ಶ್ರೀಮತಿ ಹೆಚ್.ಸುಂದರಮ್ಮ ನವರು ಉತ್ತಮ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ ಸಾಹಿತ್ಯ ಚಟುವಟಿಕೆಯಲ್ಲಿ ಬಹಳ ಆಸಕ್ತಿ ಹೊಂದಿದ್ದು ಕವನಗಳು, ಕಥೆಗಳು, ರುಬಾಯಿ, ಹಾಯ್ಕು, ಚುಟುಕು, ಹನಿಗವನ ಶಿಶುಗೀತೆ ಮುಂತಾದವುಗಳನ್ನು ಬರೆಯುತ್ತಾ ಬಂದಿದ್ದಾರೆ.ವಿಷಯ ಕೊಟ್ಟ ತಕ್ಷಣವೇ ವಿಷಯದ ಬಗ್ಗೆ ಕವನಗಳನ್ನು ರಚಿಸುವ ಸಾಹಿತ್ಯ ಶಕ್ತಿ ಹೊಂದಿದ್ದಾರೆ. ತುಂಬಾ ಸೂಕ್ಷ್ಮ ಮತಿಯನ್ನು ಹೊಂದಿರುತ್ತಾರೆ. ಇವರ ಕವನಗಳಿಗೆ ಅನೇಕ ಬಹುಮಾನಗಳು ಸಂದಿವೆ; ಪ್ರಶಸ್ತಿಗಳು ಲಭಿಸಿವೆ.ಇವರು ಕನ್ನಡದಲ್ಲಿ ತುಂಬಾ ಸರಳವಾಗಿ ಮತ್ತು ಅರ್ಥವಾಗುವಂತೆ ಕವನಗಳನ್ನು ರಚಿಸಿದ್ದಾರೆಮತ್ತು ಶಾಲೆಯಲ್ಲೂ ಕೀರ್ತಿ ಗಳಿಸಿದ್ದಾರೆ. ನಮ್ಮ ರಾಜ್ಯಕ್ಕೆ ದೇಶಕ್ಕೆ ಇಂಥಹಾ ಮನಸ್ಸುಳ್ಳ ಶಿಕ್ಷಕರು ನಮ್ಮ ನಾಡಿನ ಆಸ್ತಿಯಾಗಿದ್ದಾರೆ. ಸಮಯ ಪ್ರಜ್ಞೆ ಮತ್ತು ಕ್ರೀಯಾಶೀಲತೆಯನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಇವರ ಬಗ್ಗೆ ಬರೆಯಲು ನನಗೆ ಹೆಮ್ಮೆ ಅನಿಸುತ್ತದೆ. ಚಿಕ್ಕಂದಿನಿAದಲೂ ಹಳ್ಳಿಯಲ್ಲಿ ಹುಟ್ಟಿ ರೈತಾಪಿಯವರ ಕುಟುಂಬದಲ್ಲಿ ಬೆಳೆದು ಓದಿಕೊಂಡು. ಹಳ್ಳಿ ಜನರ ಕಷ್ಟಗಳನ್ನು ಅರಿತವರಾಗಿದ್ದರಿಂದ ಯಾವ ವಿಷಯದಲ್ಲೂ ಅನುಭವದಿಂದ ಅದಕ್ಕೆ ಜೀವತುಂಬುವAತೆ ರಚಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಸಾಧನೆ ಅಪಾರವಾದದ್ದು. ಸಂಸಾರವನ್ನು ಸರಿಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ ಮತ್ತು ಕನ್ನಡ ತಾಯಿಯ ಸೇವೆ ಮಾಡುತ್ತಿದ್ದಾರೆ. ಇವರಿಗೆ ಬರೆಯಲು ಮತ್ತು ಕನ್ನಡ ಸೇವೆಯನ್ನು ಮಾಡಲು ಇನ್ನೂ ಹೆಚ್ಚಿನ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇನೆ.
ಎಸ್.ಜಿ.ಲಕ್ಷ್ಮೀದೇವಮ್ಮ
ಜಾನಪದ ಕಲಾವಿದರು, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯರು
Comments (0)
Post Comment
Report Abuse
Be the first to comment using the form below.