ಮುಸ್ಸಂಜೆ ವೇಳೆಯಲಿ
ಮಸ್ಸಂಜೆ ವೇಳೆಯಲಿ ಮನವರಸಿದೆ ನಿನ್ನನು
ನಿನ್ನದೇ ಯೋಚನೆ ನಿರ್ಧಾರ ನನ್ನದಲ್ಲೇನು
ನನ್ನದೇ ಭಾವವ ಅಪ್ಪಿರುವೆ ನೀನಲ್ಲವೇನು
ನೀನಲ್ಲ ನಾನಲ್ಲ ಯಾರೆಲ್ಲ ಒಲವಲ್ಲೇನು
ಒಲವು ಹೆಚ್ಚೇ ಗಂಡು ಹೆಣ್ಣುಗಳಲ್ಲಿಂದು
ಇAದು ಅಂದು ಎಂದೆAದಿಗೂ ಮುಂದು
ಮುAದು ಹಿಂದು ಆದವೋ ಕೆಲವೊಂದು
ಕೆಲವು ಕೇವಲ ಮೈನಾಸೆಯಿಂದೋಡಿ ಬೆಂದು
ಬೆAದು ಸತ್ಯವೇ ಸತ್ತವು ಪ್ರೀತಿಗಳಿಂದು
ಪ್ರೀತಿ ಮಾತುಗಳ ಅಕ್ಷರದ ರೂಪವಂದು
ಅAದು ಮತ್ತೆ ಮತ್ತೆ ಯೋಚಿಸುತಲಂದು
ಯೋಚನೆ ಯೋಜನೆ ಯೋಗವರಸಿ ಕೊಂದು
ಕೊಂದೆನೇಕೋ ಒಲವನು ಎನ್ನುತ ಮನನೊಂದು
ನೊAದು ನೋವಲೇ ಹೃದಯದೀ ಮನೆಮಾಡಿಹ್ರಿಂದು
ಮನೆಮನಸೋತು ಸೋಲುತ ಪ್ರೇಮವೆಂದರಿAದು..
Comments (0)
Post Comment
Report Abuse
Be the first to comment using the form below.