(JavaScript required to view this email address)
Mangalore

News & Articles

ಕಥಾಬಿಂದು ಪ್ರಕಾಶನವು ಅಕ್ಟೋಬರ್ 29ರಂದು ಮಂಗಳೂರಿನ ಪುರಭವನದಲ್ಲಿ ಐವತ್ತು ಕವನ ಸಂಗ್ರಹಗಳನ್ನು ಬಿಡುಗಡೆ ಮಾಡುವಾಗ ನೀವು ನೀಡಿದ ಸಹಯೋಗಕ್ಕೆ ಕೃತಜ್ಞತೆಗಳು.  ಇದರ ಮುಂದುವರಿಕೆಯಾಗಿ ಈ ಕೆಳಗಿನ ಯೋಜನೆಗಳನ್ನು ರೂಪಿಸಲಾಗಿದೆ.
1. ಅಂದು ಬಿಡುಗಡೆಯಾದ ಹೊಸ ಕೃತಿಗಳಲ್ಲಿ ಆಯ್ದ ಕವನಗಳನ್ನು ಒಟ್ಟು ಸೇರಿಸಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅವರ ಸಂಪಾದಕತ್ವದಲ್ಲಿ  200 - 300 ಕವನಗಳ ಸಂಕಲನವನ್ನು ಹೊರ ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆಯು ಮೇಲಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕವನ ಸಂಗ್ರಹಗಳಿಗೆ ಮಾತ್ರ ಅನ್ವಯ. ಉದ್ದೇಶಿತ ಸಂಪಾದಿತ ಕವನ ಸಂಗ್ರಹದಲ್ಲಿ ಆಯ್ಕೆಯಾದ ಕವನಗಳ ಪ್ರಕಟಣೆಗೆ ಕವಿಗಳು ತಮ್ಮ ಲಿಖಿತ ಅನುಮತಿ ಕೊಟ್ಟರೆ ಮಾತ್ರ ಇದರಲ್ಲಿ ಭಾಗವಹಿಸಬಹುದು.‌ ಸಂಪಾದಿತ ಪುಸ್ತಕದ ಪ್ರಕಟಣೆಗೆ  ಕವಿಗಳು ಯಾವುದೇ ಶುಲ್ಕ/ವೆಚ್ಚವನ್ನು ತರಬೇಕಾಗಿಲ್ಲ. ಕಥಾಬಿಂದು ಪ್ರಕಾಶನವು ಕವಿಗಳಿಗೆ ಯಾವುದೇ ಸಂಭಾವನೆಯನ್ನು ನೀಡುವುದಿಲ್ಲ. ನಮ್ಮ ಸಂಸ್ಥೆಯು ಅಮೆಜಾನ್ ಮೂಲಕ ಪುಸ್ತಕಗಳನ್ನು ವಿತರಿಸಲು ವ್ಯವಸ್ಥೆ ಹೊಂದಿರುವುದರಿಂದ ಕವನಗಳು ಹೆಚ್ಚು ಓದುಗರನ್ನು ತಲುಪಲಿ ಎಂಬುದು ಈ ಯೋಜನೆಯ ಆಶಯವಾಗಿದೆ.
ಈ ನಿಯಮಗಳಿಗೆ ಒಪ್ಪಿಗೆ ಇರುವ ಕವಿಗಳು ಸಂಸ್ಥಾಪಕರಾದ ಪ್ರದೀಪ್ ಕುಮಾರ್ ಪಿ ವಿ ಅವರಿಗೆ ತಮ್ಮ ಹೆಸರು, ಪ್ರಕಟಿತ ಪುಸ್ತಕದ ಹೆಸರು ಮತ್ತು ವಾಟ್ಸಪ್ ನಂಬರ್ ನಮೂದಿಸಿ ಈ ಕೆಳಗಿನ ಸಂದೇಶವನ್ನು ಕಳುಹಿಸುವ ಮೂಲಕ ತಮ್ಮ ಆಸಕ್ತಿಯನ್ನು ತಿಳಿಸಬಹುದು.
ಉದಾಹರಣೆ:- "ನನ್ನ ಕವನ ರಂಗೋಲಿ'  ಈ ಯೋಜನೆಯಲ್ಲಿ ಭಾಗವಹಿಸಲು ನಾನು ಆಸಕ್ತನಾಗಿದ್ದು ಈ ಸಂದೇಶದಲ್ಲಿ ತಿಳಿಸಿರುವ ನಿಯಮಗಳಿಗೆ ಈ ಮೂಲಕ ನನ್ನ ಒಪ್ಪಿಗೆಯನ್ನು ತಿಳಿಸುತ್ತಿದ್ದೇನೆ." ಎಂಬ ಒಪ್ಪಿಗೆ ಪತ್ರವನ್ನು ವಾಟ್ಸಪ್ ಮೂಲಕ  9341410153ಮೊಬೈಲ್ ನಂಬರಿಗೆ ಕಳಿಸಿ ಕೊಡಬೇಕಾಗಿ ವಿನಂತಿ.


2. ಎರಡನೇ ಯೋಜನೆ

ಜನವರಿ 21 2024, ರಂದು ಇನ್ನು 30 ಪುಸ್ತಕಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದು ಪುಸ್ತಕ ಪ್ರಕಟಣೆಯ ಪ್ರಕ್ರಿಯೆ ಪ್ರಾರಂಭವಾಗಿದೆ. 
ಈಗಾಗಲೇ ಈ ಯೋಜನೆಯ ಅಂತಿಮ ದಿನಾಂಕ ಮುಗಿದಿದೆ. ಪುಸ್ತಕದ ಅಡಕಗಳಾದ ಮುನ್ನುಡಿ,ಬೆನ್ನುಡಿ, ಲೇಖಕರ ನುಡಿ ಇತ್ಯಾದಿ ಪೂರಕಗಳ ಜೊತೆಗೆ ಸಂಕಲನದ ಕವನಗಳನ್ನು ಕಳಿಸಿ ಕೊಟ್ಟಿದ್ದಾರೆ ಮತ್ತು ನಿಗದಿತ ಶುಲ್ಕವನ್ನು ಕೊಟ್ಟಿದ್ದಾರೆ. ಇನ್ನೂ ಕೆಲವು ಲೇಖಕರು ಕವನಗಳನ್ನು ಮಾತ್ರ ಕಳಿಸಿದ್ದಾರೆ ನಿಗದಿತ ಶುಲ್ಕ ಹಾಗೂ ಮುನ್ನುಡಿ ಬೆನ್ನುಡಿ ಎಲ್ಲವನ್ನು ಡಿಸೆಂಬರ್ ಹತ್ತನೇ ತಾರೀಖಿನ ಒಳಗೆ ಕಳಿಸಬೇಕಾಗಿ ವಿನಂತಿ. ದೊಡ್ಡ ಯೋಜನೆ ಆಗಿರುವುದರಿಂದ ಪುಸ್ತಕಗಳನ್ನು ಸೂಕ್ತ ಸಮಯದ ಒಳಗೆ ಪ್ರಕಟಿಸುವ ತುರ್ತು ಇದೆ. ನಿಮ್ಮ ಸಹಕಾರಕ್ಕಾಗಿ ಕೃತಜ್ಞತೆಗಳು. ಈ ಯೋಜನೆಯಲ್ಲಿ ಪ್ರಕಟಣೆಗೆ ಆಯ್ಕೆಯಾದ ಸಂಕಲನಗಳ ಮಾಹಿತಿಯನ್ನು ಮುಂದಿನ ನಾಲ್ಕೈದು ದಿನಗಳಲ್ಲಿ ಪ್ರಕಟಿಸಲಾಗುವುದು.


ಮುಖ್ಯವಾದ ಪ್ರಕಟಣೆ
ವಿಶ್ವಾಸಿ
ಪ್ರದೀಪ್ ಕುಮಾರ್ ಪಿವಿ
ಮುಖ್ಯವಾದ ಪ್ರಕಟಣೆ
ಮುಖ್ಯವಾದ ಪ್ರಕಟಣೆ

Comments (0)




Be the first to comment using the form below.