(JavaScript required to view this email address)
Mangalore

News & Articles

ನಾನು ನನಗೆ ಪರಿಚಯವಾಗುವ ಹೊಸ ಸ್ನೇಹಿತ ಸ್ನೇಹಿತೆಯರ ಬರಹಗಳನ್ನು ಹುಡುಕಿ ಇಷ್ಟಪಟ್ಟು ಓದುತ್ತೇನೆ ಹಾಗೂ ಅವರೊಂದಿಗೆ ನಿರಂತರವಾಗಿ ಓದಿದ್ದರ ಕುರಿತು ಮಾತನಾಡುತ್ತಾ ಇರುತ್ತೇನೆ. ಹಾಗೆ ಓದಿಸಿಕೊಳ್ಳುವ ಬರಹಗಾರರಲ್ಲಿ ಗೆಳತಿ ಕವಿತಾ ಕೂಡ ಒಬ್ಬರು. ಆರಂಭದಲ್ಲಿ ಇವರೊಂದಿಗೆ ಮಾತನಾಡುವಾಗ ಇವರು ಬೇರೆ ಊರಿನವರು ಇರಬೇಕು ಅಂದುಕೊ0ಡಿದ್ದೆ. ಆದರೆ ಇವರು ಕೂಡ ನನ್ನಂತೆಯೇ ಬರಹ ಪ್ರಿಯರು, ಮಣಿಪಾಲದವರು ಎಂದು ತಿಳಿದು ತುಂಬಾ ಖುಷಿಯಾಯಿತು. ಉತ್ತಮ ಪ್ರತಿಭೆಯಾದ ಕವಿತಇವರು ಹಲವಾರು ಬರಹಗಳನ್ನು ಹೆಗಲಿಗೇರಿಸಿಕೊಂಡ ಯುವ ಪ್ರತಿಭೆ ಎಂದರೆ ತಪ್ಪಾಗಲಾರದು. ಭಾವಲಹರಿ ಕವನ ಸಂಕಲನದ ಕವನಗಳು ಎಲ್ಲ ಆರಂಭಿಕ ಕವಿಗಳ ಕವನಗಳಂತೆಯೇ ಕಚ್ಚಾ ಆಗಿವೆ. ಮಾವಿನ ಮರದಲ್ಲಿ ಆಗಷ್ಟೇ ಹಳದಿ ಬಣ್ಣಕ್ಕೆ ತಿರುಗಿ ಪಾಡಿಗೆ ಬಿದ್ದು ಹಣ್ಣಾಗುತ್ತಿರುವ ಮಾವಿನಕಾಯಿ ತಿನ್ನಲು ಬಹಳ ರುಚಿಯಾಗಿರುತ್ತದೆ. ಅದರ ಹುಳಿಯೊಂದಿಗೆ ಬೆರೆತ ಸಿಹಿಯ ಸ್ವಾದ ಸವಿದವರಿಗೆ ಗೊತ್ತು. ಹಾಗೆಯೇ ಕವಿತೆಯಾಗಲು ಕಾಯುತ್ತಿರುವ ಕವಿತರವರ ಕವಿತೆಗಳು ಸಹ ಪಾಡಿಗೆ ಬಿದ್ದ ಮಾವಿನ ಹಣ್ಣಿನಂತೆಯೇ ರುಚಿಯಾಗಿ ಓದಿಸಿಕೊಳ್ಳುತ್ತಿವೆ. ಇವರ ಪ್ರಸ್ತುತ, ಅಮ್ಮ, ಅಪ್ಪ, ಗೆಳತಿ ಇತ್ಯಾದಿ ಕವನಗಳು ಸಂಬ0ಧಗಳ ಸುತ್ತಲೇ ಗಿರಕಿ ಹೊಡೆಯುತ್ತಿವೆಯಾದರೂ ಒಂದಕ್ಕೊ0ದು ಭಿನ್ನವಾಗಿವೆ.
ಕವಿತ  ಅವರ ಭಾವಲಹರಿ  ಕವನ ಸಂಕಲನ
ಕವನಗಳಲ್ಲಿ ತನ್ನಿಂದ ತಾನೇ ಘಟಿಸುವ ಹುಟ್ಟು-ಸಾವು, ಸೃಷ್ಠಿ, ಸತ್ಯ-ಮಿಥ್ಯ, ವಾಸ್ತವ ಇತ್ಯಾದಿಗಳಲ್ಲಿ ಅನಿರೀಕ್ಷಿತ ತಿರುವುಗಳಿವೆ. ಅದಮ್ಯ ಶಕ್ತಿ ತುಂಬಿದೆ. ಬಾಲ್ಯದಲ್ಲಿ ತಮ್ಮ ನೆನಪುಗಳು ಎಲ್ಲಾರಿಗೂ ಕಾಡುತ್ತಿರುತ್ತದೆ. ಒಬ್ಬ ಬರಹಗಾರ/ಗಾರ್ತಿಗೆ ಪದೇ ಪದೇ ಕಾಡುವ ನೆನಪುಗಳೆ ಅದು. ಅದನ್ನು ಬರೆಯದಿದ್ದರೆ ಮುಕ್ತಿಯಿಲ್ಲವೇನೋ ಅನ್ನಿಸುವುದು ಸತ್ಯ ಅಂತೆಯೇ ಕವಿತರವರಿಗೆ ತಾನು ಕಂಡು0ಡ ಪರಿಸರದ ಸಣ್ಣ ಸುದ್ದಿ ಸಂಗತಿಗಳನ್ನು ಕತೆಗಳಲ್ಲಿ ಹೆಣೆಯುವ ನಾಜುಕತೆ ಇದೆ.
ಹೀಗಾಗಿ ಈ ಕವನಸಂಕಲನ ಭಾವಲಹರಿದಲ್ಲಿನ ಕವನಗಳು ಸರಳವಾಗಿ ಓದಬಹುದು. ಕವಿತರವರ ಈ ಭಾವಲಹರಿ ಕವನ ಸಂಕಲನವನ್ನು ಎಲ್ಲರೂ ಕೊಂಡು ಓದುವಂತಾಗಲಿ ಹಾಗೂ ಮತ್ತಷ್ಟು ಕೃತಿಗಳು ಇವರಿಂದ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಡಲಿ ಎನ್ನುತ್ತಾ ಇವರ ಸಾಹಿತ್ಯ ಕೃಷಿ ಬದುಕಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸುವೆ.
ಕವಿತ  ಅವರ ಭಾವಲಹರಿ  ಕವನ ಸಂಕಲನ
ಪುಷ್ಪ ಪ್ರಸಾದ್ ಉಡುಪಿ
ಲೇಖಕರು
ಉಡುಪಿ ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರು

ಕವಿತ  ಅವರ ಭಾವಲಹರಿ  ಕವನ ಸಂಕಲನ

Comments (0)




Be the first to comment using the form below.