(JavaScript required to view this email address)
Mangalore

News & Articles

ತೆರೆಯ  ಮರೆಯಲ್ಲಿ  ಅಡಗಿದ್ದ ಇವರ ಅರಳುವ  ಪ್ರತಿಭೆ,ಇತ್ತೀಚೆಗಿನ  ವರುಷಗಳಲ್ಲಿ  ಅರಳಿ  ಹೊರಬಂದು,ಸಾಹಿತ್ಯ   ಕ್ಷೇತ್ರದಲ್ಲಿ  ಕಂಪನ್ನು  ಚೆಲ್ಲುತ್ತಾ  ಇದೆ. ಈ   ಅನರ್ಘ್ಯ   ಕುಸುಮವೇ ಶ್ರೀಮತಿ  ಭಾರತಿ  ಕೊಲ್ಲರಮಜಲು. ಹೆಸರಾಂತ  ಸಾಹಿತಿಗಳಾಗಿದ್ದ  ದಿವಂಗತ  '"ವಿಚಿತ್ರ  ಯೇತಡ್ಕ'"ರವರ  ಮುದ್ದಿನ ಕಿರಿಯ ಪುತ್ರಿ. ಹಾಗಾಗಿ ಬರೆಯುವ ಕಲೆ  ರಕ್ತಗತವಾಗಿ  ಬಂದಿದ್ದು, ಎಳವೆಯಲ್ಲೇ ಇವರಲ್ಲಿ ಸಾಹಿತ್ಯದ ಮೇಲಿನ  ಅಭಿರುಚಿ ಅಂಕುರಿಸಿತ್ತು. ವೈವಿಧ್ಯಮಯ ಕವನಗಳು, ಭಾವ ಗೀತೆಗಳು, ಗಝಲ್ , ಮುಕ್ತಕಗಳು  .......ಇತ್ಯಾದಿ  ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ, ಸುಂದರವಾದ  ಶೈಲಿಯಲ್ಲಿ   ಬರೆಯುವ ನೈಪುಣ್ಯತೆಯಿದೆ. ಈ ಉದಯೋನ್ಮುಖ ಕವಯಿತ್ರಿಯ  ಕವನಗಳು, ಸಾಮಾಜಿಕ ಜಾಲತಾಣದಲ್ಲಿ, ಸಾಹಿತ್ಯ ಬಳಗದ  ವಿವಿಧ  ಗುಂಪುಗಳಲ್ಲಿ  ಮತ್ತು  ಅನೇಕ  ಕವಿಗೋಷ್ಠಿಗಳಲ್ಲಿ ಜನಪ್ರಿಯತೆಯನ್ನು  ಗಳಿಸಿದೆ.  ಸಣ್ಣ ಕತೆಗಳಲ್ಲಿ  ಮತ್ತು ಲೇಖನಗಳಲ್ಲಿ,  ಇವರ ಮನದ ಭಾವ ಲಹರಿಗಳ   ಹರಿವಿನ  ಸೊಬಗು  ಹೊರಹೊಮ್ಮಿದೆ. ಅರಳು ಹುರಿದಂತೆ  ಮಾತನಾಡುವ ಭಾರತಿಯವರಿಗೆ  ನಿರರ್ಗಳವಾಗಿ ಭಾಷಣ  ಮಾಡುವ  ಮತ್ತು  ಸುಂದರವಾಗಿ  ನಿರೂಪಣೆ ಮಾಡುವ ಕಲೆ ಒಲಿದು ಬಂದಿದೆ. ಬದುಕಿನ ನಾನಾ ಸ್ತರಗಳ ಸುಖ,  ದುಃಖ, ನೋವು, ನಲಿವುಗಳು ಭಾವ  ತೋರಣವಾಗಿ ಕವನಗಳಲ್ಲಿ  ಕಂಗೊಳಿಸುತ್ತಿದೆ. ಬಿಡುವಿಲ್ಲದ ಮನೆಗೆಲಸಗಳಿದ್ದರೂ, ಸಂಗೀತ, ಭಜನೆ, ತೋಟಗಾರಿಕೆ ಇತ್ಯಾದಿ ವಿಷಯಗಳಲ್ಲಿ ತುಂಬ  ಆಸಕ್ತಿಯಿಂದ ಭಾಗವಹಿಸುತ್ತಾರೆ. ತಮ್ಮ ಕವಿ ಮನದ  ಸೊಬಗಿನಿಂದಾಗಿ,ಅನೇಕ  ಕವಿ--ಕವಯಿತ್ರಿಯರ  ಬಳಗದಲ್ಲಿ  ಬೆರೆತು, ಸಾಹಿತ್ಯ ಕೃಷಿಯ  ಬೆಳವಣಿಗೆಯು  ನಿರಂತರವಾಗಿ,  ಕನ್ನಡಾಂಬೆಯ  ಸೇವೆಯನ್ನು  ಮಾಡುತ್ತಿದೆ. ಮನೆ ಮಂದಿಯರ, ಒಡಹುಟ್ಟಿದವರ ಪ್ರೀತಿಯ ಸಂಪೂರ್ಣ  ಪ್ರೋತ್ಸಾಹದೊಂದಿಗೆ,  ಆಪ್ತ  ಬಂಧು ಮಿತ್ರರ, ಗೆಳತಿಯರ ಶುಭ  ಹಾರೈಕೆಗಳು ಕೂಡಾ,   ಇವರಿಗೆ ಯಶಸ್ಸಿನ ಮುಕುಟವನ್ನು  ಧರಿಸಲು ಸಹಕಾರಿಯಾಗಿದೆ ಅನೇಕ ಕೃತಿಗಳು  ಪ್ರಕಟಗೊಂಡು,  ಅತ್ಯುತ್ತಮ  ಪ್ರಶಸ್ತಿಗಳು ಕವಯಿತ್ರಿಯ  ಮುಡಿಗೇರಲಿ,  ಶ್ರೀ  ದೇವರು ಉತ್ತಮ  ಆಯುರಾರೋಗ್ಯಗಳನ್ನಿತ್ತು  ಹರಸಲಿ  ಮತ್ತು  'ಭಾರತಿ' ಎಂಬ  ತನ್ನ  ಹೆಸರಿನ ಸಾರ್ಥಕತೆಯನ್ನು  ಬೆಳಗುವುದರಲ್ಲಿ  ಕ್ರಿಯಾಶೀಲರಾಗಲೆಂಬ  ಶುಭ  ಹಾರೈಕೆಗಳು
ಹೇಮಾ  ಮದಂಗಲ್ಲು
ವಿಶಾರದೆಯ ಹನಿ.
ಶ್ರೀಮತಿ ಭಾರತಿ ಕೊಲ್ಲರಮಜಲು-ಇವರು ೧೦-೧೧-೧೯೬೪ ರಲ್ಲಿ ಕಾಸರಗೋಡು ತಾಲೂಕಿನ ಯೇತಡ್ಕ ಎಂಬ ಹಳ್ಳಿಯಲ್ಲಿ ಶ್ರೀಯುತ ಹರಿಹರ ಭಟ್ ಹಾಗೂ ಶಾರದಾ ದಂಪತಿಗಳ ಮಗಳಾಗಿ ಜನಿಸಿದರು.ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯೇತಡ್ಕದಲ್ಲಿ ಮುಗಿಸಿದ ಇವರು, ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ಮುಂದುವರಿಸಿ ಡಿಗ್ರಿಯನ್ನು ಪಡೆದರು.ತಮ್ಮ ತಂದೆ ಶ್ರೀ 'ವಿಚಿತ್ರ ಯೇತಡ್ಕ' ರಿಂದ ಸಾಹಿತ್ಯದಲ್ಲಿ ಆಸಕ್ತಿಯನ್ನು ಎಳವೆಯಲ್ಲಿಯೇ ಪಡೆದುಕೊಂಡು ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಜವಾಬ್ಧಾರಿಗಳ ನಡುವೆ ಸ್ವಲ್ಪ ಸಮಯ ಕುಂಠಿತವಾಗಿದ್ದರೂ, ಇದೀಗ ಪುನಹ ಸಕ್ರಿಯವಾಗಿದ್ದಾರೆ.ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿದ್ದು ,ಗೃಹಿಣಿಯಾಗಿದ್ದಾರೆ.ಕೃಷಿ ಚಟುವಟಿಕೆಗಳೊಂದಿಗೆ ಹಾಗೂ ಮನೆಯ ಜವಾಬ್ಧಾರಿಗಳೊಂದಿಗೆ ಬರಹಗಳಿಗೂ ಸಮಯಾವಕಾಶ ಒದಗಿಸಿಕೊಳ್ಳುತ್ತಿದ್ದಾರೆ. ಬರಹದ ವಿವಿಧ ಪ್ರಕಾರಗಳನ್ನು...ರುಬಾಯಿ, ಚುಟುಕು ,ಮುಕ್ತಕಗಳು, ಭಾವಗೀತೆ, ಚಿತ್ರಕವನ, ಗಝಲ್, ಷಟ್ಪದಿಗಳು.. ಇತ್ಯಾದಿಗಳನ್ನು ಕರಗತಮಾಡಿಕೊಂಡಿರುವರು. ಕಥೆಗಳಲ್ಲೂ ಕೈಯಾಡಿಸಿದ್ದಾರೆ..ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬಳಗಗಳಲ್ಲಿಯೂ ಗೋಷ್ಠಿಗಳನ್ನು ನಡೆಸಿ ಕೊಟ್ಟಿದ್ದಾರೆ.ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವಿಭಾಗದ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಚಿತ್ರಕಲೆ, ಹೂದೋಟ...ಇತರ ಹವ್ಯಾಸಗಳು. ಇವರ ಕವನಗಳು, ಗಝಲ್ ಗಳು, ಮುಕ್ತಕಗಳು  ಎರಡು ಸಾವಿರದ ಸನಿಹದಲ್ಲಿದ್ದು ಪ್ರಕಟಣೆಯ ನಿರೀಕ್ಷೆಯಲ್ಲಿದೆ.....

ವಿಶಾರದೆಯ ಹನಿ.
 ಪಿ. ವಿ. ಪ್ರದೀಪ್ ಕುಮಾರ್
ಲೇಖಕ, ಕಾದಂಬರಿಕಾರ  ಕಥಾಬಿಂದು  ಪ್ರಕಾಶನ ಮಂಗಳೂರು 
ವಿಶಾರದೆಯ ಹನಿ.
ಒಪ್ಪಿಗೆ

ಪರಸ್ಪರರಲ್ಲಿ ಒಡಂಬಡಿಕೆ ಇರಬೇಕು
ಮಾತಿನಲ್ಲಿ ಭರವಸೆ ಇಣುಕಬೇಕು
ಸಹಕರಿಸುವ ಗುಣವನ್ನು ಕಾಣಬೇಕು
ಕಷ್ಟ ನಷ್ಟದಲ್ಲಿ ಜೊತೆಯಾಗಿರಬೇಕು

ಭಾರತಿ ಕೊಲ್ಲರಮಜಲು
ವಿಶಾರದೆಯ ಹನಿ.

Comments (0)




Be the first to comment using the form below.