ಬಾಲ್ಯದಲ್ಲಿ ತಾಯಿಯೊಂದಿಗೆ ಅಜ್ಜ ಅಮ್ಮಂದಿರ ಆಶ್ರಯದಲ್ಲಿ ಬೆಳೆದಳೋ? ಅಥವಾ ಅಜ್ಜ ಅಮ್ಮಂದಿರ ಆರೈಕೆ ಮಾಡುತ್ತಾ ಬೆಳೆದಳೋ? ಎಂಬ ಗೊಂದಲದಲ್ಲಿರುವಾಗ ನನಗೆ ಇದೀಗ ಅಜ್ಜ ಅಮ್ಮಂದಿರನ್ನು ಗುರಿಯಾಗಿಸಿ ಅಕ್ಷರಗಳನ್ನು ಪೋಣಿಸುತ್ತಾ ಕವಿತ್ರಿಯಾಗಿ ರೂಪುಗೊಳ್ಳುತ್ತಿರುವಳೋ? ಅಥವಾ ಅವಳ ಕವನಗಳಿಗೆ ಹೋಲುವ ಅಂತ ಜೀವನಶೈಲಿ ಆ ಹಿರಿಯರದ್ದೋ? ಎಂಬ ಸಂಶಯ ಉಂಟಾಗುತ್ತಿದೆ. ಹರಸಿದವರನ್ನು ವರಿಸಿದವರನ್ನು ಅಕ್ಷರಗಳಿಂದ ಕಟ್ಟಿಹಾಕಿ ಕವಿತ್ರಿಯಾಗಿ ರೂಪುಗೊಳ್ಳುತ್ತಿರುವ ಶ್ವೇತ ಮನಸಿನ ಶ್ವೇತಕ್ಕ ಸ್ನೇಹಿತ ಶೀತಲ್ ಕುಮಾರನ ಸುಪುತ್ರಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ತಂದೆ ಶೀತಲ್ ಕುಮಾರ್ ವಕೀಲರು ಮತ್ತು ತಾಯಿ ಶಿಕ್ಷಕಿ ಅಜ್ಜಂದಿರಿಬ್ಬರೂ ಆಧ್ಯಾತ್ಮಿಕ ಪ್ರವಚನಕಾರರು ಅಜ್ಜಿಯಂದಿರಿಬ್ಬರೂ ಅಪ್ಪಟ ಮನೆಮನಗಳ ಒಡತಿಯರು. ಸಕುಟುಂಬದ ಸಂಪ್ರದಾಯಗಳನ್ನು ಹಾಸಿ ಹೊದ್ದು ಬೆಳೆದ ಶ್ವೇತಾಳ ಏರುವಯಸ್ಸಿನಲ್ಲಿ ಹೊರ ಹೊಮ್ಮುತ್ತಿರುವ ಈ ಕೃತಿ ಭವಿಷ್ಯದ ಮೇರು ಕೃತಿಗಳಿಗೆ ಮುನ್ನುಡಿಯಾಗಲಿ ಎಂಬುದೇ ನನ್ನ ಹಾರೈಕೆಗಳು
Comments (0)
Post Comment
Report Abuse
Be the first to comment using the form below.