ಹೊಸ ಸಂವೇದನೆಯ ಸಶಕ್ತ ಕಾವ್ಯ ಕಟ್ಟಿದ ರಾಧಾಕೃಷ್ಣ ಕೆ ಉಳಿಯತ್ತಡ್ಕ ಕನ್ನಡ ನಾಡಿನಾದ್ಯಂತ ಪರಿಚಿತರು. ಕವಿಯಾಗಿ, ಪತ್ರಕರ್ತರಾಗಿ, ಸಂಘಟಕರಾಗಿ, ಕನ್ನಡ ಹೋರಾಟಗಾರರಾಗಿ, ಗಡಿನಾಡು ಕಾಸರಗೋಡಿನ ಮಹಾನ್ ಶಕ್ತಿಯಾಗಿ ಬೆಳೆಯುತ್ತಾ ಇರುವುದು ಅಭಿಮಾನದ ವಿಷಯ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರು ಕೃತಿ ರಚನೆ ಮಾಡಿದ್ದಾರೆ. ರಾಷ್ಟ್ರಮಟ್ಟದ ಕವಿಗೋಷ್ಠಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅವರ ಕವನಗಳು ಮಲಯಾಳ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡು ವಿದ್ಯಾರ್ಥಿಗಳಿಗೆ ಪಾಠ್ಯವಾಗಿವೆ.
ನವೋದಯ, ನವ್ಯ, ದಲಿತಬಂಡಾಯ ಹೀಗೆ ಸಾಹಿತ್ಯದ ಎಲ್ಲಾ ಪಂಥಗಳಲ್ಲೂ ಉಳಿಯತ್ತಡ್ಕರನ್ನು ಗುರುತಿಸಬಹುದು. ಮಧುರವಾದ ಭಾವಗೀತೆಗಳನ್ನು ಬರೆಯಬಲ್ಲರು. ಕಾವ್ಯದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲರು. ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುಧೀರ್ಘ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು, ಸನ್ಮಾನಗಳನ್ನು ಪಡೆದಿರುವ ರಾಧಾಕೃಷ್ಣರ ಆಯ್ದ ಗೇಯ ಗೀತೆಗಳ ಈ ಸಂಕಲನ ಓದುಗರಲ್ಲಿ ಸಂಚಲನ ಮೂಡಿಸದಿರದು.
ಪಿ. ವಿ. ಪ್ರದೀಪ್ ಕುಮಾರ್
ಲೇಖಕ, ಕಾದಂಬರಿಕಾರ
Comment (1)
Post Comment
Report Abuse
manisha commented on October 23rd, 2024 at 2:50 PM
7907862441