ರೇಷ್ಮಾಶೆಟ್ಟಿ ಗೊರೂರು ರವರ ಕವಿತೆಗಳು ಮನದ ಭಾವನೆಗಳಿಗೆ, ಪರಿಸರ, ವಸ್ತು ಸ್ಥಿತಿಗಳಿಗೆ ಸಂಬಂಧಪಟ್ಟ ಸಂಯೋಜನಾತ್ಮಕ ಸೃಜನಶೀಲ ಬರಹಗಳಾಗಿ ರೂಪುಗೊಂಡಿವೆ. ಕವಿತೆಗಳೆಂದರೆ ಒಳಗಣ್ಣಿನಿಂದ ಕಂಡು, ಅರಿತು, ಎದುರಿಗೆ ಕಾಣುವ ವಸ್ತು ವಿಚಾರಗಳಿಗೆ ಅಥವಾ ಮನದ ಮೂಲೆಯಲ್ಲಿ ಕಲ್ಪಿಸಲ್ಪಟ್ಟ ವಿಚಾರಗಳಿಗೆ ತನ್ನದೇ ಆದ ಪರಿಧಿಯಲ್ಲಿ ಒಂದಷ್ಟು ವರ್ಣನಾತೀತವಾಗಿ ರೂಪ ನೀಡುವುದಾಗಿದೆ, ಅದರಲ್ಲಿ ರೇಷ್ಮಾ ಶೆಟ್ಟಿಯವರು ಪ್ರಬುದ್ಧರು ಎನ್ನುವುದು ಅವರ ಬರಹಗಳಿಂದಲೇ ತಿಳಿದುಕೊಳ್ಳಬಹುದು. ಇವರ ಮೊದಲ ಎರಡೂ ಕೃತಿಗಳನ್ನು ಓದಿ ಅರ್ಥೈಸಿಕೊಂಡ ನಾನು ಈ ಕೃತಿ
ಶ್ರಮದ ಬೆಸುಗೆ ಒಂದೆರಡು ವಾಕ್ಯಗಳನ್ನು ಬರೆಯುವುದರ ಮೂಲಕ ಅವರ ಬರಹಕ್ಕೆ ಪ್ರೋತ್ಸಾಹವನ್ನು ನೀಡುತ್ತಾ, ಮುಂದೆ ಅನೇಕ ಕೃತಿಗಳನ್ನು ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವ ಜ್ಞಾನವನ್ನು ತಾಯಿ ಶಾರದೆ ನೀಡಲಿ ಎಂದು ಶುಭ ಹಾರೈಕೆಯೊಂದಿಗೆ,
ಪರಶುರಾಮಕ್ಷೇತ್ರ https://www.kathabindu.in/news-articles/parashuram.html
Comments (0)
Post Comment
Report Abuse
Be the first to comment using the form below.