ಶ್ರೀ ಎನ್ ಎಸ್ ಮುಶೆಪ್ಪನವರ ದೈಹಿಕ ಶಿಕ್ಷಣ ಶಿಕ್ಷಕರಾಗಿ ಮಕ್ಕಳಿಗೆ ಶಿಸ್ತು, ಆರೋಗ್ಯ, ಕ್ರೀಡಾ ಚಟುವಟಿಕೆಗಳನ್ನು ಕುರಿತು ಅರಿವು ಮೂಡಿಸುವ ಶಿಕ್ಷಣ ನೀಡುವಲ್ಲಿ ತಲ್ಲಿನರಾಗುವುದರೊಂದಿಗೆ, ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇವರು ಹಲವಾರು ಕೃತಿಗಳನ್ನು ಕನ್ನಡಮ್ಮನ ಮಡಿಲಿಗೆ ಅರ್ಪಣೆ ಮಾಡಿದ್ದಾರೆ. ಅಲ್ಲದೆ ಹಲವಾರು ಕನ್ನಡ ಪರ ಸಂಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಹಾನಗಲ್ಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ ರಾಮಗಿರಿ ಗ್ರಾಮದವರಾಗಿದ್ದು. ಪ್ರಸ್ತುತ ಕಳೆದ 24 ವರ್ಷಗಳಿಂದ ಹಾನಗಲ್ಲ ತಾಲೂಕಿನ ವಿವಿಧ ಶಾಲೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾನಗಲ್ಲ ಇಲ್ಲಿ ಬಿ ಐ ಇ ಆರ್ ಟಿಯಾಗಿ ಬಹು ವರ್ಷ ಸೇವೆ ಸಲ್ಲಿಸಿ ಇದೀಗ ಶಿಕ್ಷಕರಾಗಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಡೊಳ್ಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅಕ್ಕಿಆಲೂರಿನಲ್ಲಿ ನೆಲೆಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರದೇ ಆದ ಛಾಪು ಮೂಡಿಸಿದ್ದಾರೆ ಇದೀಗ ಪುಸ್ತಕ ರೂಪದಲ್ಲಿ "ಕರುನಾಡ ಕಣ್ಮಣಿಗಳು" ಸಾಧಕರ ಪರಿಚಯ ಕೃತಿ ಕುರಿತು ನಾಲ್ಕು ಮಾತು
ಒಬ್ಬೊಬ್ಬ ವ್ಯಕ್ತಿಗಳ ಚರಿತ್ರೆಯನ್ನು ಓದುತ್ತಾ ಹೊರಟಾಗ ನನಗೆ ರೋಮಾಂಚನವಾಯಿತು. ನಮ್ಮ ಹೆಮ್ಮೆಯ ನಾಡಿನಲ್ಲಿ ಅದೆಷ್ಟು ಅದ್ಬುತ ಕಲಾವಿದರು, ಸಾಹಿತಿಗಳು, ಸಂಗೀತಗಾರರು, ಸಮಾಜ ಸೇವಕರು, ಬೆಳಕಿಗೆ ಬಾರದೆ ನಿಸ್ವಾರ್ಥದಿಂದ ಕನ್ನಡಮ್ಮನ ಸೇವೆ ಸಲ್ಲಿಸುತ್ತಿರುವವರಿದ್ದಾರೆ ಎಂದು ಎನ್ನ ಮನ ಕೆಲವು ಕ್ಷಣ ಬಾವುಕವಾಯಿತು. ಅಂತಹವರ ಪರಿಚಯವನ್ನು ಪುಸ್ತಕ ರೂಪದಲ್ಲಿ ಹೊರ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಬರಹಕ್ಕೆ ಬೆನ್ನೆಲುಬಾಗಿ ನಿಂತು ಈ ಪುಸ್ತಕದ ಸಂಪಾದಕರಾದ ಕಲಾವಿದರ ಕಣ್ಮಣಿ ಎಂದೇ ಖ್ಯಾತರಾದ ಶ್ರೀ ಪುಟ್ಟರಾಜ. ಜಿ. ಕೋಡಿಹಳ್ಳಿ ಇವರ ಸಹಕಾರದೊಂದಿಗೆ ಹೊರ ಬಂದಿರುವ ಎರಡನೆಯ ಕೃತಿ ಇದಾಗಿದೆ ಅವರ ಸಂಪಾದಕೀಯಲ್ಲಿ ಇನ್ನು ಅನೇಕ ಕೃತಿ ಹೊರ ಬರಲಿ ಎಂದು ಆಶಿಸುತ್ತೇನೆ. ಹಾಗೇ ಇವರು ಮಾಡುತ್ತಿರುವ ಸಾಹಿತ್ಯ ಸೇವೆಯ ಕಾರ್ಯಕ್ಕೆ ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ಸಂಶೋಧನೆಯಲ್ಲಿ ತೊಡಗಿಕೊಂಡು ವಿಶ್ವ ವಿದ್ಯಾಲಯಗಳು ಕರುನಾಡ ಸಾಧಕರ ಬಗ್ಗೆ ಪರಿಚಯ ಮಾಡಬೇಕಾದ ಕಾರ್ಯವನ್ನು
ಪುಟ್ಟರಾಜ ಕೋಡಿಹಳ್ಳಿ ಸಂಪಾದಕರಾದ
ಪುಟ್ಟರಾಜ ಕೋಡಿಹಳ್ಳಿ, ಲೇಖಕರಾದ
ಎನ್ ಎಸ್ ಮುಶೆಪ್ಪನವರ ಮಾಡಿರುವುದು ಗಮನಾರ್ಹವಾಗಿದೆ. ಪ್ರಿಯ ಓದುಗರು ಈ ಪುಸ್ತಕವನ್ನು ಓದಿ ಹರ್ಷಿಶಿಸುವುದರೊಂದಿಗೆ ಇವರಿಂದ ಇನ್ನೂ ಹಲವಾರು ಕೃತಿಗಳು ಹೊರ ಬಂದು ಕನ್ನಡ ಸಾಹಿತ್ಯ ಲೋಕದಲ್ಲಿ ಮಿನುಗುವಂತಾಲಿ ಎಂದು ಒಟ್ಟಾರೆ ಎಲ್ಲರೂ ಹಾರೈಸೋಣ.
ಶ್ರೀ ಕಾಂತೇಶ ಹ ಅಸುಂಡಿ
ಚುಟುಕು ಸಾಹಿತಿ ಮಾವಕೊಪ್ಪ
ತಾ.ಹಾನಗಲ್ಲ ಜಿಲ್ಲೆ ಹಾವೇರಿ
Comments (0)
Post Comment
Report Abuse
Be the first to comment using the form below.