ಮೈಲಿಗೆಯಂತೆ
ಹೊತ್ತ ನೆಲಕಿಲ್ಲ -ಬೀಸೋ ಗಾಳಿಗಿಲ್ಲ,
ಉಣುವ ಅನ್ನಕಿಲ್ಲ ದಣಿವಾರಿಸೋ ನೀರಿಗಿಲ್ಲ... |
ಸುಡುವ ಬೆಂಕಿಗಿಲ್ಲ - ಸುರಿವ ಮಳೆಗಿಲ್ಲ... |
ರವಿಯ ಬೆಳಕಿಗಿಲ್ಲ -ಶಶಿಯ ತಂಪಿಗಿಲ್ಲ...|
ಪ್ರಾಣಿ-ಪಕ್ಷಿಗಳಿಗೂ ಇಲ್ಲ ಈ ಜಾತಿಮಂತ್ರ...
ಮತ್ತೇಕೆ ಬಂದೊದಗಿದೆಯೋ ಮನುಷ್ಯನಿಗೆ ಮಾತ್ರ... |
ನೆಲವ ಉತ್ತು, ಬೀಜ ನೆಟ್ಟು...
ಬೆವರ ಹರಿಸಿ, ಶ್ರಮವಪಟ್ಟು... |
ಚಿಗುರಿಂದ ಹೂ -ಹಣ್ಣು ಮಾಡಿ,
ಹೂವೆಲ್ಲ ಹಾರವಾಗಿ ಸೇರುವುದು ದೇವನ ಮುಡಿ... |
ಆ ಹೂವಿಗಾಗ ಸ್ವರ್ಗಕ್ಕೆ ದಾರಿಯಂತೆ....
ಆದರೆ, ಇವ ಮುಟ್ಟಿದರೆ ಮೈಲಿಗೆಯಂತೆ... |?
ಮಣ್ಣ ಅಗೆದು, ತುಳಿದು, ಹದಮಾಡಿ...
ಆಕಾರ ಕೊಟ್ಟು, ಸುಟ್ಟು ಇಟ್ಟಿಗೆಮಾಡಿ... |
ಅವ ಕಟ್ಟಿದ ಮನೆಯೊಳಗೇ ಮಾಡುತಿಹರು ವಾಸ....
ಗುಡಿ ಕಟ್ಟಿದವನಿಗಿಲ್ಲ ಗುಡಿಯೊಳಗೆ ಪ್ರವೇಶ... |?
ಅವ ಮುಟ್ಟಿದ ಮರಳಿಟ್ಟಿಗೆ -ಕಬ್ಬಿಣ ಗೋಡೆಯೊಳಗಂತೆ...
ಮನೆಯೊಳಗೆ ಬಂದರೆ ಮಾತ್ರ ಮೈಲಿಗೆಯಂತೆ...|?
ಮುAಜಾನೆ ಹಾಲಿನವ, ನಂತರ ಹೂ ಅಂಗಡಿ,
ಬೀದಿ-ಬೀದಿಯ ಮಾರುಕಟ್ಟೆಯಲಿ ಓಡಾಡಿ... |
ಕೈಯಿಂದ ಕೈಗೆ ಬಂದ ಹಣಕೆ ಹುಂಡಿಯೊಳಗೆ ಜಾಗಉಂಟು...
ಅಷ್ಟೆ ಏಕೆ, ಮಂಗಳಾರತಿ ತಟ್ಟೆಯಲ್ಲುಂಟು... |
ಮಾಂಸದ ಅಂಗಡಿಯಿAದ ಬಂದ ಹಣವು ಸರಿಯಂತೆ...
ಆದರೆ, ಇವ ಮುಟ್ಟಿದರೆ ಮೈಲಿಗೆಯಂತೆ.... |?
Comments (0)
Post Comment
Report Abuse
Be the first to comment using the form below.