(JavaScript required to view this email address)
Mangalore

News & Articles

 ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಕವನ ಹುಟ್ಟುವ ಸಮಯ ಕುರಿತು ಹೀಗೆ ಹೇಳತ್ತಾರೆ.
      ಆಳಧನುಭವವನ್ನು ಮಾತು ಕೈ ಹಿಡಿದಾಗ
       ಕಾವು ಬೆಳಕಾದಾಗ ಒಂದು ಕವನ
       ಮನುಷ್ಯನ ಬದುಕು ಆಧುನಿಕ ನಾಗರಿಕ ಸಮಾಜದ ಆವರಣಕ್ಕೆ ಬರುವ  ಮೊದಲಿನಿಂದಲೂ ಕಾವ್ಯವೆಂಬ  ಅಭಿವ್ಯಕ್ತಿ ಇತ್ತು. ಮನುಷ್ಯ ಈ ಪ್ರಕೃತಿಯೊಡನೆ ಸಂಪಾದಿಸುತ್ತಾ, ವರ್ತಿಸುತ್ತ, ಒಡನಾಡುತ್ತಾ, ಘರ್ಷಿಸುತ್ತಾ ಅದರ ರಮಣೀಯತೇ ಅಚ್ಚರಿಗೊಳ್ಳುತ್ತಾ, ರುದ್ರ ಭೀಕರತೆಗೆ ಭಯಗೊಳ್ಳುತ್ತಾ ಪ್ರಚೋದಿತರಾಗಿ ಕಾವ್ಯಪ್ರಜ್ಞೆ ಜಾಗೃತವಾದ ಉಲ್ಲೇಖಗಳಿವೆ.
        
ಸುನೀತ ನೆಲೆಗದ್ದೆ ಅವರ ಕವನಗಳ ಸಂಕಲನ 'ದರ್ಪಣ'
ಪ್ರತಿಭೆಗೆ ಗೋಚರಿಸುವ ವಿನ್ಯಾಸ ಕವಿತೆಗಳಾಗಿ ರೂಪು ಪಡೆಯುತ್ತವೆ. ಮೂಲತಃ ಉಡುಪಿ ಜಿಲ್ಲೆಯವರಗಿದ್ದು, ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಕ್ಕಿಮನೆ ವಾಸಿಯಾಗಿರುವ ಸುನೀತ ನೆಲೆಗದ್ದೆ ಮೇಡಂ ಅವರು ಭಾಷೆ ಸಾಹಿತ್ಯದ ಒಡನಾಡಿಯಾಗಿ ಸಂಗೀತ, ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಅಂದ  ಹಾಗೆ ಇವರ ಯಾವ ಕವನವೂ ವಾಸ್ತವತೆಯನ್ನು ಸಂಪೂರ್ಣವಾಗಿ ಬಿಟ್ಟು ವಿಹರಿಸುವಂತೆ ಕಂಡು ಬರುವುದಿಲ್ಲ. ಪದಗಳ ಸಂಯೋಜನೆಯಲ್ಲಿ ಭಾಷೆಯನ್ನು ನಿಯಂತ್ರಣಗೊಳಿಸಿ, ಪ್ರತಿಮೆ ಸಂಕೇತಗಳನ್ನು ಬಳಸಿ, ಲಯಬದ್ಧ ರೀತಿಯಲ್ಲಿ ಅರ್ಥವತ್ತಾಗಿ ಅನುಭವವನ್ನು ಹಿಡಿದಿಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತವೆ. ಪ್ರಕೃತಿ ಸೌಂದರ್ಯ, ಬದುಕನ್ನು ಅನುಭವಿಸುವ ವೈಶಾಲ್ಯ ಹೃದಯ ಆರ್ದ್ರಗೊಳಿಸುವ ಪ್ರೀತಿಯ ಒರತೆ ಇವೆಲ್ಲದರ ಸ್ವಾದಿಷ್ಟ ಹೂರಣವನ್ನು ತಮ್ಮ ಮೂವತ್ತು ಕವನಗಳ ಸಂಕಲನ 'ದರ್ಪಣ' ದ ಮೂಲಕ ಉಣಬಡಿಸಿದ್ದಾರೆ. ಕನ್ನಡ ನಾಡು-ನುಡಿ, ಅಭಿಮಾನಿಗಳೆಲ್ಲರೂ ಕವನ ಸಂಕಲನವನ್ನು ಕೊಂಡು ಓದಿ ಪ್ರೋತ್ಸಾಹಿಸುವ ಮನಸ್ಸು ಮಾಡಿದರೆ ಬರೆದವರಿಗೂ ಪುಸ್ತಕ ಪ್ರಕಾಶನ ಮಾಡಿದವರಿಗೂ ಶ್ರಮ ಸಾರ್ಥಕವೆನಿಸುವುದು. ಶ್ರೀಮತಿ ಸುನೀತ ನೆಲೆಗದ್ದೆ ಮೇಡಂ ಅವರ ಚೊಚ್ಚಲ ಕೃತಿ ಓದುಗರ ಮನ ಸೆಳೆದು ಯಶ ಸಾಧಿಸಲಿ. ಇನ್ನಷ್ಟು ಸಾಹಿತ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುವಂಥ ಪ್ರೇರಣೆ, ಪ್ರೋತ್ಸಾಹ ಸುನೀತ ಅವರಿಗೆ ದೊರಕಲಿ ಶುಭಾಶಯಗಳು.
ಸುನೀತ ನೆಲೆಗದ್ದೆ ಅವರ ಕವನಗಳ ಸಂಕಲನ 'ದರ್ಪಣ'
ಸುನೀತ ನೆಲೆಗದ್ದೆ ಅವರ ಕವನಗಳ ಸಂಕಲನ 'ದರ್ಪಣ'
  ಎಸ್. ಎನ್. ಚಂದ್ರಕಲಾ ಕೊಪ್ಪ
ಸುನೀತ ನೆಲೆಗದ್ದೆ ಅವರ ಕವನಗಳ ಸಂಕಲನ 'ದರ್ಪಣ'
ದರ್ಪಣ

ಬದುಕಿನ ನೂರು ಕವಲಿಗೆ
ಮುನ್ನುಡಿಗಳು ಸಾವಿರಾರು
ನಡೆನುಡಿಗಳೆಡೆಯಿಂದ ಅಡಿಗಡಿಗೆ
ಹೊಸತನವನಿತ್ತವರು ಅನೇಕರು!!

"ಅಮ್ಮ" ಎಂಬ ತೊದಲು ನುಡಿ
ಎಂತು ಹೊರಹೊಮ್ಮಿತು
ನವೀನ ಬದುಕಿನ ಆರಂಭಕೆ
ಗಾಯನದ ಚಿತ್ತಾರ ಅರಳಿಸಿತು!!

ತಪ್ಪು ಒಪ್ಪುಗಳ ಅಳತೆಗೋಲು
ಸುಖ-ದುಃಖಗಳ ಅಲೆಗಳು
ವಾದಾ-ವಾಗ್ವಾದಗಳ ಹೊಡೆತ
ಅನುಭವಗಳ ಅಮೃತ ಸುಧೆ!!

ನಿಗಮ ಅನುಗಮನವಿರೆ
ಮುಂದಿನ ಮಾರ್ಗ ಇದಿರಿರೆ
ಮನ ಗುರಿಯೆಡೆಗೆ ಅರ್ಪಣ
ಸಾಗಿ ಬಂದ ಪಥವೇ ಬಾಳಿಗೆ ದರ್ಪಣ!!
ಸುನೀತ ನೆಲೆಗದ್ದೆ ಅವರ ಕವನಗಳ ಸಂಕಲನ 'ದರ್ಪಣ'

Comments (0)




Be the first to comment using the form below.