(JavaScript required to view this email address)
Mangalore

News & Articles

ಬೆಳಗಾವಿ ಜಿಲ್ಲೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿ.ವಾಯ್. ಮೆಣಶಿನಕಾಯಿ ಕವಿಗಳಲ್ಲಿ ಅಗ್ರಗಣ್ಯರಾಗಿದ್ದು, ಕನ್ನಡಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.ಕನ್ನಡ ಯಾವುದೇ ಕಾರ್ಯಕ್ರಮ ಇದ್ದರೂ ಕೂಡಾ ಕರ್ನಾಟಕದಾದ್ಯಂತ ಸಂಚರಿಸಿ ಸಾಹಿತ್ಯದ ಅನುಭವ ಪಡೆದುಕೊಂಡಿದ್ದಾರೆ. ಪತ್ರಿಕಾ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿ ,ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಕೃಷಿ ಇತ್ಯಾದಿ ಕ್ಷೇತ್ರದಲ್ಲಿನ ವಿಷಯಗಳನ್ನು ಹೆಕ್ಕಿ ತೆಗೆದು ಪತ್ರಿಕೆಯಲ್ಲಿ ಬರೆದಿದ್ದು ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಲೇಖನ ಪ್ರಕಟಿಸಿರುವುದು ನಿಜಕ್ಕೂ ಮಾದರಿ ಪತ್ರಕರ್ತ ಎನ್ನಬಹುದು. ಕಳೆದ 25 ವರ್ಷಗಳಿಂದ ಪತ್ರಿಕೊದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ನೇಸರಗಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನೇಸರಗಿ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಮಾದ್ಯಮಿಕ ಶಿಕ್ಷಣ ಮುಗಿಸಿದ ಇವರು ನೇಸರಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯೂಸಿ, ಮತ್ತು ನೇಸರಗಿ ಸರಕಾರಿ ಪ್ರಥಮ ದರ್ಜೆದಲ್ಲಿ ಪದವಿ ಓದಿದ್ದಾರೆ. ಬೆಳಗಾವಿ ಬೆನ್‌ಸ್ಮಿತ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಸಿಪಿಇಡಿ ಶಿಕ್ಷಣ ಮುಗಿಸಿದ್ದಾರೆ. ಬೆಳಗಾವಿ ಶಹಾಪೂರ ಸರಸ್ವತಿ ಕಾಲೇಜಿನಲ್ಲಿ ಗ್ರಂಥಾಲಯ ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಲಿಬ್ ಸೈನ್ಸ್ ಸ್ನಾತಕೋತ್ತರ ಪದವಿ ಪಡೆದಿದ್ದ್ದಾರೆ. ಸಿಪಿಇಡಿ ಓದಿದ್ದ ಇವರು ದೈಹಿಕ ಶಿಕ್ಷಕರಾಗಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಬೆಳಗಾವಿ ನಾಗನೂರ ಶ್ರೀಗಳ ಸಿದ್ದರಾಮೇಶ್ವರ ಪಿಯೂಸಿ ಕಾಲೇಜು, ಬೆಳಗಾವಿ ಭರತೇಶ ಹೊಮಿಯೋಪಥಿಕ ಮೆಡಿಕಲ್ ಕಾಲೇಜು, ಬೆಳಗಾವಿ ಗೋಮೆಟೇಶ ವಿದ್ಯಾಪೀಠದ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ. 1994 ರಲ್ಲಿ ಹವ್ಯಾಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಾ ಬೆಳಗಾವಿ ಜಿಲ್ಲಾ ವರದಿಗಾರನಾಗಿ ಕನ್ನಡಮ್ಮ, ಸಂಯುಕ್ತ ಕರ್ನಾಟಕ, ಹಸಿರುಕ್ರಾಂತಿ, ನಾಡೋಜ, ಗಡಿಕನ್ನಡಿಗ, ನಾಡೋಜ, ಸಿರಿನಾಡು, ಮೊದಲಾದ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ ಅರೆಕಾಲಿಕ ವರದಿಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪತ್ರಿಕೆಯಲ್ಲಿ ಬೆಳಕಿಗೆ ಬರಲು ಕಾರಣರಾದ ಹಿರಿಯ ಪತ್ರಕರ್ತರಾದ ಎಲ್.ಎಸ್.ಶಾಸ್ತ್ರಿ, ದಿ. ಕಲ್ಯಾಣರಾವ್ ಮುಚಳಂಬಿ, ದಿ. ಉಮಾದೇವಿ ಟೊಪ್ಪನ್ನವರ, ದಿ. ರಾಘವೇಂದ್ರ ಜೋಶಿ, ಅಶೋಕ ಜೋಶಿ, ಮುರಗೇಶ ಶಿವಪೂಜಿ ಮೊದಲಾದವರು ನೆನೆಯುತ್ತಾರೆ. ಉದಯವಾಣಿ ಸ್ಥಾನಿಕ ಸಂಪಾದಕರಾದ ವೆಂಕಟೇಶ ಪ್ರಭು, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಸದ್ಯದ ವಿಸ್ತಾರ ಟಿವಿ ಸಂಪಾದಕರಾದ ಹರಿಪ್ರಕಾಶ ಕೊಣೆಮನೆ ನನ್ನ ಬೆಳವಣಿಗೆಗೆ ಕಾರಣಿಕರ್ತರಾಗಿದ್ದರೆನ್ನುತ್ತಾರೆ. ಉದಾರವಾದಿ ನಿಲುವು, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜಿಲ್ಲೆಯ ಮೂಲೆಮೂಲೆಗೆ ಇವರ ಲೇಖನಗಳು ಗುರುತಿಸಿದವರಿದ್ದಾರೆ.
ಸಿ.ವಾಯ್. ಮೆಣಶಿನಕಾಯಿ
 ಅವರ ಕಾರ್ಯಕ್ಕೆ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನವಿಶ್ವಮಾನವ ಕುವೆಂಪು ಪ್ರಶಸ್ತಿ, ಮಂಡ್ಯದ ಕರುನಾಡ ಸೇವಾ ಟ್ರಸ್ಟ ಪ್ರಭಾಭೂಷಣ ಪ್ರಶಸ್ತಿ 2022 ಹೀಗೆ ಹಲವು ಪ್ರಶಸ್ತಿಗಳು, ಸಂಘ ಸಂಸ್ಥೆಗಳಿಂದ ಸನ್ಮಾನಗಳು ಇವರಿಗೆ ಲಭಿಸಿವೆ. ಧಾರವಾಡದ ರಂಗಾಯಣದ ರಂಗಭೂಮಿ ಹಾಗೂ ಮಾದ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. 
ಸಿ.ವಾಯ್. ಮೆಣಶಿನಕಾಯಿ
ಟಿ.ತ್ಯಾಗರಾಜು ಮೈಸೂರು.
ಸಿ.ವಾಯ್. ಮೆಣಶಿನಕಾಯಿ
ಸಿ.ವಾಯ್. ಮೆಣಶಿನಕಾಯಿ
ಸಿ.ವಾಯ್. ಮೆಣಶಿನಕಾಯಿ
ಸಿ.ವಾಯ್. ಮೆಣಶಿನಕಾಯಿ
ಸಿ.ವಾಯ್. ಮೆಣಶಿನಕಾಯಿ
ಸಿ.ವಾಯ್. ಮೆಣಶಿನಕಾಯಿ
ಸಿ.ವಾಯ್. ಮೆಣಶಿನಕಾಯಿ

Comments (0)




Be the first to comment using the form below.