ಶ್ರೀ ನಾರಾಯಣ ಮೂಡಿತ್ತಾಯ (ಸುಚರಿತರು), ಶ್ರೀ ವಿ ಬಿ ಕುಳಮರ್ವ(ಕಲರವ), ಶ್ರೀಮತಿ ಮೀನಾಕ್ಷಿ ರಾಮಚಂದ್ರನ್ (ಭಾರತಾಂಬೆಗೆ ನಮನ), ಡಾ. ಸುರೇಶ ನೆಗಳಗುಳಿ (ಭಾವಸ್ಪರ್ಶ), ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಕೃತಿಯ ಅವಲೋಕನ ಮಾಡಿದರು. ಈ ಎಲ್ಲಾ ಕೃತಿಗಳ ಮುದ್ರಕರಾದ ಶ್ರೀ ಪಿವಿ ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕುಮಾರಿ ಸುಪ್ರಭಾ ರಾವ್, ರಾಧಾಮಣಿ ಆರ್ ರಾವ್, ದಿವಾಕರ ಬಲ್ಲಾಳ್, ದೇವಾಂಶು ಕಾರಂತ್, ವೇದಾಂತ ಕಾರಂತ್, ಕು ಪ್ರಾರ್ಥನಾ ಅಡಿಗ, ಕು ಕೀರ್ತನ ಅಡಿಗ, ಶ್ರೀಮತಿ ರೂಪಶ್ರೀ ಬಲ್ಲಾಳ್ ಆಯ್ದ ಕವನಗಳನ್ನು ಹಾಡಿದರು. ಕುಮಾರಿ ಅದಿತಿ ಲಕ್ಷ್ಮಿ ಯವರ ಪೂಜಾ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಲಾ ಕುಂಚ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಸ್ವಾಗತಿಸಿದರು. ಶ್ರೀ ದಿವಾಕರ ಬಲ್ಲಾಳ ನಿರೂಪಿಸಿದರು. ಶ್ರೀ ಯೋಗೀಶ್ ರಾವ್ ಚಿಗುರುಪಾದೆ ವಂದಿಸಿದರು.
Comments (0)
Post Comment
Report Abuse
Be the first to comment using the form below.