ಶ್ರೀಮತಿ ಶುಭಾ ವಿಷ್ಣು ಸಭಾಹಿತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಅಗ್ರಹಾರ ಹಳದಿಪುರದವರು. ಅವರ ಓದು ಬಿಎ ಬಿಎಡ್. ಅವರು ವೃತ್ತಿಯಲ್ಲಿ ಗೃಹಣಿ. ಕಂಪ್ಯೂಟರ್, ಸಂಗೀತ, ಟೈಲರಿಂಗ್, ರಂಗೋಲಿ, ಮುಂತಾದವು ಅವರ ಇತರ ಆಸಕ್ತಿಗಳು.
ಶ್ರೀಮತಿ ಶುಭಾ ವಿಷ್ಣು ಸಭಾಹಿತ ಉತ್ತಮ ಬರಹಗಾರ್ತಿ. ಸಿರಿಗನ್ನಡ ಮಹಿಳಾ ವೇದಿಕೆಯ ಹೊನ್ನಾವರ ತಾಲೂಕಿನ ಅಧ್ಯಕ್ಷೆ. ತುಂಬಾ ಸಾಹಿತ್ಯ ಬಳಗಗಳಲ್ಲಿ ತೀರ್ಪುಗಾರಿಕೆ ಮಾಡಿದ್ದಾರೆ.
ಶ್ರೀಮತಿ ಶುಭಾ ಸಭಾಹಿತ ಅವರಿಗೆ ಸುಮಾರು 200ರಷ್ಟು ಪ್ರಶಸ್ತಿಗಳು ಬಂದಿವೆ. ಇತ್ತೀಚಿಗೆ ಅವರಿಗೆ ಪ್ರಭುದೇವ ಜ್ಞಾನವಿಕಾಸ ವೇದಿಕೆ ಯುಗಾದಿ ಕವನ ಸ್ಪರ್ಧೆಯಲ್ಲಿ ಅತ್ಯುತ್ತಮ ಸ್ಥಾನ ಲಭಿಸಿದೆ. 2023 ನೇ ಸಾಲಿನ ಹೆಮ್ಮೆಯ ಕನ್ನಡತಿ ಪ್ರಶಸ್ತಿ ಅವರಿಗೆ ಸಂದಿದೆ. ಇತ್ತೀಚೆಗೆ ಸಮಾಜ ಸೇವಾ ರಾಜ್ಯ ಪ್ರಶಸ್ತಿ, ಅಮೃತ ಭಾರತಿ ರಾಷ್ಟ್ರೀಯ ಪ್ರಶಸ್ತಿ , ಮಹಿಳಾ ಸಾಧಕಿ ಪ್ರಶಸ್ತಿ, ಸಿರಿಗನ್ನಡ ಮಹಿಳಾ ವೇದಿಕೆ ಕೊಡ ಮಾಡುವ ಕರುಭಾಷಾ ಸಾಹಿತ್ಯ ಸಿರಿ ಸೇವಾ ರತ್ನ, ಮಾತೃ ಭೂಮಿ ಸೇವಾ ರತ್ನ, ಭಾರತ ಸೇವ ರತ್ನ ಪ್ರಶಸ್ತಿ, ಹೊಯ್ಸಳ ಸಾಧನ ಚಾಣಕ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವೃತ್ತಿಯಲ್ಲಿ ಗೃಹಿಣಿಯಾಗಿದ್ದು ಹೊನ್ನಾವರದಲ್ಲಿ ಗಣಪತಿ ದೇವಸ್ಥಾನ ಧಾರ್ಮಿಕ ಕೆಲಸದ ನಿರ್ವಹಣೆ ಕೂಡ ಮಾಡುತ್ತಿದ್ದಾರೆ. ವಿಷ್ಣು ಸಭಾಹಿತ ಅವರ ಪತಿ. ಅವರು ಉದ್ಯಮಿ. ಮಗ ಡಿಗ್ರಿ ಓದುತ್ತಿದ್ದಾನೆ. ಪ್ರಥಮ ದರ್ಜೆ ಕ್ರಿಕೆಟ್ ಆಟಗಾರ. ಅಂಡರ್ 17 ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗಿದ್ದಾನೆ. ಈಗ ಕ್ರಿಕೆಟ್ ನಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಶ್ರೀಮತಿ ಶುಭಾ ವಿಷ್ಣು ಸಭಾಹಿತ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮಾಜದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಂದಿದೆ. ಸನಾತನ ಹಿಂದೂ ಸಂಸ್ಥೆಯ ಸದಸ್ಯ ಹಾಗೂ ಎಲ್ಲಾ ಸಭೆಗಳಲ್ಲಿ ಚರ್ಚೆಗೆ ಹೋಗುತ್ತಾರೆ.
ಶ್ರೀಮತಿ ಶುಭಾ ವಿಷ್ಣು ಸಭಾಹಿತ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾರೆ. ಸಾಹಿತ್ಯಕ ಬಳಕೆಗಳಲ್ಲಿ ಬರವಣಿಗೆ ಮಾಡುವುದಲ್ಲದೆ ತಮ್ಮ ಕೌಶಲ್ಯವನ್ನು ತೀರ್ಪುಗಾರಿಕೆಗೆ ಉಪಯೋಗಿಸುತ್ತಾರೆ. ಬಹುಮುಖ ಪ್ರತಿಭೆಯ
ಶ್ರೀಮತಿ ಶುಭಾ ವಿಷ್ಣು ಸಭಾಹಿತ ಎಲೆ ಮರೆಯ ಕಾಯಿಯಂತೆ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ರಾಗಿದ್ದಾರೆ.
ಡಾ ಶುಭಾ ವಿಷ್ಣು ಸಭಾಹಿತ ಅವರಿಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿ ಗೌರವ ಡಾಕ್ಟರೇಟ್ ಕೊಟ್ಟು ಸನ್ಮಾನಿಸಿದೆ.
ಡಾ ಶುಭಾ ಸಭಾಹಿತ ಅವರು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದು ಉತ್ತಮ ಕವಯಿತ್ರಿ ಮತ್ತು ಲೇಖಕಿಯು ಆಗಿದ್ದಾರೆ ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ.
ಶುಭಾ ಸಭಾಹಿತ ಅವರಿಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿಯಯ ಗೌರವ ಡಾಕ್ಟರೇಟ್ ಕೊಟ್ಟು ಸನ್ಮಾನಿಸಿದೆ.
ಶ್ರೀಮತಿ ಶುಭಾ ಸಭಾಪತಿ ಅವರ ನಿಸ್ವಾರ್ಥ ಸೇವೆ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಹೆಚ್ಚಾಗಿ ಸಿಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.
ಡಾ ಶುಭಾ ವಿಷ್ಣು ಸಭಾಹಿತ ಅವರು ಈ ತಿಂಗಳ 27ರಂದು ಕುಪ್ಪಳ್ಳಿಯಲ್ಲಿ ನಡೆಯುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಗೆ ಆಯ್ಕೆಯಾಗಿದ್ದಾರೆ
Comments (0)
Post Comment
Report Abuse
Be the first to comment using the form below.