ಮುಂಬೈಯಲ್ಲಿ ಕಥಾಬಿಂದು ಕನ್ನಡ ಕಂಪು ಕಾರ್ಯಕ್ರಮ ಯಶಸ್ವಿ
ಮುಂಬೈ: ಕಥಾಬಿಂದು ಪ್ರಕಾಶನ ಸಂಸ್ಥೆಯ ವತಿಯಿಂದ, ಕಾದಂಬರಿಗಾರ ಪಿವಿ ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ, ಮೇ 3ರಂದು ಮುಂಬೈ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಷನ್‌ನಲ್ಲಿ ಅಪರಾಹ್ನ 2:00 ಗಂಟೆಗೆ “ಕನ್ನಡ ಕಂಪು” 10ನೇ ಸರಣಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ಸ್ ಸಂಘ ಮುಂಬೈ ಅಧ್ಯಕ್ಷರಾದ ಶ್ರೀ ಪ್ರವೀಣ ಭೋಜ ಶೆಟ್ಟಿ ವಹಿಸಿದ್ದರು. ಉದ್ಘಾಟನೆಯನ್ನು ಸಿಎ ಸುರೇಂದ್ರ ಕೆ. ಶೆಟ್ಟಿ ನೆರವೇರಿಸಿದರು. ಕೃತಿಗಳ ಅನಾವರಣವನ್ನು ಶ್ರೀ ಶಂಭು ಸನಿಲ್ ನೆರವೇರಿಸಿದರು. ಚಂದ್ರಶೇಖರ ಮೆಮೋರಿಯಲ್ ಟ್ರಸ್ಟ್ ಸ್ಥಾಪಕ ನಿರ್ದೇಶಕರಾದ ಶ್ರೀಮತಿ ಶ್ರೀದೇವಿ ರಾವ್ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು.
ಅತಿಥಿಗಳಾಗಿ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಶ್ರೀ ಮಧುಸೂದನ ಟಿ. ಆರ್., ಬಹುಮುಖ ಪ್ರತಿಭೆಯ ಡಾ. ಸತೀಶ್ ಎನ್. ಬಂಗೇರ, ಕಥೆಗಾರ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹಾಗೂ ಸಂಸ್ಥೆಯ ಸ್ಥಾಪಕರಾದ ಪಿವಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಐದು ಕೃತಿಗಳು ಲೋಕಾರ್ಪಣೆಗೊಂಡುವು:
ಸಾಧಕರಾಗಿ ಡಾ. ಜೋಸೆಫ್ ಲೋಬೋ, ರಕ್ತದಾನಿ ಮಂಜು ಸತೀಶ್ ಆಚಾರ್ಯ, ವಿಶಾಲ್ ಮೆಲ್ಬಾ ಕ್ರಾಸ್ತಾ (ಸಂಗೀತ) ಹಾಗೂ ಆಯುಷ್ ರೇಗನ್ ಮೆನೇಜಿಸ್ (ಸಂಗೀತ) ಪ್ರಶಸ್ತಿ ಸ್ವೀಕರಿಸಿದರು.
ಕವಿಗೋಷ್ಠಿಯಲ್ಲಿ ಶ್ರೀಮತಿ ಶೈಲಜಾ ಹೆಗಡೆ, ಅಶ್ವಿತಾ ಶೆಟ್ಟಿ, ಮಲ್ಲಿಕಾರ್ಜುನ ಬಡಿಗೇರ, ಗೀತಾ ಕೊಂಕೋಡಿ, ಕುಮುದಾ ಶೆಟ್ಟಿ, ಗಾಯತ್ರಿ ನಾಗೇಶ್, ಅನಿತಾ ಶೆಣೈ, ಗಾಯತ್ರಿ ಮನೋಹರ್, ಲಕ್ಷ್ಮಿ ಹೇರೂರು, ಮಧು ವಸ್ತ್ರದ, ಉಷಾ ವಿ. ಶೆಟ್ಟಿ, ಅಂಜಲಿ ತೊರವಿ ಹಾಗೂ ವೇದಾವತಿ ಭಟ್ಟ ಕವನ ವಾಚನ ಮಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯಿತ್ರಿ ಶ್ರೀಮತಿ ವಾಣಿ ಶೆಟ್ಟಿ ವಹಿಸಿದ್ದರು.
Comments (0)
Post Comment
Report Abuse
Be the first to comment using the form below.