ಕವಿ ಹೃದಯದ ಶಿಕ್ಷಕಿ ಗಿರಿಜಾ ಅ ಪಾಟೀಲ
ಶ್ರೀಮತಿ ಗಿರಿಜಾ ಅ ಪಾಟೀಲ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನವರು. ವೃತ್ತಿಯಲ್ಲಿ ಶಿಕ್ಷಕಿ. ವಿದ್ಯಾಭ್ಯಾಸ - ಟಿ ಸಿ ಹೆಚ್ , ಎಮ್ ಎ. ತಂದೆ ಅರವಿಂದಗೌಡ ಗೋವಿಂದ ಗೌಡ ಪಾಟೀಲ. ತಾಯಿ ಕಮಲಾ ಬಾಯಿ. ಮಕ್ಕಳು ಪ್ರಜ್ವಲಗೌಡ ಪಾಟೀಲ, ಪ್ರೀತಮ್ ಗೌಡ ಪಾಟೀಲ ಮತ್ತು ಮಗಳು ಗೌರಿ ಮಲ್ಲನಗೌಡ.
ಸಾಹಿತ್ಯ ಸಾಧನೆ
ವಿವಿಧ ಸಾಹಿತ್ಯಕ ಪ್ರಕಾರಗಳಲ್ಲಿ ಬರವಣಿಗೆ ಮಾಡುತ್ತಾರೆ. ಲೇಖನ ಕಥೆ, ಟಂಕಾ, ಹಾಯ್ಕು, ಚುಟುಕು ಅವರ ಆಸಕ್ತಿಯ ಉಪ ಪ್ರಕಾರಗಳು. "ಅವಳಂತರಾಳ" ಪ್ರಥಮ ಕವನ ಸಂಕಲನ ಉಡುಪಿ ರಾಜಾಂಗಣದಲ್ಲಿ ಬಿಡುಗಡೆಗೊಂಡಿದೆ. ಶ್ರೀಮತಿ ಗಿರಿಜಾ ಅ ಪಾಟೀಲ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಅಂತರ್ಜಾಲ ಸಾಹಿತ್ಯಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು
ಚಾಲುಕ್ಯ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ (ಬರಹವೇ ಶಕ್ತಿ ವೇದಿಕೆ.. ಪ್ರಥಮ ಚಾಲುಕ್ಯ ಸಾಹಿತ್ಯ ಸಮ್ಮೇಳನ -೨೦೨೪)
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (ಕವಿ ಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ -೨೦೨೪)
ಕರ್ನಾಟಕ ಶಿಕ್ಷಣ ಸಿರಿ ಪ್ರಶಸ್ತಿ -೨೦೨೪
(ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ಬ್ಯಾಕೂಡಾ)
ಸೌರಭ ರತ್ನ ಪ್ರಶಸ್ತಿ -೨೦೨೪ (ಕಥಾಬಿಂದು ಗೀತಾ ಸಾಹಿತ್ಯೋತ್ಸವ)
ಸರ್ಟಿಫಿಕೇಟ್ ಆಫ್ ಅಪ್ರಿಸಿಯೇಷನ್ -2024 (ಇನ್ನರ ವ್ಹೀಲ್ ಕ್ಲಬ್ ಆಫ್ ಮುಧೋಳ)
ಅರಕೇರಿ ದತ್ತಿ ಪ್ರಶಸ್ತಿ-೨೦೨೪ ( ಪ್ರಥಮ ಕವನ ಸಂಕಲನ
"ಅವಳಂತರಾಳ" ಕಾವ್ಯ ಕೃತಿಗೆ ಬೀಳಗಿ ತಾಲ್ಲೂಕಿನ ಐದನೇ ಸಾಹಿತ್ಯ ಸಮ್ಮೇಳನದಲ್ಲಿ)
ಬಹುಮುಖ ಪ್ರತಿಭೆಯ ಗಿರಿಜಾ ಅ ಪಾಟೀಲ ಅವರ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಹೆಚ್ಚಿನ ಪ್ರಗತಿಯಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.
Comments (0)
Post Comment
Report Abuse
Be the first to comment using the form below.