(JavaScript required to view this email address)
Mangalore

News & Articles

ಮೂಲ್ಕಿ: ಓದುಗರ ಮನಸ್ಸು ಆರಳಿಸುವಂತ ಸಾಹಿತ್ಯ ಕೃತಿಗಳ ಸೃಷ್ಠಿಯಾದಲ್ಲಿ ಮಾತ್ರ ಉನ್ನತ ಮನಸ್ಚಿತಿಯ ಸಮಾಜ ನಿರ್ಮಾಣ ಸಾಧ್ಯ.

ಯುವ ಜನರನ್ನು ಉತ್ತಮ ಸಾಹಿತ್ಯ ಕರ್ತುಗಳನ್ನಾಗಿಸುವ ಕಾರ್ಯ ಅಭಿನಂದನೀಯ ಎಂದು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಮೂಲ್ಕಿಯಲ್ಲಿ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಪಿಂಗಾರ ಸಾಹಿತ್ಯ ಬಳಗ ಅಶ್ರಯದಲ್ಲಿ ಭಾನುವಾರ ನಡೆದ ಸಾಹಿತ್ಯಾವಲೋಕನ ಕಾರ್ಯಕ್ರಮ, ರೇಮಂಡ್‌ ಡಿ'ಕುನ್ಹ ಅವರ ಕವನ ಸಂಕಲನ "ನನ್ನವಳ ಕವಳ' ಬಿಡುಗಡೆಗೊಳಿಸಿ ಮಾತನಾಡಿದರು. ಹಿರಿಯ ಗಜಲ್‌ ಕವಿ ಡಾ.ಸುರೇಶ್‌ ನೆಗಳಗುಳಿ 'ನನ್ನವಳ ಕವಳ' ಕವಿತಾ ಸಂಕಲನದ ಬಗ್ಗೆ ಮಾತನಾಡಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಕೆನ್ಯೂಟ್‌ ಪಿಂಟೊ ಮಾತನಾಡಿದರು. ರೇಡಿಯೋ ಸಾರಂಗ್‌ ಹಿರಿಯ ನಿರೂಪಕ ಎಡ್ವರ್ಡ್‌ ಲೋಬೊ ಮಾತನಾಡಿ, ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ರಚಿಸಿದ ಪ್ರಾಸಬದ್ಧ ಕವನ ಸಂಕಲನ ನಿಜ ಜೀವನದ ಭಾವಾರ್ಥ ಕಲಿಸಿಕೊಡುವ ಉತ್ತಮ ಸಂದೇಶ ಸಾರುತ್ತಿದೆ ಎಂದರು.

 ಕವಿಗೋಷ್ಠಿಯಲ್ಲಿ ರೇಮಂಡ್‌ ಡಿ'ಕುನ್ಹ ತಾಕೊಡೆ, ಡಾ.ಸುರೇಶ್‌. ನೆಗಳಗುಳಿ, ಕೆನ್ಯೂಟ್‌ ಪಿಂಟೊ, ಎಡ್ವರ್ಡ್‌ ಲೋಬೊ, ಜಯಾನಂದ ಪೆರಾಜೆ, ನವೀನ್‌ ಕುಮಾರ್‌, ಶಾಂತಾ  ಪುತ್ತೂರು, ರಶ್ಮಿ ಸನಿಲ್‌, ಪರಿಮಳಾ ಮಹೇಶ್‌, ನವ್ಯಪ್ರಸಾದ್‌ ನೆಲ್ಯಾಡಿ, ಶಾಂತಾ ಕುಂಟಿನಿ ಭಾಗವಹಿಸಿದರು. ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮುಖ್ಯಸ್ಥ ಪಿ. ವಿ.ಪ್ರದೀಪ್‌ ಕುಮಾರ್‌ ಸ್ವಾಗತಿಸಿದರು. ಡಾ.ಸತೀಶ್‌ ಬಂಗೇರ ವಂದಿಸಿದರು.

Comments (0)




Be the first to comment using the form below.