ಡಾ ಬೀಣಾ ಅಣ್ಣಪ್ಪ ಚೌಗಲ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದವರು. ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸರ್ಕಾರಿ ಪ್ರೌಢಶಾಲೆ ಬೆಳವಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಓದು ಬಿಎ ಬಿಪಿಎಡ್. ಅವರ ತಂದೆ ಶ್ರೀ ಅಣ್ಣಪ್ಪ ಕ ಚೌಗಲ ಮತ್ತು ತಾಯಿ ಶ್ರೀಮತಿ ಅವಕ್ಕಾ ಅ ಚೌಗಲೆ. ಅವರ ಪತಿ ಶಿವಾನಂದ ಬಾ ಸಾರವಾಡಿ, ಮಗಳು ಸಾಕ್ಷಿ ಶ್ರೀ ಸಾರವಾಡಿ ಮತ್ತು ಮಗ ಆದರ್ಶ ಶಿ ಸಾರವಾಡಿ.
ಸಾಧನೆ :
ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಶಾಲೆಯ ಮಕ್ಕಳು ಸಾಧನೆ ಮಾಡಿರುತ್ತಾರೆ. (೬ ಸಾರಿ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಸಾಧನೆ )
ಭಾರತ ಸ್ಕೌಟ್ಸ ಮತ್ತು ಗೈಡ್ಸ ರಾಜ್ಯಪುರಸ್ಕಾರ ಪ್ರಶಸ್ತಿಯನ್ನು ೨೦೨೦-೨೧ ನೇ ಸಾಲಿನಲ್ಲಿ ೮ ಗೈಡಗಳು ಪಡೆದಿರುತ್ತಾರೆ.
೨೦೨೨-೨೩ ನೇ ಸಾಲಿನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿ ೨ ಗೈಡಗಳು ಪಡೆದಿರುತ್ತಾರೆ.
ಕರೋನಾ ಬಂದಾಗ ಲಾಕ್ ಡೌನ್ ವೇಳೆಯಲ್ಲಿ ಸಾವಿರಾರು ಮಾಸ್ಕಗಳ ಕೊಡುಗೆ, ಅರಣ್ಯಕ್ಕೆ ಹಾಗೂ ಶಾಲೆಗೆ ಬೀಜದುಂಡೆಗಳ (ಸುಮಾರು ೨೦೦೦ ) ಕೊಡುಗೆ, ಬೆಳವಿಯ ಸಾರ್ವಜನಿಕ ಗ್ರಂಥಾಲಯಕ್ಕೆ ೨೬೫ ಪುಸ್ತಕಗಳ ಕೊಡುಗೆ, ಆಹಾರ ಹಾಗೂ ಬಿಸ್ಕಿಟ್ಗಳ ಕೊಡುಗೆ, ನೆರೆ ಸಂತ್ರಸ್ಥರಿಗೆ ಬಟ್ಟೆಗಳ ಕೊಡುಗೆ, ಕ್ರೀಡಾ ಪಟುಗಳಿಗಾಗಿ ೨೬ ಟೀಶರ್ಟಗಳನ್ನು ಶಾಲೆಗೆ ಕೊಡುಗೆ, ಶಾಲು, ಸ್ಕಾರ್ಪ್ ಓಗಲ್‌ಗಳ ಕೊಡುಗೆ ಇತ್ಯಾದಿಗಳು
ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿ ಮೂಡಬಿದರೆ ಆಳ್ವಾಸ ಇಲ್ಲಿ ೧೧ ಮಕ್ಕಳೊಂದಿಗೆ ೮ ದಿನ ಭಾಗವಹಿಸಿದ ಸಾಧನೆ.
ಅಂತರಾಷ್ಟ್ರೀಯ ಸ್ಕೌಟ್ಸ ಮತ್ತು ಗೈಡ್ಸ ಜಾಂಬೂರಿಯಲ್ಲಿ ಮಕ್ಕಳಿಂದ ಚಟುವಟಿಕೆಗಳು ಹಾಗೂ ಯೋಗಾಥಾನ್ ಗಿನ್ನಿಸ್ ದಾಖಲೆ ಮಾಡಿದ ಸಾಧನೆ.
ಸಾಂಸ್ಕೃತಿಕ ಚಟುವಟಿಕೆಗಳು
ಪರಿಸರ ಕಾಳಜಿ ಕುರಿತು ರಾಜ್ಯಮಟ್ಟಕ್ಕೆ ಆಯ್ಕೆಯಾದ ಜಾನಪದ ನೃತ್ಯ.
ಭಾರತ ಸೇವಾದಲದ ಭಾವೈಕ್ಯತಾ ಮೇಳದಲ್ಲಿ ಭಾಗವಹಿಸಿದ ಮಕ್ಕಳು
ಬೆಳವಿ ಊರಲ್ಲಿ ರಾಷ್ಟ್ರೀಯ ಹಬ್ಬದ ದಿನ ಡಂಬೆಲ್ಸ, ಕರಾಟೆ, ಯೋಗ, ಕಾಟಿ, ಏರೋಬಿಕ್ಸ, ಚಟುವಟಿಕೆಗಳ, ಪಿರಾಮಿಡ್ಗಳ ಪ್ರದರ್ಶನ.
ಪ್ರಶಸ್ತಿ ಪುರಸ್ಕಾರಗಳು
Comments (0)
Post Comment
Report Abuse
Be the first to comment using the form below.