ಶಿರೂರು ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ
ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯ ಸಮ್ಮೇಳನ 2026 ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಏಪ್ರಿಲ್ 12 ರಂದು ಜರುಗಲಿದೆ.
ಅಂದು ವಿವಿಧ ಸಾಹಿತಿಗಳ 20 ಕೃತಿಗಳ ಅನಾವರಣ ನಡೆಯಲಿದೆ. ಅದೇ ದಿನ ಬಿ ಕೆ ಮಾಧವ ರಾವ್ ಅವರಿಗೆ ಕಲಾ ತಿಲಕ ಬಿರುದು ಪ್ರದಾನ, ಶ್ರೀಮತಿ ಪುಷ್ಪರಾಧ್ಯ ಗಾಯನ ಕ್ಷೇತ್ರ , ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ಡಾ ಬಾಲಕೃಷ್ಣ ಎಸ್ ಮುದ್ದೋಡಿ ಅವರಿಗೆ ಸಾಮಾಜಿಕ, ಶ್ರೀಮತಿ ಸಂಧ್ಯಾ ರಾಣಿ ಟೀಚರ್ ಕನ್ನಡ ಭವನ ಕಾಸರಗೋಡು ಅವರಿಗೆ ಸಾಮಾಜಿಕ, ಲೇಖಕಿ ಶ್ರೀಮತಿ ಲಕ್ಷ್ಮಿ ಕೆ ಅವರಿಗೆ ಸಾಹಿತ್ಯ ಮತ್ತು ನಾಣ್ಯ ಸಂಗ್ರಹ, ಶೋಭಾ ಹರಿಪ್ರಸಾದ್ , ಶ್ರೀಮತಿ ಕುಸುಮಾ ಹತ್ಯಾಳ ಸಾಹಿತ್ಯ ಹಾಗೂ ಸುಮಕಿರಣ್ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಸ್ವೀಕರಿಸುವರು. ಅಯನ ವಿ.ರಮಣ್ ಬಹುಮುಖ ಪ್ರತಿಭೆಗಾಗಿ ಹಾಗೂ ಕುಮಾರಿ ವಂಶಿ ವೈ ಕೋಟ್ಯಾನ್ ನೃತ್ಯ ಸಾಧನೆಗಾಗಿ ಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು( ಪರ್ಯಾಯ ಶ್ರೀ ಶಿರೂರು ಶ್ರೀ ಕೃಷ್ಣ ಮಠ ಉಡುಪಿ) ನೆರವೇರಿಸುವರು.
ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಅನಾವರಣವನ್ನು ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಅವರು ಹಾಗೂ ಉದ್ಯಮಿ ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ ಇವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭುವನಾ ಭಿರಾಮ ಉಡುಪ
ಹಾಗೂ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಜಯಾನಂದ ಪೆರಾಜೆ ಉಪಸ್ಥಿತಿ.. ಡಾ . ವಾಮನ್ ರಾವ್ ಬೇಕಲ್ ಕನ್ನಡ ಭವನ ಕಾಸರಗೋಡು.. ಆಗಮಿಸಲಿರುವರು ಎಂದು ಆಯೋಜಕರಾದ
ಪಿ ವಿ ಪ್ರದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments (0)
Post Comment
Report Abuse
Be the first to comment using the form below.