ಗಜಲ್ ಅಂತರಂಗದ ಹೂಬನ. ಇಲ್ಲಿ ಮನದ ಘಮಲು ಪಸರಿಸಿರುತ್ತದೆ. ಪ್ರೇಮದ ಅಮಲು ಓದುಗರಿಗೆ ಗುಂಗು ಹಿಡಿಸುತ್ತದೆ. ಪ್ರೀತಿಯ ಗುಂಗಿಗೆ ಒಳಗಾದ ಜೀವ ತನ್ನ ಮನದ ಹಾಡ ಹಾಡುತ್ತಾ ನಲಿಯುತ್ತದೆ. ಇದು ಪ್ರತಿ ಹೊಸ ಗಜಲ್ ಸಂಕಲನದ ವಿಶೇಷ ಕೂಡಾ ಹೌದು. ಶ್ರೀಮತಿ ಸರ್ವಮಂಗಳ ಜಯರಾಂ ಅವರು ಈ ಸಂಕಲನದ 54 ಗಜಲ್ ಗಳಲ್ಲಿ ಭಾವನೆಗಳ ಚಿತ್ತಾರ ಬಿಡಿಸಿದ್ದಾರೆ. ಕವಯತ್ರಿಯಾಗಿ, ಕಥೆಗಾರ್ತಿಯಾಗಿ, ನಾಡಿನ ಹೆಸರಾಂತ ಪತ್ರಿಕೆಗಳಿಗೆ ಅಂಕಣಕಾರ್ತಿಯಾಗಿ ಪ್ರಸಿದ್ಧ ರಾಗಿರುವ ಶ್ರೀಮತಿ ಸರ್ವಮಂಗಳ ಜಯರಾಂ ಅವರು ತಮ್ಮ ಮೊದಲ ಗಜಲ್ ಸಂಕಲನ ‘ಮಾಧುರಿಯ ಮಿಡಿತಗಳು’
ಒಂದು. ಗಜಲ್
*ಈ ಕಣ್ಣ ಚಂದದ ತಿರುವಿನಲ್ಲೇ ನಾ ನಿನ್ನ ಸಂದಿಸಿದ್ದು*
*ಈ ಕಣ್ಣ ಪಟಲದ ನಡುವಿನಲ್ಲೇ ನಾ ನಿನ್ನ ಬಂಧಿಸಿದ್ದು*
ಪ್ರೀತಿ ಇಲ್ಲದೆ ಹೃದಯ ಅರಳದು. ಅದು ತೈಲವಿಲ್ಲದ ದೀಪದಂತೆ ಎನ್ನುವ ಸುಂದರ ರೂಪಕಗಳು ಮನಸೆಳೆಯುತ್ತವೆ.
ಪ್ರೀತಿ ಪ್ರೇಮದ ನೆಪವೊಡ್ಡಿ ಕರುಳು ಕೊಯ್ಯಬೇಡ ಗೆಳೆಯ
ಎಂದು ಹೃದಯ ಬೇಡಿಕೊಳ್ಳುತ್ತದೆ.
ಬರಿ ಪ್ರೇಮದ ಭಾವಗಳಷ್ಟೇ ಅಲ್ಲದೆ ದೇಶಭಕ್ತಿ, ಅಕ್ಷರದ ಮಹತ್ವ ಭಾವೈಕ್ಯತೆ ಇಂಥ ಸಾಮಾಜಿಕ ವಿಷಯಗಳತ್ತಲೂ ಮುಖ ಮಾಡಿರುವ ಗಜಲ್ ಗಳು ತಮ್ಮ ಭಾವ ವಿಸ್ತಾರದಿಂದ ವಿಶೇಷವೆನಿಸುತ್ತವೆ.
*ನನ್ನ ಕನಸಿನ ಭಾರತ ಪ್ರಗತಿಪಥದತ್ತ ಹೊಳೆಯುತ್ತಿದೆ ನೋಡು* ಎನ್ನುವ ಗಜಲಿನ ಸಾಲು ದೇಶಪ್ರೇಮವನ್ನು ತುಂಬಿಕೊಂಡಿದೆ. ಆದರೆ ಅಷ್ಟಕ್ಕೆ ತೃಪ್ತರಾಗದ ಗಜಲ್ಕಾರ್ತಿ ಇಲ್ಲಿನ ನೋವುಗಳನ್ನು ದಾಖಲಿಸಿರುವುದು ಅವರ ವಿಶೇಷ ಶಕ್ತಿಗೆ ಸಾಕ್ಷಿಯಾಗಿದೆ. ‘ತನ್ನೂರಿನ ದಾರಿಗಳು ಅದೆಷ್ಟು ಶತಮಾನ ಕಳೆದರೂ ಡಾಂಬರು ಕಾಣಲಿಲ್ಲ’ಎಂದು ಇಲ್ಲಿನ ಕೊರತೆಗಳನ್ನು ಕವಯಿತ್ರಿ ದಾಖಲಿಸುತ್ತಾರೆ. ಇದೇನೇ ಇದ್ದರೂ ಇವರ ಗಜಲ್ಗಳ ಆ ಶಕ್ತಿ ಇರುವುದು ವಿಶೇಷವಾಗಿ ಪ್ರೀತಿಯ ತಹತಹದಲ್ಲಿಯೇ.
*ದಕ್ಕಿದ್ದು ದಿಟವೇ ಆದರೂ ಬಿಕ್ಕಿದ್ದು ಬಯಲಾಗಲಿಲ್ಲ ಗೆಳೆಯ*
*ಅಂತಃಕರಣದ ಎದೆ ಹಾಸಿನಲ್ಲೂ ದಾಖಲಾಗಲಿಲ್ಲ ಗೆಳೆಯ*
Comments (0)
Post Comment
Report Abuse
Be the first to comment using the form below.