ನಾನು ಜಯಂತಿ ಕನ್ನುಕೆರೆ ಈಗಿನ್ನೂ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುವ ಪ್ರಯತ್ನ ಮಾಡುತ್ತಿದ್ದೇನೆ."ಭಾವ ದೀಪ್ತಿ" ನನ್ನ ಚೊಚ್ಚಲ ಕವನ ಸಂಕಲನ.ಭಾವಯಾನದಲ್ಲಿ ತೇಲುವ ಮನದ ಪಿಸು ನುಡಿಗಳು.ಸುತ್ತಲ ಪರಿಸರದಿಂದ ಸ್ಪೂರ್ತಿ ಪಡೆದು ರಚಿಸಿದ ಹೂ ಬನ. ಕವನಗಳನ್ನು ಆಸ್ವಾದಿಸಿ ಪ್ರತಿಕ್ರಿಯಿಸಿ ಎಂದು ಆಶಿಸುತ್ತೇನೆ.ಕನ್ನಡಮ್ಮನ ಸೇವೆಗೆ ಸಿಕ್ಕ ಸದವಕಾಶ ಎಂದೇ ಭಾವಿಸುತ್ತೇನೆ. ಸಮಾಜದ ಆಗುಹೋಗುಗಳ ಕುರಿತು ಹಲವಾರು ಕವನ ರಚಿಸಿದ್ದೇನೆ.
ಕವನ ಸಂಕಲನ ಹೊರ ತರಲು ಪ್ರೋತ್ಸಾಹ ನೀಡಿದ ನನ್ನ ಹಿತೈಷಿಗಳಿಗೆ ಆಭಾರಿ. ಈ ಕೃತಿಗೆಮುನ್ನುಡಿಬರೆದು ಪ್ರೋತ್ಸಾಹಿಸಿದ ಕವಿ ಮತ್ತು ಸಾಹಿತಿ ಡಾ ಕೊಳ್ಚಪ್ಪೆ ಗೋವಿಂದ ಭಟ್ ರವರಿಗೆ ನನ್ನ ಅನಂತಾನ0ತ ಧನ್ಯವಾದಗಳು. ಹಾಗೆಯೇ ಪ್ರಕಾಶಕರಾದ ಶ್ರೀಯುತ ಪಿ.ವಿ. ಪ್ರದೀಪ್ ಕುಮಾರ್, ಕಥಾ ಬಿಂದು ಪ್ರಕಾಶನದ ರೂವಾರಿಗಳಿಗೆ ನನ್ನ ಮನದಾಳದ ಧನ್ಯವಾದಗಳು.ನನ್ನ ಸಹೋದ್ಯೋಗಿ ಶ್ರೀಮತಿ ಪೂರ್ಣಿಮಾ ಭಗವಾನ್ ರವರು ಸಾಹಿತ್ಯ ಕೃಷಿಗೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಅವರಿಗೂ ಕೃತಜ್ಞತೆಗಳು. ಅಲ್ಲದೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಸಹೃದಯರಿಗೂ ನನ್ನ ಕೃತಜ್ಞತೆಗಳು.
ಸದಾ ನನ್ನ ಕಾವ್ಯ ಪಯಣಕ್ಕೆ ಬೆಂಬಲವಿತ್ತ ನನ್ನ ಮಗನ ಕಾಣಿಕೆಯನ್ನು ಕೂಡ ಸ್ಮರಿಸಲೇಬೇಕು.ಈ ನನ್ನ ಚೊಚ್ಚಲ ಕೃತಿಯನ್ನು ನನ್ನ ಸುಪುತ್ರ ಶ್ರೀ "ಕಾರ್ತಿಕೇಯ ಮುಚ್ಚಿಂತಾಯ " ರಿಗೆ ಅರ್ಪಿಸುತ್ತೇನೆ.
ಶ್ರೀಮತಿ ಜಯಂತಿ ಕನ್ನುಕೆರೆ
ಬೆಂಗಳೂರು
Comments (15)
Post Comment
Report Abuse
Gerardo commented on November 29th, 2023 at 5:44 AM
I was recommended this website by my cousin. I'm
not sure whether this post is written by him as nobody else know such detailed about my trouble.
You're wonderful! Thanks!