದು ತಿಳಿಸಿದ್ದಾರೆ. ಕಾವೇರಿಯ ಪುಣ್ಯ ಸ್ಮರಣೆಯಲ್ಲಿ ಮಿಂದೆದ್ದಿದ್ದಾರೆ ರವೀಂದ್ರ ಅವರು. ‘ಜಯಭಾರತ’ ಕವಿತೆಯಲ್ಲಿ ‘ಚಂದಿರನ ಮಂದಿರಕೆ ಭಾರತದ ಸ್ಪರ್ಶ’ ಎಂದು ವಿಜ್ಞಾನವು ಮೇಲುಗೈ ಸಾಧಿಸಿರುವುದನ್ನು, ಇಸ್ರೋ ಸ್ಯಾಟಲೈಟ್ ಉಪಗ್ರಹ ರವಾನೆಯಾಗಿ ಜಗತ್ತಿಗೆ ಒಂದು ದೊಡ್ಡ ಸಂದೇಶವನ್ನು ನೀಡಿರುವ ಇಸ್ರೋ ಗಗನಯಾನದ ಸಾಧನೆಯನ್ನು ಈ ಪದ್ಯದಲ್ಲಿ ವಿವರಿಸಿದ್ದಾರೆ. ಶಾಲಾ ದಿನಗಳು ಪದ್ಯದ ಸಾಲುಗಳು, ಸುಂದರ ದಿನಗಳು ಮರೆಯಾಗಿ ಭಾರವೆನಿಸಿವೆ. ಬ್ಯಾಗು-ಪುಸ್ತಕ ಹೊರೆಯನ್ನು ಪ್ರಸ್ತುತ ಮಕ್ಕಳ ಅವ್ಯವಸ್ಥೆಯನ್ನು, ಬಾಲ್ಯದಲ್ಲಿ ಆಟೋಟಗಳಲ್ಲಿ ತೊಡಗಿಸಿಕೊಂಡು ಚೆಂದವಾಗಿದ್ದ ಬದುಕಿನ ಕ್ಷಣಗಳನ್ನು ಮೆಲುಕು ಹಾಕುವಲ್ಲಿ ನಮ್ಮನ್ನು ಹಾಗು ಓದುಗ ಸಹೃದಯರನ್ನು ಪುನಃ ಬಾಲ್ಯದ ಕಡೆಗೆ ಕರೆದೊಯ್ಯುತ್ತಾರೆ. ನನ್ನವ್ವ ಕವಿತೆಯಲ್ಲಿ ಅವ್ವ ಅವ್ವ ನನ್ನವ್ವ ಜಗವೆ ನೀನವ್ವ, ಅಕ್ಷರ ಇಲ್ಲದೆ ಅಂದದ ಬದುಕು ಕೊಟ್ಟೆ ಎಂದು ಎಂದು ಹೇಳುವಾಗ ಮಾನಸಿಕವಾಗಿ ಕುಗ್ಗಿಹೋಗಬೇಕಾಗಿದೆ ಇವತ್ತಿನ ಮಾನವರು. ತಾಯಿ ಜಗದ ಕಣ್ಣು, ಈ ಪ್ರಪಂಚದಲ್ಲಿ ತಾಯಿಯ ಸ್ಥಾನವನ್ನು ಯಾವ ದೇವರೂ ತುಂಬಲು ಸಾಧ್ಯವಿಲ್ಲ, ಆಕೆಯೇ ದೇವರು ಎಂದು ಹೇಳುತ್ತಾ; ಉಸಿರು, ಸ್ಪೂರ್ತಿ, ಶಕ್ತಿ, ಬದುಕು ಎಂದು ಹೇಳುತ್ತ ವರ್ಣಿಸುತ್ತ ಭೂಮಿತಾಯಿ ಹೆತ್ತತಾಯಿ ಇಬ್ಬರೂ ಒಂದೇ ಎಂದು ಕರೆಯುತ್ತಾರೆ. ತಾಯಿಯ ಬಗ್ಗೆ ಹೇಗೆ ಬರೆದರೂ ಈ ಜಾಗಕ್ಕೆ ಬೆಳಕಾಗುವಂತೆ ಮಾಡಿದ ಅಪ್ಪನನ್ನು ಮರೆಯಬಾರದು. ‘ಹೇಗೆ ಬರೆಯಲಿ ಅಪ್ಪ ನಿನ್ನ ವ್ಯಕ್ತಿತ್ವ, ಅಳಿಸಿ ಹೋಗುವ ಈ ಪದ ಪುಂಜದೊಳಗೆ. ಹೆತ್ತ ತಂದೆ ತಾಯಿ ಅನಕ್ಷರಸ್ಥರಾದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದುದ್ದಲ್ಲದೆ ತಂದೆ ತಾಯಿ ಆಶೀರ್ವಾದದಿಂದ ಸಾವಿರಾರು ಮಕ್ಕಳಿಗೆ ವಿದ್ಯೆ ಕಲಿಸಿಕೊಡುತ್ತಿರುವ ಸಂತೋಷವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ವಿದ್ಯೆಯ ಸಾಧನೆಗೆ, ಜ್ಞಾನಕ್ಕೆ, ಬದುಕಿಗೆ ದಾರಿ; ಆಗಿರುವವನು ಅಪ್ಪ ಎಂಬುದು ಇವರ ಗೌರವದ ಮಾತು. ಭಾರತಕ್ಕೆ75ನೇ ಅಮೃತ ಮಹೋತ್ಸವದ ಕಾಲದಲ್ಲಿ ಬದಲಾಗಿ ಹೋಗುತ್ತಿರುವ ಆಧುನಿಕ ಸ್ಪರ್ಶ, ಆಧ್ಯಾತ್ಮಿಕತೆ, ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವ, ಅನೇಕ ಜ್ಞಾನಿಗಳನ್ನು ಇಲ್ಲಿ ಪರಿಚಯಿಸುತ್ತಾರೆ. ಬೆಂಗಳೂರನ್ನು ಕುರಿತು ಬರೆಯುವ ರವೀಂದ್ರ ಅವರು ನಾನಿರುವ ಊರು ಬೆಂಗಳೂರು, ನಾ ಬದುಕು ಕಟ್ಟಿಕೊಂಡೂರು, ಆಳುವ ಅರಸರುಗಳಿರುವ ಊರು ಎಂದು ಶುರು ಮಾಡುವ ಕವಿ ಬೆಂಗಳೂರಿನ ಭಾಷೆ, ಸಂಸ್ಕೃತಿ, ಸಂಸ್ಕಾರ, ಕಲೆ, ಸಾಹಿತ್ಯ, ವಿಜ್ನಾನದಾದಿಯಾಗಿ ಜಗತ್ತಿನ ಜನರೆಲ್ಲರೂ ಕೂಡಿ ಬಾಳುತ್ತಿರುವ ಬೆಂಗಳೂರನ್ನು ವರ್ಣಿಸಿ ಬರೆಯುತ್ತಾರೆ.

ಕರೋನಾ ಕಾಲದ ಸ್ಥಿತಿ ಗತಿ ಆನ್ ಲೈನ್ ಬದುಕು, ನದಿಗಳನ್ನು ರಕ್ಷಣೆ ಮಾಡಬೇಕಾದದ್ದು, ಪ್ರಕೃತಿ, ತಾನು ಪಾಠ ಮಾಡುವ ರಸಾಯನಶಾಸ್ತ್ರ ವಿಷಯದ ಬಗ್ಗೆಯೂ ಒಂದು ಕವಿತೆ ಬರೆದಿರುತ್ತಾರೆ. ಜ್ಞಾನವಳಿ, ಭಾವಗೀತೆ, ಮಹಿಳೆ, ಯುಗಾದಿ, ನನ್ನ ಕವನ, ಈ ಎಲ್ಲಾ ಕವಿತೆಗಳಲ್ಲಿ ಕನ್ನಡ ನಾಡು ಸಾಹಿತ್ಯವನ್ನು ಶ್ರೀಮಂತಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಡಾ. ರವೀಂದ್ರ ಅವರು ಸಮಾಜದ ಹಲವು ತಲ್ಲಣಗಳಿಗೆ ಪರಿಹಾರೋಪಾಯದ ಸಲಹೆಗಳನ್ನು ನೀಡುತ್ತಾ ಪ್ರತಿಸ್ಪಂದಿಸಿರುವುದಕ್ಕು ನಾನು ಸಂತೋಷ ಪಟ್ಟಿರುತ್ತೇನೆ. ರವೀಂದ್ರ ಅವರ ಕೈ ಬರಹದಿಂದ ಇನ್ನೂ ಹೆಚ್ಚಿನ ಕನ್ನಡ ಕಾವ್ಯ ಶ್ರೀಮಂತವಾಗಲಿ, ಇನ್ನೂ ಹೆಚ್ಚು ಹೆಚ್ಚು ಓದುವ ಬರೆಯುವ ಕುವೆಂಪು, ಬೇಂದ್ರೆ, ಅಡಿಗ, ಸಿದ್ಧಲಿಂಗಯ್ಯ, ಹೆಚ್ಚ್.ಎಲ್. ಪುಷ್ಪ, ಡಾ. ಕೆ.ಆರ್. ಸಂದ್ಯಾರೆಡ್ಡಿ ಮುಂತಾದ ಕವಿಗಳನೇಕರ ಕೃತಿಗಳನ್ನು ಓದುವ ಅರ್ಥೈಸುವ ಬಗೆಗೆ ಹೆಚ್ಚು ಗಮನ ನೀಡಲಿ ಎಂದು ಆಶಿಸಿ ಶುಭ ಕೋರುತ್ತೇನೆ.

ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) 

ಕನ್ನಡ ಉಪನ್ಯಾಸಕರು ಹಾಗು ಸಾಂಸ್ಕೃತಿಕ ಚಿಂತಕರು                             

ಬೆಂಗಳೂರು

 

ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’
ಡಾ. ಆರ್.ಎಸ್. ರವೀಂದ್ರ (ರಾಸರ), ಅವರ ‘ಕಾವ್ಯಬಿಂಬ’

Comment (1)




KK

Kotresh K commented on October 22nd, 2023 at 5:04 PM 
ನಿಮ್ಮ ಸರಳತೆ ನಂಗೆ ಇಷ್ಟ ಸಾರ್. ಅಭಿನಂದನೆಗಳು