(JavaScript required to view this email address)
Mangalore

News & Articles

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದಲ್ಲಿ ಜನಿಸಿದ ಈ ಬರವಣಿಗೆಯ ಬೆರಗು ಶ್ರೀಮತಿ ರೂಪಾ ಭೀಮಸಿಂಗ ರಜಪೂತ ಇವರು ನಡೆದು ಬಂದ ದಾರಿಯನ್ನು ಸ್ಮರಣೆ ಮಾಡಿದರೆ ಇನ್ನೂ ಹೆಣ್ಣು ಎಂತಾ ನೋವನ್ನು ಅನುಭವಿಸುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ. ಹೀಗಿರುವಾಗ ಇವರಲ್ಲಿ ಅರಳಿದ ಪ್ರತಿಭೆಯನ್ನು ಪರಿಗಣಿಸಿದಾಗ ಅಘಗಮ್ಯ ಅಗೋಚರ. ಇವರು ಬರೆದ ಕಥೆ ಕವನಗಳನ್ನು ಓದಿದಾಗ ಅವಳು ಅನುಭವಿಸಿದ ನೋವಿನ ಮಹಾಸಾಗರವೆ ಅವುಗಳಲ್ಲಿ ಅಡಗಿದ್ದು ಇಂತಹ ಹೆಣ್ಣು ಮಕ್ಕಳ ಪಕ್ಷಿನೋಟವೇ ಕಣ್ಣಮುಂದೆ ಬರುವುದು ಮತ್ತು ಇವರು ಬರೆಯುವ ಶೈಲಿ ಬಹಳ ಅರ್ಥಗರ್ಭಿತವಾಗಿದೆ. ಇಂಥಹ ಒಳ್ಳೆಯ ಯುವ ಸಾಹಿತಿ ನನಗೆ ದೊರೆತದ್ದು ಕೂಡಲಸಂಗಮ ಕ್ಷೇತ್ರದಲ್ಲಿ. ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕಾರ್ಯಮದ ನಿಮಿತ್ತ ಅಲ್ಲಿ ಕರುನಾಡು ಕವಿ ಪ್ರಶಸ್ತಿ ಕೊಡುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ನಾನು ಅಥಿತಿಯಾಗಿ ಹೋಗಿದ್ದೆ. ಅಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 30ಕ್ಕು ಹೆಚ್ಚು ಯುವ ಕವಿಗಳಿಗೆ ಪ್ರಶಸ್ತಿ ಕೊಡುವ ಭಾಗ್ಯ ನನಗೆ ದೊರಕಿತ್ತು. ಆವಾಗ ಅಲ್ಲಿ ಸೇರಿದ ಕವಿಗಳ ಜೊತೆಗೆ ನಾನು ಕುಂತು ಅವರ ಬಗ್ಗೆ ವಿಚಾರ ಮಾಡಿದಾಗ ಇವಳ ವಿಚಾರ ನನಗೆ ಗೊತ್ತಾಯಿತು. ಆವತ್ತೇ ನಾನು ನಿರ್ಧಾರ ಮಾಡಿದೆ. ಇವಳ ಬಗ್ಗೆ ನಾನು ಏನಾದರು ಮಾಡಬೇಕು ಅಂತಾ. ಮೊದಲು ಅವಳ ಕವನ ಸಂಕಲನ ಹೊರತರುವ ವಿಚಾರ. ಒಳ್ಳೆಯ ವಿಚಾರಗಳನ್ನು ಮಾಡಿದಾಗ ದೇವರೆ ದಾರಿ ತೋರುವನು ಎಂಬತೆ ಈ ಕಥಾಬಿಂದು ಪ್ರಕಾಶನ ಸಂದರ್ಶನ ಪಡೆದಾಗ ಅವರು ಅತೀ ಪ್ರೀತಿ ವಿಶ್ವಾಸದಿಂದ ಒಪ್ಪಿದರು. ಗಿಡಮರೆಯ ಕಾಯಿಯಾದ ರೂಪಾ ಇವರ ಕವನ ಸಂಕಲನಕ್ಕೆ ಭದ್ರಬುನಾದಿ ಬಿತ್ತು. ಇವಳ ಪ್ರೀತಿಯ ಕವನ ಸಂಕಲನ ‘ದೊರೆ’ಎಂಬ ನಾಮದಿಂದ ಹೊರಬಂತು.
ಶ್ರೀಮತಿ ರೂಪಾ ಭೀಮಸಿಂಗ ರಜಪೂತ
ಈ ಕವನ ಸಂಕಲನವನ್ನು ಹೆಚ್ಚು ಜನ ಓದಿ ಅವಳ ವಿಚಾರ ಧಾರೆಗೆ ನಾವೆಲ್ಲಾ ಹರಸಿ ಹಾರೈಸೋಣ. ಇನ್ನೂ ಹೆಚ್ಚು ಇತಿಹಾಸದ ಪುಟಗಳನ್ನು ಸೇರಿ ಇವಳು ಬರವಣಿಗೆ ಮುಂದುವರೆಸಲಿ 
ಶ್ರೀಮತಿ ರೂಪಾ ಭೀಮಸಿಂಗ ರಜಪೂತ
ಡಾ.ಜಾನಕಿದೇವಿ ಸುರೇಶ ಭದ್ರನ್ನವರ 
ಕಲಾವಿದರು ಮತ್ತು ಸಾಹಿತಿಗಳು
ಸಾ.ನಾಗನೂರ
ಶ್ರೀಮತಿ ರೂಪಾ ಭೀಮಸಿಂಗ ರಜಪೂತ
ಶ್ರೀಮತಿ ರೂಪಾ ಭೀಮಸಿಂಗ ರಜಪೂತ

Comments (2)




SG

Sahity G commented on October 4th, 2023 at 11:46 PM 
ಒಂದು ಒಳ್ಳೆಯ ಕವನ ಸಂಕಲನವಾಗಿದೆ, ಇದೆ ತರಹ ಇಂತಹ ಸಾವಿರಾರು ಕವನಗಳು ನಿಮ್ಮಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ.



SG

Sahity G commented on October 4th, 2023 at 11:47 PM 
ಒಂದು ಒಳ್ಳೆಯ ಕವನ ಸಂಕಲನವಾಗಿದೆ, ಇದೆ ತರಹ ಇಂತಹ ಸಾವಿರಾರು ಕವನಗಳು ನಿಮ್ಮಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ.