ಮಂಗಳೂರು: ಕಥಾಬಿಂದು ಪ್ರಕಾಶನದ 15 ನೇ ವಾರ್ಷಿಕೋತ್ಸವವು 16.10. 2022 ರಂದು ಸಂದೇಶ ಪ್ರತಿಷ್ಠಾನ ಮಂಗಳೂರಿನಲ್ಲಿ ವಿಜೃಂಭಣೆಯಿಂದ ಜರಗಿತು ಕನ್ನಡ ಧ್ವಜಾರೋಹಣ ಮಾಡಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ನಾಡಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಲಾಯಿತು . ಶ್ರೀ ಬಸವರಾಜ ಬೆಳಗಟ್ಟ ಸಾಹಿತಿಗಳು ಮತ್ತು ಸಹಾಯಕ ಪ್ರಾಧ್ಯಾಪಕರು ವಾಣಿ ಸಕ್ಕರೆ ಸರ್ಕಾರಿ ಹಿರಿಯ ಪ್ರಥಮ ದರ್ಜೆ ಕಾಲೇಜು ಹಿರಿಯೂರು ಚಿತ್ರದುರ್ಗ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು .ಅಧ್ಯಕ್ಷರಾಗಿ ಖ್ಯಾತ ಲೇಖಕರಾದ ಡಾ. ನಾ. ಮೊಗಸಾಲೆ ಮುಖ್ಯ ಅತಿಥಿಗಳಾಗಿ, ಖ್ಯಾತ ಕಾದಂಬರಿಕಾರ ಶ್ರೀ ವಿವೇಕಾನಂದ ಕಾಮತ್ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಇತ್ಯಾದಿ ಗಣ್ಯರು ಉಪಸ್ಥಿತರಿದ್ದರು.
ಫಣಿಶ್ರೀ ನಾರಾಯಣನ್ ಮೇರಿಲ್ಯಾಂಡ್ ಅವರ ಕವನ ಸಿಂಚನ, ಮಂಜುಳ ವಾಷಿಂಗ್ಟನ್ ಅವರ ಕಾವ್ಯ ಸಿರಿ ಹಾಗೂ ದಿ. ಪ್ರೊಫೆಸರ್ ಆರ್ ರಾಮಕೃಷ್ಣ ರಾವ್ ಬೆಂಗಳೂರು ಇವರ ಸ್ಮರಣಾರ್ಥ ನಡೆದ ಕಥಾಸ್ಪಧೆ೯ಯ ಕಥಾಸಂಕಲನ ಸಾಹಿತ್ಯ ಕುಸುಮ ಸಂ. ಫಣಿಶ್ರೀ ನಾರಾಯಣನ್ ಈ ಮೂರು ಕೃತಿಗಳು 15ನೇ ವಾಷಿ೯ಕೋತ್ಸವದ ಸಂದರ್ಭದಲ್ಲಿ ಬಿಡುಗಡೆ ಗೊಂಡಿತು. ವೇದಿಕೆಯಲ್ಲಿ ಪಿ. ವಿ ಪ್ರದೀಪ್ ಕುಮಾರ್, ಶಿವಪ್ರಸಾದ್ ಕೊಕ್ಕಡ, ಶ್ರೀ. ಕೆ. ವಿ. ಲಕ್ಷ್ಮಣ ಮೂತಿ೯, ಶ್ರೀಮತಿ ಶಾಂತ ಕುಂಟಿನಿ, ಶ್ರೀ ರವೀಂದ್ರ ಕಿಣಿ, ಧಮ೯ದಶಿ೯ ಹರಿಕೃಷ್ಣ ಪುನರೂರು, ಶ್ರೀ ಬೆಟ್ಟಂಪ್ಪಾಡಿ ಸುಂದರ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Comments (0)
Post Comment
Report Abuse
Be the first to comment using the form below.