(JavaScript required to view this email address)
Mangalore

News & Articles

ಕವನವೆಂಬುದು ಸಾಹಿತ್ಯ ಪ್ರಕಾರಗಳಲ್ಲಿ ಸಂಕ್ಷಿಪ್ತವಾದ ಬರಹ ಎನ್ನ ಬಹುದು. ಆ ಸಂಕ್ಷಿಪ್ತದಲ್ಲಿ ಮಹತ್ತನ್ನು ಹೇಳುವುದೇ ಕವನದ ಹೆಗ್ಗಳಿಕೆ. ಕಾವ್ಯ ಪ್ರಕಾರಕ್ಕೆ ಉಳಿದ ಪ್ರಕಾರ ಗಳಿಗಿಂತ ಹೆಚ್ಚು ಕಟ್ಟುಪಾಡುಗಳಿವೆ. ಛಂದೋಬದ್ಧವಾದ ವಿಧಿವಿಧಾನಗಳಿವೆ. ಕಂಡದ್ದನ್ನು ಕಂಡಹಾಗೆ ಬರೆದರೆ ಅದು ಅಲಂಕಾರವಿಲ್ಲದ ಸರಕಾಗುತ್ತದೆ. ಆದ್ದರಿಂದ ಕಾವ್ಯದಲ್ಲಿ ಪ್ರಾಸ, ರೂಪಕ, ಶ್ಲೇಷೆಯಂತಹ ಅಲಂಕಾರಗಳನ್ನು ಬಳಸಿ ಶ್ರೀಮಂತವೂ ಶೃಂಗಾರಪೂರಿತವೂ ಸೇರಿದರೆ ಕವಿತೆ ಹೆಚ್ಚು ಆಪ್ತವಾಗುತ್ತದೆ. ಕವಿತೆ ಬಹುಅರ್ಥವನ್ನು ಹೊಂದಿರುತ್ತದೆ. ಆದ್ದರಿಂದ ಓದುಗನ ಚಿಂತನೆ ಮತ್ತು ಮನೋಸ್ಥಿತಿಯಂತೆ ಕವಿತೆದಕ್ಕುತ್ತದೆ. ಒಳ್ಳೆಯ ಕವಿತೆ ಒಂದೇ ಓದಿಗೆ ಕೆಲಮೊಮ್ಮೆ ಎಟಕದಿರಬಹುದು. ಪುನ: ಪುನ: ಓದಿಸಿದಷ್ಟು ಅದು ಸಂಕೀರ್ಣವಾಗಿದೆ ಎನ್ನಲಡ್ಡಿಯಿಲ್ಲ. ಈ ಗುಣವಿಶೇಷಗಳಿಂದ ಕವಿತೆಬರೆಯುವುದು ಕ್ಲೀಷ್ಟವಾದಕಲಾತ್ಮಕ ಕೆಲಸ. ಕವಿಯು ಪ್ರಯತ್ನಿಸಿದ ಅರ್ಥದಾಚೆಗೂ ಓದುಗನಿಗೆ ಅರ್ಥಗೋಚರಿಸಲೂ ಬಹುದು. ಇವೆಲ್ಲಾ ಕಾವ್ಯದ ಗುಣ ವಿಶೇಷಗಳೆಂದು ಸಂಕ್ಷಿಪ್ತವಾಗಿ ಹೇಳಬಹುದು. “ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ. ಭಾವ ಎಂದರೆ ಮನಸಿನಿಂದ ಜನ್ಯವಾದ ಯೋಚನೆ. ದೀಪ್ತಿ ಎಂದರೆ ದೀಪದ ಬೆಳಕು. ಇವೆರಡೂ ಕಾವ್ಯಕ್ಕೆ ಮೂಲ ಎಂದುಲಾಕ್ಷಣಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಕಲನದಲ್ಲಿ ಸುಮಾರು 30 ಕವನಗಳಿವೆ. ವೈವಿಧ್ಯಮಯವಸ್ತುಗಳ ಮೇಲೆ ಕವನಗಳನ್ನು ಕಟ್ಟಿಕೊಟ್ಟಿದ್ದಾರೆ. ಮನುಷ್ಯ ಮನೋವ್ಯಾಪಾರಗಳನ್ನು ಮೂಲವಾಗಿಟ್ಟು ಕವನಗಳನ್ನು ಕವಯಿತ್ರಿ ಹೆಣೆದಿದ್ದಾರೆ. ಮೊದಲಸಂಕಲನವಾದರೂ ಕವನಕಟ್ಟುವ ಜಾಣ್ಮೆ ಅವರಿಗೆ ಒಲಿದಂತೆ ಕಾಣುತ್ತದೆ. ಅಂತರ್ಜಾಲಾ ಸಾಹಿತ್ಯಸ್ಪರ್ಧೆಗಳಲ್ಲಿ ಸಕ್ರಿಯರಾಗಿರುವುದು ಅವರ ಕೌಶಲ್ಯಕ್ಕೆ ಕಾರಣವಿರಬೇಕು ಎನಿಸುತ್ತದೆ. ಈ ಕವನ ಸಂಕಲನದಲ್ಲಿ ಭಕ್ತಿಭಾವ, ನಿಸರ್ಗಪ್ರೀತಿ, ಸಾಮಾನ್ಯ ಮನೋವ್ಯಾಪಾರಗಳು ಮತ್ತು ಆಗು ಹೋಗುಗಳು, ಲೋಕಾನುಭವಗಳು ಸೇರಿಕೊಂಡು ಪರಿಪಕ್ವವಾದ ಮಿಶ್ರಣಗಳಿವೆ. ರಸಾಸ್ವಾದಕ್ಕೆ ಸಾಕಷ್ಟು ಅವಕಾಶವನ್ನು ಕೃತಿಯ ಮೂಲಕ ಒದಗಿಸಿದ್ದಾರೆ. ಮುಂದಕ್ಕೆ ಕಾವ್ಯದ ಗುಣಗಳನ್ನು ರೂಪಕ, ಛಂದಸ್ಸುಗಳ ಮೂಲಕ ಅಲಂಕರಿಸಿ ಹೆಚ್ಚಿನ ಸಾಧನೆಯನ್ನು ಮಾಡುವ ಅವಕಾಶವಿದೆ. ಶ್ರೀಮತಿ ಕೆ. ಎಸ್. ಜಯಂತಿಯವರು ದಕ್ಷಿಣ ಕನ್ನಡ ಮೂಲದವರಾಗಿದ್ದು, ಬ್ಯಾಂಕಿನಲ್ಲಿ ಸುದೀರ್ಘಕಾಲ ದುಡಿದು ನಿವೃತ್ತರಾಗಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಾಹಿತ್ಯದ ಮೇಲೆ ಆಸಕ್ತಿ ಓದಿನ ಮೂಲಕ ಇರಿಸಿ ಕೊಂಡಿದ್ದರೂ, ಕಾವ್ಯ ಪ್ರವೃತ್ತಿಗೆ ತೊಡಗಿದ್ದು ನಿವೃತ್ತಿಯ ಬಳಿಕವೇ ಎನ್ನಬಹುದು. ಅವರ ಕಾವ್ಯಸೃಷ್ಟಿ ಇನ್ನೂ ಬೆಳೆಯಲಿ ಎಂಬ ಶುಭ ಆಶಯಗಳು. 
ಶುಭಾಶಯಗಳೊಂದಿಗೆ,

“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.
ಡಾಕೊಳ್ಚಪ್ಪೆಗೋವಿ0ದಭಟ್
ಕವಿಮತ್ತುಸಾಹಿತಿ, ಮಂಗಳೂರು.
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.
ನಾನು ಜಯಂತಿ ಕನ್ನುಕೆರೆ ಈಗಿನ್ನೂ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುವ ಪ್ರಯತ್ನ ಮಾಡುತ್ತಿದ್ದೇನೆ."ಭಾವ ದೀಪ್ತಿ" ನನ್ನ ಚೊಚ್ಚಲ ಕವನ ಸಂಕಲನ.ಭಾವಯಾನದಲ್ಲಿ ತೇಲುವ ಮನದ ಪಿಸು ನುಡಿಗಳು.ಸುತ್ತಲ ಪರಿಸರದಿಂದ ಸ್ಪೂರ್ತಿ ಪಡೆದು ರಚಿಸಿದ ಹೂ ಬನ. ಕವನಗಳನ್ನು ಆಸ್ವಾದಿಸಿ ಪ್ರತಿಕ್ರಿಯಿಸಿ ಎಂದು ಆಶಿಸುತ್ತೇನೆ.ಕನ್ನಡಮ್ಮನ ಸೇವೆಗೆ ಸಿಕ್ಕ ಸದವಕಾಶ ಎಂದೇ ಭಾವಿಸುತ್ತೇನೆ. ಸಮಾಜದ ಆಗುಹೋಗುಗಳ ಕುರಿತು ಹಲವಾರು ಕವನ ರಚಿಸಿದ್ದೇನೆ.
ಕವನ ಸಂಕಲನ ಹೊರ ತರಲು ಪ್ರೋತ್ಸಾಹ ನೀಡಿದ ನನ್ನ ಹಿತೈಷಿಗಳಿಗೆ ಆಭಾರಿ. ಈ ಕೃತಿಗೆಮುನ್ನುಡಿಬರೆದು ಪ್ರೋತ್ಸಾಹಿಸಿದ ಕವಿ ಮತ್ತು ಸಾಹಿತಿ ಡಾ ಕೊಳ್ಚಪ್ಪೆ ಗೋವಿಂದ ಭಟ್ ರವರಿಗೆ ನನ್ನ ಅನಂತಾನ0ತ ಧನ್ಯವಾದಗಳು. ಹಾಗೆಯೇ ಪ್ರಕಾಶಕರಾದ ಶ್ರೀಯುತ ಪಿ.ವಿ. ಪ್ರದೀಪ್ ಕುಮಾರ್, ಕಥಾ ಬಿಂದು ಪ್ರಕಾಶನದ ರೂವಾರಿಗಳಿಗೆ ನನ್ನ ಮನದಾಳದ ಧನ್ಯವಾದಗಳು.ನನ್ನ ಸಹೋದ್ಯೋಗಿ ಶ್ರೀಮತಿ ಪೂರ್ಣಿಮಾ ಭಗವಾನ್ ರವರು ಸಾಹಿತ್ಯ ಕೃಷಿಗೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಅವರಿಗೂ ಕೃತಜ್ಞತೆಗಳು. ಅಲ್ಲದೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಸಹೃದಯರಿಗೂ ನನ್ನ ಕೃತಜ್ಞತೆಗಳು. 
ಸದಾ ನನ್ನ ಕಾವ್ಯ ಪಯಣಕ್ಕೆ ಬೆಂಬಲವಿತ್ತ ನನ್ನ ಮಗನ ಕಾಣಿಕೆಯನ್ನು ಕೂಡ ಸ್ಮರಿಸಲೇಬೇಕು.ಈ ನನ್ನ ಚೊಚ್ಚಲ ಕೃತಿಯನ್ನು ನನ್ನ ಸುಪುತ್ರ ಶ್ರೀ "ಕಾರ್ತಿಕೇಯ ಮುಚ್ಚಿಂತಾಯ " ರಿಗೆ ಅರ್ಪಿಸುತ್ತೇನೆ.

ಶ್ರೀಮತಿ ಜಯಂತಿ ಕನ್ನುಕೆರೆ
ಬೆಂಗಳೂರು
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.
“ಭಾವದೀಪ್ತಿ” ಜಯಂತಿ ಕನ್ನುಕೆರೆ ಅವರ ಚೊಚ್ಚಲು ಕವನ ಸಂಕಲನ.

Comments (15)




AD

Adriana commented on November 27th, 2023 at 1:20 AM 
If you are going for most excellent contents like me, only pay a quick visit
this site all the time for the reason that it provides quality contents, thanks



AN

Anibal commented on November 28th, 2023 at 12:09 AM 
Excellent beat ! I wish to apprentice while you amend your web site,
how can i subscribe for a blog website? The
account helped me a acceptable deal. I had been a little bit acquainted
of this your broadcast offered bright clear concept



Comments Page 6 of 8