ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಪಿ. ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 25/06/2022 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀ ಶ್ರೀಪತಿ ಭಟ್, ಶ್ರೀ ಭುವನಾಭಿರಾಮ ಉಡುಪ, ಕೊಳಚಿಪ್ಪು ಶ್ರೀ ಗೋವಿಂದ ಭಟ್, ಶ್ರೀ ಗಂಗಾಧರ ಗಾಂಧಿ, ಡಾ. ಸುರೇಶ ನೆಗಳಗುಳಿ, ಶ್ರೀ ರೇಮೆಂಡ್ ಡಿಕೊನ ತಾಕೊಡೆ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕೃತಿ ಬಿಡುಗಡೆ ಸಮಾರಂಭ ಅದೃಷ್ಟ ಚೀಟಿ ಮುಖಾಂತರ ನಡೆದಿತ್ತು. ಅದೃಷ್ಟ ಚೀಟಿಯ ಮೂಲಕ ಅಂಕುರ ಕೃತಿ ಬಿಡುಗಡೆಗೊಂಡಿತು ಅದೃಷ್ಟವಂತರು ಶ್ರೀಮತಿ ಸುಲೋಚನಾ ಪಚ್ಚನಡ್ಕ ಉಡುಪಿ ಇವರಿಂದ ದಿವ್ಯ ಮಯ್ಯರ ಪುಸ್ತಕ ಬಿಡುಗಡೆಗೊಂಡ ಕಾಯ೯ಕ್ರಮವನ್ನು ರಶ್ಮಿ ಸನಿಲ್ ಅವರು ನಿರೂಪಣೆ ಯಲ್ಲಿ ಯಶಸ್ವಿಯಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಸಾಧಕರಿಗೆ ಕರ್ನಾಟಕ ಸಾಧನ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಮತಿ ಸುನಿತಾ ಪ್ರದೀಪ್ ಕುಮಾರ್ ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿ ಸಂಚಾಲಕರಾಗಿದ್ದರು. ಶ್ರೀಮತಿ ರಶ್ಮಿ ಸನಿಲ್ ನಿರೂಪಣೆ ಮಾಡಿದರು. ಈ ಸಮಾರಂಭದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾಯ೯ಕ್ರಮ ಜರುಗಿತು.
Comments (0)
Post Comment
Report Abuse
Be the first to comment using the form below.