(JavaScript required to view this email address)
Mangalore

News & Articles

 ಸುಶೀಲ ಸತೀಶ್ ಅಮಿನ್, ಕೊಡವೂರು ಅವರ “ಭಾವಗಳು ಕವಿತೆಗಳಾದಾಗ”ಕವನಸಂಕಲನ ಭಾವನೆಗಳ ಒಳತಿರುಳಿಗೆ ಜನುಮ ನೀಡುತ್ತದೆ. ಶ್ರೀ ಸಾಯಿಬಾಬಾ, ರಾಮನಾಮದ ಭಕ್ತಿಯ ಸಿಂಚನ, ಆತನೊಬ್ಬ ಕರ್ಮಜೀವಿ ಕಾಲದೊಂದಿಗೆ ಕಥೆಯಾದವ ವಾಸ್ತವ ಜಗತ್ತಿಗೆ ಹಿಡಿದ ಕನ್ನಡಿ. ಪ್ರೀತಿ ವಿಶ್ವಾಸದ ನೂಲು ಹೇಗೆ ಹರಿದು ವೃದ್ದಾಶ್ರಮದ ಎತ್ತರದ ನಾಲ್ಕು ಗೋಡೆಗಳು ಬೆಳೆದವು, ನಡೆವ ದಾರಿಯಲಿ ಮಾನವೀಯತೆಯಿರಲಿ, ನುಡಿವ ನುಡಿಯಲಿ ಅಮೃತವಾಣಿಯಿರಲಿ ಎಂಬ ಭಾವನೆಗಳ ಕವನದ ಮೂಲಕ ಹೊರಹಾಕುವ ಕವಯತ್ರಿಯ ಮನದ ಭಾವನೆಗೆ ಶರಣು ಹಾಡಲೇಬೇಕು.ಕವನ ಜಳ್ಳಾಗಿರದೆ ಒಂದಲ್ಲ ಒಂದು ಸೂಚನೆಯನ್ನು, ಸಂದೇಶವನ್ನು ನೀಡಿದೆ. ಚೈತನ್ಯದ ಬೆಳಕು ಮೂಡಿಬರಲಿ ಎಂಬ ಆಶಾದಾಯಕ ಕವನ, ಅಮ್ಮನಗಲಿಕೆ ಮನಮುಟ್ಟುವ ಕವನ. ಕರ್ಮ ಭೂಮಿಗೆ ಚಿರಋಣಿ ಸಲ್ಲಿಸಿದ ಬಗ್ಗೆ ನಾಜೂಕಿನೊಂದಿಗೆ ತಿಳಿಸಿದ್ದಾರೆ. ನೋವ ಹಿಂದೆಯೂ ನಗುವಿನ ಮುಖವಾಡ ಧರಿಸುವ ಭವ್ಯ ನಟಿ ಅಕ್ಕನೆಂಬ ದೇವಿ ಕವನ ವಾತ್ಸಲ್ಯದ ತುಣುಕು. 

ಸುಶೀಲ   ಎಸ್ ಅಮಿನ್ ಕೊಡವೂರು ಅವರ ಭಾವಗಳು  ಕವಿತೆಗಳಾದಾಗ....

ಬಾಂಧವ್ಯದ ಮಡಿಲಿನ ಒಂದೊ0ದು ಮೆಟ್ಟಿಲನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಭಾವೈಕ್ಯದ ಬಂಧನಕೆ ಅನುವು ಮಾಡಿಕೊಡುವ ಬಗ್ಗೆ ಜಾತಿ-ಧರ್ಮ,ನ್ಯಾಯ-ಅನ್ಯಾಯ, ತಂತ್ರ-ಕುತ0ತ್ರದ ಬೆಂಕಿಯಲ್ಲಿ ಗಹಗಹಿಸುವ ವಿಚಾರಗಳ ಅನಾವರಣಗೊಳಿಸುವ ಶಬ್ದಗಳ ಕವನ ರೂಪ ತಾಳಿ ಎಚ್ಚರಿಸಿದೆ. ಪ್ರಕೃತಿ ಋತುವಿನ ಸಮಾಗಮ ಅಂದವಾಗಿ ಬಣ್ಣಿಸಿದ್ದಾರೆ. ತುಕ್ಕು ಹಿಡಿದ ಬಂಡಿಯAತ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಚಿಂತೆ ಕಳಕಳಿಯದ್ದು. ನಿದ್ದೆಯ ಬಗೆಗಿನ ಕವನ ಆಧುನಿಕತೆಯಲ್ಲಿ ಎಲ್ಲವನ್ನು ಗಳಿಸಿ ಉಳಿಸಿಕೊಳ್ಳಬೇಕಾದುದನ್ನು ಕಳೆದುಕೊಂಡ ವಿಚಾರದ ಚಿತ್ರಣ. ಪ್ರೀತಿಯ ಅಮಲಿನ ಅಲೆಯು, ಪರಿಸರ ಹಾಳುಗೆಡವಿದರ ಫಲವು, ನದಿ,ಸರೋವರ ತನ್ನ ಮೂಲ ತತ್ವ ಕಳೆದುಕೊಂಡ ಪರಿಯು ಕವನವಾಗಿ ಮೂಡಿಬಂದಿದೆ.



ಸುಶೀಲ   ಎಸ್ ಅಮಿನ್ ಕೊಡವೂರು ಅವರ ಭಾವಗಳು  ಕವಿತೆಗಳಾದಾಗ....

ಲತಾ ಸಂತೋಷ ಶೆಟ್ಟಿ ಮುದ್ದುಮನೆ,

ಅಂಕಣ ಬರಹಗಾರರುಸಾಹಿತಿ

ಸುಶೀಲ   ಎಸ್ ಅಮಿನ್ ಕೊಡವೂರು ಅವರ ಭಾವಗಳು  ಕವಿತೆಗಳಾದಾಗ....
ಸುಶೀಲ   ಎಸ್ ಅಮಿನ್ ಕೊಡವೂರು ಅವರ ಭಾವಗಳು  ಕವಿತೆಗಳಾದಾಗ....

Comments (0)




Be the first to comment using the form below.