ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿರುವ ಮಲೆನಾಡಿನವರಾದ ಶ್ರೀ ಅಜಯ್ ಕುಮಾರ್ ಶರ್ಮಾ ಇವರು ಇಂಜಿನಿಯರಿಂಗ್ನಲ್ಲಿ ಪದವಿ (B.E) ಮತ್ತು ಸ್ನಾತಕೋತ್ತರ ಪದವಿಯನ್ನು (M.Sc) ಪಡೆದಿರುತ್ತಾರೆ . ಇವರು ವೃತ್ತಿಯಲ್ಲಿ ಚಾರ್ಟೆಡ್ ಇಂಜಿನಿಯರ್ ಹಾಗೂ ಮೌಲ್ಯಮಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಇನ್‌ಸ್ಟಿಟ್ಯೂಷನ್ ಆಫ್ ವ್ಯಾಲ್ಯೂರ್ಸ್,ದೆಹಲಿ ಮತ್ತು ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನೀಯರ್ಸ್ (ಇಂಡಿಯಾ), ಕೊಲ್ಕತ್ತಾ ಮತ್ತು ಕರ್ನಾಟಕ ಇತಿಹಾಸ ಅಕಾದೆಮಿ (ರಿ), ಬೆಂಗಳೂರು ಇದರ ಸದಸ್ಯರಾಗಿರುತ್ತಾರೆ. ಶ್ರೀ ಅಜಯ್ ಕುಮಾರ್ ಶರ್ಮಾ ಅವರು ಹಲವಾರು ವರ್ಷಗಳಿಂದ ಮಲೆನಾಡು ಮತ್ತು ಕರಾವಳಿಯಲ್ಲಿರುವ ಪುರಾತನ ದೇವಾಲಯಗಳು, ಕೋಟೆಗಳು, ಸ್ಮಾರಕಗಳು, ಮಲೆನಾಡು ಮತ್ತು ಕರಾವಳಿಯ ಸ್ಥಳೀಯ ಕಟ್ಟಡದ ವಾಸ್ತುಶೈಲಿ ಮತ್ತು ಹಿಂದಿನ ನಗರ ಯೋಜನೆಯನ್ನು ಇಂದಿನ ಎಂಜಿನಿಯರಿಂಗ್ ದೃಷ್ಟಿಕೋನದಿಂದ ಅಧ್ಯಯನ ಮಾಡುತ್ತಿದ್ದಾರೆ. ಈ ಹಿಂದೆ ಕೆಳದಿ ಅರಸರು ಆಳಿದ ಪ್ರದೇಶವೇ ಇವರ ಅಧ್ಯಯನದ ಕ್ಷೇತ್ರ ವ್ಯಾಪ್ತಿಯಾಗಿದೆ. ಇವರು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ, ಮಲೆನಾಡು ಹಾಗೂ ಕರಾವಳಿಗೆ ಸಂಬಂಧಿಸಿದ ಹೊಸ ವಿಷಯಗಳನ್ನು ಪರಿಚಯಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಅಜಯ್ ಕುಮಾರ್ ಶರ್ಮಾ ಅವರು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಪ್ರಬಂಧವನ್ನು ಮಂಡಿಸಿರುತ್ತಾರೆ. ಇವರು ಬರೆದ ಸಾಕಷ್ಟು
ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟಣೆ ಗೊಂಡಿರುತ್ತದೆ. ಇದೀಗ
ಕಥಾಬಿಂದು ಪ್ರಕಾಶನದಿಂದ
ಎಪ್ಪತ್ತರ ದಶಕದ ಶೃಂಗೇರಿ (ಜಹಗೀರ್ ಇಂದ ಪುರಸಭೆಯವರೆಗಿನ ಪಯಣ)
ಪ್ರಕಟಗೊಳ್ಳುತ್ತಿರುವ ಕೃತಿಯಾಗಿದೆ
Comments (0)
Post Comment
Report Abuse
Be the first to comment using the form below.