(JavaScript required to view this email address)
Mangalore

News & Articles

ಕವಯಿತ್ರಿ ಯಶೋಧ ಗಾಣಿಗ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಮೊಗೆಬೆಟ್ಟು ನವರು. ಗೃಹಿಣಿಯಾಗಿದ್ದ ಇವರು ಈಗ ಅಂಗನವಾಡಿ ಸಹಾಯಕಿಯಾಗಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತಿ ಹಾಗೂ ಹವ್ಯಾಸಿ ಬರಹ ಗಾರ್ತಿಯಾಗಿದ್ದಾರೆ. ಇವರು ಮುಖಪುಟಗಳಲ್ಲಿ  ಸಕ್ರಿಯ ಬರಹಗಾರರು  500ಕ್ಕೂ ಹೆಚ್ಚು ಕವಿತೆಗಳು, ಸಣ್ಣ ಸಣ್ಣ ಲೇಖನ ಕಥೆ ಬರೆದಿದ್ದು ಇದು ನಾಡಿನ ಪ್ರತಿಷ್ಠಿತ ದಿನ ಪತ್ರಿಕೆ, ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ. ಸೋಮಕ್ಷತ್ರಿಯ ಗಾಣಿಗ ಸಮಾಜದ ಸಂಪರ್ಕ ಸುಧಾ ಪತ್ರಿಕೆಯಲ್ಲಿ ಮೊದಲ ಕವನ ಪ್ರಕಟಗೊಂಡು, ವಾಟ್ಸಾಪ್ ಸಾಹಿತ್ಯ ಪತ್ರಿಕೆ ಹಲವಾರು ಬರಹಗಳು ಪ್ರಕಟಗೊಂಡಿದೆ. ಮುಖ ಪುಟದಲ್ಲಿ ಸಕ್ರಿಯವಾಗಿ ಕವನ ಕಥೆ, ಚುಟುಕು, ಟ0ಕಾ, ಹನಿಗವನ ಮುಂತಾದ ಸ್ಪರ್ಧೆ ಭಾಗವಹಿಸಿ ಇ -ಪ್ರಶಸ್ತಿ ಪತ್ರ 300ಕ್ಕೂ ಹೆಚ್ಚು ಲಭಿಸಿವೆ. ಬತ್ತದತ್ತೊರೆ ಸ್ನೇಹ ಬಳಗ ಸ್ತ್ರೀ ಜಾಗೃತಿ ಮೂಡಿಸುವ ಕವನದಲ್ಲಿ ಮೆಚ್ಚುಗೆ, ವಿಶ್ವ ಕನ್ನಡ ರಕ್ಷಕ ದಳ ಮೈಸೂರು ಜಿಲ್ಲಾ ಘಟಕದಲ್ಲಿ  ಅಂತರ್ಜಾಲ ಕಿರು ಲೇಖನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಲಯನ್ಸ್ ಕ್ಲಬ್ ಕುಂಜಿಬೆಟ್ಟು ಆಯೋಜಿಸಿದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ವಿಶ್ವ ಕನ್ನಡ ರಕ್ಷಕ ದಳ ಮೈಸೂರು ಪ್ರೇಮ ಕವಿ ಕೆಎಸ್ ನ ಸ್ಮರಣವಾಗಿ ಆಯೋಜಿಸಿದ ಪ್ರೇಮ ಕವನ ರಚನೆಯಲ್ಲಿ ಮೆಚ್ಚುಗೆ ಸಾಹಿತ್ಯ ಕುಸುಮ ವೇದಿಕೆ ಅತ್ಯುತ್ತಮ ಕವಯಿತ್ರಿ ಎನಿಸಿಕೊಂಡಿದ್ದಾರೆ. ಕುಂದಾಪುರದ ಕೊಚ್ಚಕ್ಕಿ ಕುಡಿಗಳು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುಂದಗನ್ನಡ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಸ್ಥಾನಗಳಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷ ತೊಡಕಿ ಜಿಲ್ಲೆ ಉಡುಪಿ ತಾಲೂಕು ಘಟಕ ಸಹಯೋಗದ ಕಥೆ ಕೇಳೋಣ ಸರಣಿ ಕಾರ್ಯಕ್ರಮದಲ್ಲಿ ಕಥೆಯನ್ನು ವಾಚಿಸಿದ್ದಾರೆ. ಸ್ಪಂದನ ಟಿವಿ ವಾಹಿನಿಯಲ್ಲಿ ನಡೆದ ಕವಿ ಸಮಯ ವಿಶೇಷ ಸಂಚಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ಕವಿಗೋಷ್ಠಿ ಸಾಹಿತ್ಯ ಬಳಗದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಮೂರು ಪುಸ್ತಕದಲ್ಲಿ ಇವರ ಕವನ ಪ್ರಕಟಗೊಂಡಿದೆ.ನಮ್ಮ ಕಥಾ ಅರಮನೆ ಕವನ ಸ್ಪರ್ಧೆ ಯಲ್ಲಿ ಪುಸ್ತಕ ಬಹುಮಾನ ಪಡೆದಿದ್ದಾರೆ.ಇದಲ್ಲದೆ ಕಥೆ,ಕವನ, ರಂಗೋಲಿ, ಚಿತ್ರಕಲೆ, ಕಿರುಚಿತ್ರ, ನಾಟಕ ಚಲನಚಿತ್ರಗಳಲ್ಲಿ ಕೂಡ ಸಕ್ರಿಯವಾಗಿ ಭಾಗವಹಿಸಿ ಜನಮನ್ನಣೆ ಪಡೆದಿದ್ದಾರೆ. 
ಯಶೋದ ಗಾಣಿಗ ಅವರ  ಕಾವ್ಯ ಪ್ರಣತೆ
ಭಾವಾಂತರಂಗದಲ್ಲಿ ಮೂಡಿದ ಮೊಗ್ಗು ಅರಳಿ ಅದರ ಘಮವನ್ನು ಎಲ್ಲೆಡೆ ಪಸರಿಸುತ್ತಾ ಮನಸ್ಸಿನ ಹತ್ತು ಹಲವು ಭಾವಗಳನ್ನು ಅಲೆ ಅಲೆಯಾಗಿ  ಚಿಮ್ಮಿಸಿ ಹೊಮ್ಮಿದ ಮಧುರ ಭಾವವೇ ಕಾವ್ಯ ಪ್ರಣತೆ ಕವನ ಸಂಕಲನ.ಶ್ರೀಮತಿ ಯಶೋದಾ ಗಾಣಿಗ  ರವರ ಚೊಚ್ಚಲ ಕವನ ಸಂಕಲನ  ಕಾವ್ಯ ಪ್ರಣತೆ  ವಾಸ್ತವ ಬದುಕಿಗೆ  ಹಿಡಿವ ಕೈಗನ್ನಡಿಯಾಗಿದೆ. ಹೆಣ್ಣಿನ ಬದುಕಿನ  ಅಂತರಂಗದ ಹೃದಯ ಬಡಿತ,ಸಂಗಾತಿಯ ಪ್ರೀತಿಗೆ ಕಾತರಿಸುವ ತುಡಿತ,ಸೋತು ಗೆಲ್ಲುವ ಅನುರಾಗದ ಮಿಡಿತ,ಇವರ ಕವಿತೆಗಳಲ್ಲಿ ಮಾರ್ಮಿಕವಾಗಿ  ಮೂಡಿ ಬಂದಿದೆ.ಇವರ ಬೆಸುಗೆ ಕವಿತೆಯು ಬಾಳ ಪಯಣದಲಿ ಜೊತೆಯಾಗಿ ಹೆಜ್ಜೆ ಇಡುವ ಅನುರಾಗದ  ಅನುಬಂಧವನ್ನು  ಪ್ರೀತಿಯಿಂದ ಬೆಸೆದಿದೆ.ಚಂದದ ಬದುಕಿಗೆ ಸುಂದರ ಸ್ವಪ್ನಗಳು ಕವಿತೆಯಲ್ಲಿ ಕಲ್ಪನೆಯ ಮಾಯಾ ಬದುಕಿನ ಚಿತ್ರಣವನ್ನು ರಸವತ್ತಾಗಿ ವರ್ಣಿಸಿದ್ದಾರೆ.ಬದುಕನ್ನು ಉಯ್ಯಾಲೆಗೆ  ಹೋಲಿಸುತ್ತಾ ಸುಖ ದುಃಖ ,ಸಿಹಿ ಕಹಿ ಭಾವಗಳ ಜೋಕಾಲಿಯನ್ನು ತೂಗುತ್ತಾ ಬದುಕನ್ನು ಸವಾಲಂತೆ ಎದುರಿಸುವ ಛಾತಿ ಇವರ ಕವಿತೆಯಲ್ಲಿ ಮೂಡಿ ಬಂದಿದೆ.ಸರಳ ಸೌಮ್ಯ ಸ್ವಭಾವದ  ಕವಯಿತ್ರಿ ಯಶೋದಾ ಗಾಣಿಗರವರು ಸಂಗೀತ ,ರಂಗೋಲಿ, ಕಥೆ, ಕವನ, ಕರಕುಶಲ ಕಲೆ ,ಕಿರುಚಿತ್ರ,ನಾಟಕ,ಚಲನಚಿತ್ರದ ಮೂಲಕ  ಜನಮೆಚ್ಚುಗೆ ಗಳಿಸಿದ್ದಾರೆ.ಇವರ ಲೇಖನಿಯಲ್ಲಿ ಮತ್ತಷ್ಟು ಕವಿತೆಗಳು ಹೊರ ಹೊಮ್ಮಲಿ. ಕಾವ್ಯ ಪ್ರಣತೆ  ಕವನ ಸಂಕಲನ ಓದುಗರ ಮೆಚ್ಚುಗೆ ಗಳಿಸಲಿ ಎನ್ನುವ ಶುಭ ಹಾರೈಕೆಗಳೊಂದಿಗೆ…..
                    
ಯಶೋದ ಗಾಣಿಗ ಅವರ  ಕಾವ್ಯ ಪ್ರಣತೆ
  ಪ್ರಜ್ವಲಾ ಶೆಣೈ
 ಶಿಕ್ಷಕಿ, ಹವ್ಯಾಸಿ ಬರಹಗಾರ್ತಿ  ಕಾರ್ಕಳ
ಯಶೋದ ಗಾಣಿಗ ಅವರ  ಕಾವ್ಯ ಪ್ರಣತೆ
ಕಥಾಬಿಂದು ಪ್ರಕಾಶನವು ಹಮ್ಮಿಕೊಂಡಿದ್ದ ಸಾಹಿತ್ಯ ಮಾಲೆ ರಿಯಾಯಿತಿ ದರದಲ್ಲಿ ಪುಸ್ತಕ ಪ್ರಕಟಿಸುವ ಯೋಜನೆ 20 9 23ರಂದು ಸಂಪನ್ನವಾಗಿದೆ. ಈ ಅಭಯಾನದಲ್ಲಿ ಭಾಗವಹಿಸಿ ಪುಸ್ತಕ ಪ್ರಕಟಣೆಗೆ ಅವಕಾಶ ಮಾಡಿಕೊಟ್ಟ ಎಲ್ಲಾ ಬರಹಗಾರರಿಗೂ ಕೃತಜ್ಞತೆಗಳು. ಪುಸ್ತಕ ಪ್ರಕಟಣೆಗೆ ನಾವು ನಮೂದಿಸಿದ ಎಲ್ಲಾ ಪರಿಕರಗಳನ್ನು ಕಳುಹಿಸಿದವರ ಪಟ್ಟಿ ಇಲ್ಲಿದೆ.                                                         
ಕಲ್ಪನಾ ಅರುಣ -ಸಾಗರದಲೆ
ವೇದವತಿ ಭಟ್ -ಭಾವ ಬಿಂದು
ಪುಷ್ಪ ಪ್ರಸಾದ್ -ಭಾವ ನೈವೇದ್ಯ
ಮಂಜುನಾಥ ಹೆಚ್ - ಕಾಕಿ ಕವಿ ಮಲ್ಲಿಗೆ ಮಾಲೆ
ಟಿ. ತ್ಯಾಗರಾಜು ಮೈಸೂರು -ಮಳೆ ಬಿಲ್ಲು
ಪ್ರಜ್ವಲಾ ಶೆಣೈ- ಸಮರ್ಪಣ 
ಭುವನ ಅಂಗಡಿ- ನೈದಿಲೆ ನಗು
ಉಷಾ ಪ್ರಕಾಶ್ -ಕಾನನ ಕುಸುಮ
ಅಂಜಲಿ ತೊರವಿ - ಕಾಣದ ಭಾವನೆಯ ಬಣ್ಣ
ದೀಪಿಕಾ ಉಡುಪಿ- ಅಕಲ್ಪತ ಹಾತೆ
ರತ್ನಾ ಕೆ.ಭಟ್,ತಲಂಜೇರಿ-ಸ್ವಪ್ನ ಸುಂದರಿ
ರವೀಶ ಕೆ- ಬೇಕಾಗಿದೆ...                                                                                                                                                                                
ವೀಣಾ ರಾವ್- ಅಹರ್ನಿಶಿ
ರೇಖಾ ಸುದೇಶ್ ರಾವ್ -ನವಚೇತನ
ಆಶಾ ಅಡೂರ್- ಭಾವ ನಿಧಿ
ಡಾ. ಸುಮತಿ -ಚುಕ್ಕಿ ಚಂದ್ರಮ
ಕವಿತಾ- ಭಾವ ಲಹರಿ
ಪೂರ್ಣಿಮಾ ಯಲಿಗಾರ -ಒಲವಿನ ಜೋಡಿ
ಲತಾ ಸಂತೋಷ್ ಶೆಟ್ಟಿ- ಬಿರಿವ ಮೊಗ್ಗುಗಳು                                                                                                                               
ಸುಶೀಲ ಎಸ್ ಅಮೀನ್ ಕೊಡವುರು-ಭಾವಗಳು ಕವಿತೆಗಳಾದಾಗ...
ಸುನೀತಾ ನೆಲಗದ್ದೆ-ದರ್ಪಣ
ರಾಧಾಮಣಿ ಎಂ-ಕುಸುಮ ಕಣಿವೆ
ಸರಸ್ವತಿ ಕೋಟೇಶ್ವರ- ಒಲವ ಶ್ರುತಿ
ಪರಿಮಳ-ಕುಸುಮಬಾಲೆ
ಸತೀಶ್ ಬಿಳಿಯೂರು- ನನ್ನೆದೆ ಸಪ್ಪಳ                                                                                                                                                        
ಭಾರತಿ ಕೊಲ್ಲರ ಮಜಲು-ವಿಶಾರದೆಯ ಹನಿ
ಯಶೋದ ಗಾಣಿಗ-ಕಾವ್ಯ ಪ್ರಣತೆ
ಜಯಂತಿ- ಪ್ರಕೃತಿ ಮಡಿಲಲ್ಲಿ
ಪೂರ್ಣಿಮಾ ಭಗವಾನ್-ವಿನೂತನ
ಚಂದ್ರಕಲಾ ನಿರಾಳ -ಅಪೂರ್ಣ                                                                                                                                       
ಭವ್ಯಸುಧಾಕರ -ಜಗಮನೆ ಲೋಕರತ್ನ                                                                                                                                                       
ಪ್ರಕಟವಾದಂತೆ ಪುಸ್ತಕ ಪರಿಚಯವನ್ನು ಈ ವೇದಿಕೆಯಲ್ಲಿ ಬಿತ್ತರಿಸಲಾಗುವುದು. 
ಈ ಪುಸ್ತಕಗಳನ್ನು ಅದ್ದೂರಿ ಕಾರ್ಯಕ್ರಮದಲ್ಲಿ 29 10 23ರಂದು ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇದೇ ಜಾಲತಾಣದಲ್ಲಿ  ತಿಳಿಸಲಾಗುವುದು. ತಾವು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ. ಈ ಬಗ್ಗೆ ಆಹ್ವಾನ ಪತ್ರ ಈ ವಾರದಲ್ಲಿ ಬಿಡುಗಡೆಯಾಗಲಿದೆ. ವಿನೂತನವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ನಾವೆಲ್ಲ ಒಟ್ಟಿಗೆ ಸೇರೋಣ.

ಯಶೋದ ಗಾಣಿಗ ಅವರ  ಕಾವ್ಯ ಪ್ರಣತೆ
ಪಿ ವಿ ಪ್ರದೀಪ್ ಕುಮಾರ್ ಪ್ರಕಾಶಕರು

Comments (0)




Be the first to comment using the form below.