ಪರಶುರಾಮಕ್ಷೇತ್ರ
ಭೂಮಿಯ ಸೃಷ್ಟಿಯಾವ ರೀತಿ ಆಯಿತು?! ಎಂದಾಗ ಎರಡು ದೃಷ್ಟಿಕೋನದಲ್ಲಿ ಉತ್ತರಿಸುವ ಜನರಿದ್ದಾರೆ ಈ ನಮ್ಮ ಸಮಾಜದಲ್ಲಿ. ಅದುವೇ ವೈಜ್ಞಾನಿಕತೆ ಮತ್ತು ವೈಚಾರಿಕತೆ (ಪೌರಾಣಿಕಹಿನ್ನೆಲೆ).
ವೈಜ್ಞಾನಿಕವಾಗಿ ಈ ಭೂಮಿಯ ಸೃಷ್ಟಿಯು ಹೇಗಾಯಿತು ?ಎಂದು ನಾವು ಯೋಚಿಸಿದಾಗ, ನಮ್ಮ ಮುಂದಿರುವ ಸದ್ಯಕ್ಕಿರುವ ಸತ್ಯವೇ ಭೂಮಿಯ ಉಗಮ ಸಿದ್ದಾಂತ!ಅದುವೇ,
ಬಿಗ್ಬ್ಯಾಂಗ್ಥಿಯರಿ ! ವೈಚಾರಿಕವಾಗಿ ಸಂಸ್ಕೃತಿ ಪರಂಪರೆಯ ದೃಷ್ಟಿಕೋನದಲ್ಲಿ ಹಾಗೂ ಪೌರಾಣಿಕ ಹಿನ್ನಲೆಯಲ್ಲಿ ಭೂಮಿಯ ಉಗಮದ ಬಗ್ಗೆ ಆಲೋಚಿಸಿ ನೋಡಿದಾಗ ದೇವಿಯು ಈ ಮೇದಿನಿಯನ್ನು ಸೃಷ್ಟಿಮಾಡಿದರು. ಈ ಭೂಮಿಯು ದೇವಿಯ ಸೃಷ್ಟಿ ಎಂಬುದು ತಿಳಿದು ಬಂದಿರುತ್ತದೆ. ಅದೇನೇ ಇರಲಿ; ಭೂಮಿಯು ಸೃಷ್ಟಿ ಆದುದಂತೂ ನಿಜ.ಈ ಭೂಮಿಯು ಇತರ ಗ್ರಹಗಳಿಗಿಂತ ವಿಭಿನ್ನವಾಗಿದ್ದು ಜೀವರಾಶಿಗೆ ಯೋಗ್ಯವಾದಂತಹ ಗ್ರಹ ಎಂಬುದಂತೂ ಸತ್ಯವಾದ ಮಾತು !
ಈ ಭೂಮಿಯಲ್ಲಿ ಜೀವಿಸುವ ಅನೇಕ ಜೀವರಾಶಿಗಳ ಪೈಕಿ ಮನುಷ್ಯನು ಓರ್ವ. ಆದರೆ, ಸಕಲಜೀವರಾಶಿಗಳನ್ನು ಹೋಲಿಸಿ ನೋಡಿದಾಗ ಮಾನವನಿಗೆ ದೊರೆತಿರುವ ವಿಶೇಷಶಕ್ತಿಯೇ ಬುದ್ಧಿ ಶಕ್ತಿ, ಮಾತನಾಡುವ ಶಕ್ತಿ ಹಾಗೂ ಯೋಚನಾಶಕ್ತಿ. ಇತರ ಪ್ರಾಣಿಗಳಿಗೆ ಹೋಲಿಸಿ ನೋಡಿದಾಗ ಮನುಷ್ಯನು ಚರಾಚರ ಜೀವರಾಶಿಗಳಿಗಿಂತಲೂ ವಿಭಿನ್ನ! ಮನುಷ್ಯನು ತನ್ನ ಭಾವನೆಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾನೆ ಅಂದರೆ ಮಾತಿನ ಮೂಲಕ; ಈ ಸಮಾಜದಲ್ಲಿ ಅನೇಕ ರೀತಿಯಾದಂತಹ ಜನರಿದ್ದಾರೆ. ಆಸ್ತಿಕರು ಇದ್ದಾರೆ; ನಾಸ್ತಿಕರು ಇದ್ದಾರೆ. ಕೆಲವರು ದೇವರು ಎಂದು ವಿಧವಿಧದ ಮೂರ್ತಿಗಳನ್ನು ಇಟ್ಟು ಪೂಜಿಸಿದರೆ, ಇನ್ನು ಕೆಲವರು ಪ್ರಕೃತಿಯೆ ದೇವರು ಎಂದು ಹೇಳುವವರೂ ಇದ್ದಾರೆ. ಎಲ್ಲಾ ಧರ್ಮಗಳಲ್ಲಿಯೂ ಸಹ ದೇವರನ್ನು ಬೇರೆಬೇರೆ ರೀತಿಯಾಗಿ ಪೂಜಿಸಿ ಆರಾಧಿಸುತ್ತಾರೆ. ಇನ್ನು ಕೆಲವರು “ತಮ್ಮ ದೇಹವೇ ನಡೆದಾಡುವ ದೇವಾಲಯ, ನಮ್ಮೊಳಗಿನ ಆತ್ಮವೇ ದೇವರು" ಎಂದು ನಂಬಿರುವವರು ಇದ್ದಾರೆ. ಕೆಲವರು ಅದೃಶ್ಯ ಶಕ್ತಿಯೊಂದು ನಮ್ಮನ್ನು ಕಾಪಾಡುತ್ತಿದೆ ಎಂದು ಶಕ್ತಿಯನ್ನು ನಂಬಿದರೆ; ಇನ್ನೂ ಕೆಲವರು, ದೇವರು ಎಂಬುದೇ ಇಲ್ಲ ಎಲ್ಲವೂ ಮನುಷ್ಯನ ಕಲ್ಪನೆ ಎಂದು ಹೇಳುವವರು ಇದ್ದಾರೆ. ನಾನು ಇವುಗಳಲ್ಲಿ ಯಾವುದನ್ನುಪ್ರಶ್ನಿಸಲಾರೆ! ಇದೆಲ್ಲವೂ ಮನುಷ್ಯನ ನಂಬಿಕೆ, ಆತನು ಬೆಳೆದಂತಹ ಪರಿಸರ ಆತನ ವೈಯಕ್ತಿಕ ನಿಲುವಿಗೆ ಸಂಬಂಧ ಪಟ್ಟಿರುವಂತಹುದು ಎಂಬುದೇ ನನ್ನಯ ಅನಿಸಿಕೆ.
ಮನುಷ್ಯನ ಮನಸ್ಸಿನ ಸ್ಥಿತಿಯ ಮೇಲೆ ಆತನ ಅಥವಾ ಆಕೆಯ ಆಲೋಚನೆಯೂ ನಿಂತಿದೆ. ಈಗ ನಮ್ಮ ವಸ್ತುವಿಷಯ ಪರಶುರಾಮಕ್ಷೇತ್ರ ಇಲ್ಲಿ ನಾನು ನಾಸ್ತಿಕಳಲ್ಲ. ದೇವರು ಎಂಬ ಶಕ್ತಿಯೇ ಈ ಭೂಮಿಯ ಚರಾಚರ ಜೀವರಾಶಿಗಳನ್ನು ಕಾಪಾಡುತ್ತಿರುವುದು =; "ದೇವರೊಬ್ಬನೇ ನಾಮ ಹಲವು” ದೇವರು ಎಂಬ ಶಕ್ತಿಯನ್ನು ಭಕ್ತಿ ತುಂಬಿ ವಿವಿಧ ಧರ್ಮಗಳ ಜನರು ಬೇರೆ ಬೇರೆ ರೀತಿಯಾದಂತಹ ವಿಭಿನ್ನ ಹೆಸರುಗಳಿಂದ ಕರೆಯುತಿಹರು ಎಂಬುದನ್ನು ನಾನು ಬಲವಾಗಿ ನಂಬಿರುವವಳು. ಹಿಂದೂ ಸಂಪ್ರದಾಯದ ಪ್ರಕಾರ; ಈ ಭೂಮಿಯಲ್ಲಿ ದೇವರು ನೆಲೆಸಿದ್ದಾರೆ. ಎಂದಾದರೆ, ಆ ದೇವರಿಗೊಂದು ನೆಲೆಸಲು ಇರುವಂತಹಸ್ಥಳವೇ ಮನುಷ್ಯ ಮಾಡಿರುವ ಮಾನವ ಸೃಷ್ಟಿಯ ದೇವಸ್ಥಾನ.ಈ ದೇವಸ್ಥಾನವು ದೇವರು ಇರುವಂತಹ ನೆಲೆಸಿರುವಂತಹ ಸ್ಥಾನ ಅಥವಾ ಪ್ರದೇಶ.
ಸರ್ವೇಸಾಮಾನ್ಯವಾಗಿ; ಪ್ರಾಚೀನ ಕಾಲದಲ್ಲಿ ಇದ್ದಂತಹ ದೇವಸ್ಥಾನದ ಕುರುಹುಗಳನ್ನು ನೋಡಿ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ದೇವಸ್ಥಾನವನ್ನು ನಿರ್ಮಿಸಲು ಪವಿತ್ರಸ್ಥಳ. ಪ್ರಕೃತಿ ಸಮೃದ್ಧಿಯ ನಿಶಬ್ದದ ತಾಣವಾದಂತಹ ಹಾಗೂ ಬಹು ಜನಕ್ಕೆ ಆಗಮಿಸಲು ಆಗುವಂತಹ, ಎಲ್ಲಾ ಜನರು ಸೇರಲು ಅವಕಾಶವಿರುವಂತಹ, ನದಿತೀರದ, ಪ್ರಕೃತಿಸೌಂದರ್ಯ ಇರುವಂತಹ ಬೆಟ್ಟ-ಗುಡ್ಡಗಳ ಸಾಲಿನ ನಡುವೆ ಇರುವಂತಹ ಜಾಗಕ್ಕೆ ಮೊದಲ ಪ್ರಾಶಸ್ತ್ಯವನ್ನು ಕೊಡಲಾಗುತ್ತದೆ. ಕಾರಣ, ನಿಶ್ಯಬ್ದ ಸ್ಥಳವು ಮನಸ್ಸಿಗೆ ಉಲ್ಲಾಸವನ್ನು, ಭಕ್ತಿಯನ್ನು ಮೂಡಿಸುತ್ತದೆ. ನಿಷ್ಕಲ್ಮಶ ಮನಸ್ಸಿನ ಪ್ರತೀಕವೇ ಭಕ್ತಿ. ಕಲ್ಮಶ ರಹಿತವಾದ ಅರಿಷಡ್ವರ್ಗಗಳಿಂದ ದೂರವಿದ್ದು ಇನ್ನೊಬ್ಬರಿಗೆ ಕೇಡು ಬಯಸದೇ ಇರುವಂತಹ ಬದುಕೇ ಶ್ರೇಷ್ಠ. ಊರವರ ಒಪ್ಪಿಗೆಯನ್ನು ಪಡೆದು ಜ್ಯೋತಿಷ್ಯರು, ವಾಸ್ತುತಜ್ಞರು, ತಂತ್ರಿಗಳು, ಪುರೋಹಿತರ ಮೂಲಕ ಸೂಕ್ತಜಾಗದ ಪರಿಶೀಲನೆಯನ್ನು ಮಾಡಲಾಗುತ್ತದೆ. ನಂತರ, ಜಾಗದ ಆಯ್ಕೆಯಾದಲ್ಲಿ, ಆಯಾ ಊರಿನ ಪದ್ಧತಿಯ ಪ್ರಕಾರ, ಜಿಲ್ಲಾವಾರು ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಅದರದೇ ಆದಂತಹ ; ನೀತಿ, ರೀತಿ, ಹಿರಿಯರು ನಡೆಸಿಕೊಂಡು ಬಂದಂತಹ ಆಚಾರ-ವಿಚಾರ, ರೂಢಿ ಸಂಪ್ರದಾಯಗಳೆಲ್ಲವು ಊರಿಗೊಂದರಂತೆ ಸೀಮಿತವಾಗಿರುತ್ತದೆ. ಅವುಗಳೆಲ್ಲವನ್ನು ಪರಿಶೀಲಿಸಿ, ಪರೀಕ್ಷಿಸಿ, ವಿಮರ್ಶಿಸಿ, ಪದ್ಧತಿಗಳ ಪ್ರಕಾರವಾಗಿ ದೇವಸ್ಥಾನದ ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಕ್ಷೇತ್ರದ ವೈಶಿಷ್ಟ್ಯಗಳಿಗೆ ಅನುಸಾರವಾಗಿ ದಿಕ್ಕುಗಳನ್ನು ಸೂಚಿಸಲಾಗುತ್ತದೆ. ಸಾಮಾನ್ಯವಾಗಿ, ಮೊದಲಿಗೆ ಪೂರ್ವದಿಕ್ಕಿಗೆ ಪ್ರಾಶಸ್ತ್ಯವನ್ನು ಕೊಡಲಾಗುತ್ತದೆ. ಪೂರ್ವದಿಕ್ಕು ಸೂರ್ಯನು ಉದಯಿಸುವ ದಿಕ್ಕು. ಸೂರ್ಯರಶ್ಮಿಯು ದೇವರ ಬಿಂಬವನ್ನು ಸ್ಪರ್ಶಿಸಬೇಕು ಎಂಬ ಉದ್ದೇಶದಿಂದ ಹೆಚ್ಚಾಗಿ ದೇವಸ್ಥಾನದ ಮುಂಬಾಗಿಲು ಪೂರ್ವದಿಕ್ಕಿಗೆ ಇರುವುದು. ಹಾಗೆಯೇ, ದಿಕ್ಕುಗಳ ಆಯ್ಕೆಯು ಸಹ ಆಯಾ ಕ್ಷೇತ್ರದಲ್ಲಿ ನೆಲೆಸಿರುವ ದೇವರು, ಹಿರಿಯರು ಪಾಲಿಸಿಕೊಂಡು ಬಂದಂತಹ ಸಂಸ್ಕಾರ, ಸಂಪ್ರದಾಯಗಳಿಗೆ ಸಂಬಂಧಪಟ್ಟಂತೆ ಅನೇಕ ರೀತಿಯ ಬದಲಾವಣೆಗಳನ್ನು ನಾವು ಕಾಣುತ್ತೇವೆ. ನಾನು ಮೊದಲೇ ಉಲ್ಲೇಖಿಸಿದಂತೆ; ದೇವಸ್ಥಾನ, ಪದ್ಧತಿ, ನಿಯಮಾವಳಿಗಳು ಪ್ರತಿಯೊಂದು ಜಿಲ್ಲೆಗಳಿಗೆ ಹೋಲಿಸಿದಾಗ ವಿಭಿನ್ನವಾಗಿರುತ್ತದೆ. ಅವುಗಳ ಮೂಲ ಉದ್ದೇಶ ಒಂದೇ ದೇವರೆಂಬ ಶಕ್ತಿಯ ಮುಂದೆ ಮನುಷ್ಯನು ತನ್ನ ಭಕ್ತಿಯನ್ನು ಪ್ರದರ್ಶಿಸುತ್ತಾನೆ. ಆದರೆ, ಆ ಭಕ್ತಿಯನ್ನು ಪ್ರದರ್ಶಿಸುವ ರೀತಿಗಳು ವಿಭಿನ್ನವಾಗಿರುತ್ತದೆ. ಅವುಗಳು ಜನರ ಸಂಸ್ಕಾರ, ಜನರು ಬೆಳೆದಂತಹ ರೀತಿ, ಪರಿಸರ, ಜನರಿಗೆ ತಾವು ಬೆಳೆಯುವಾಗ ಸಿಕ್ಕಂತಹ ಸಂಸ್ಕೃತಿಗೆ ಸಂಬಂಧ ಪಟ್ಟಿರುವಂತಹುದು! ಮುಂದುವರೆಯುವುದು
Comments (0)
Post Comment
Report Abuse
Be the first to comment using the form below.