(JavaScript required to view this email address)
Mangalore

News & Articles

ಕಥಾಬಿಂದು ಪ್ರಕಾಶನ ಸಂಸ್ಥೆಯು ಕಳೆದ 18 ವರ್ಷಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ಸಾಹಿತ್ಯಾತ್ಮಕ ಕಾರ್ಯಕ್ರಮವನ್ನು ಮಲೇಶಿಯಾ, ಥೈಲೆಂಡ್, ದುಬೈ, ನೇಪಾಳ, ಹಾಗೂ ಕಾಶಿ, ಮುಂಬೈ, ಬೆಂಗಳೂರು, ಮಂಗಳೂರು ಹೀಗೆ ನಾನಾ ಕಡೆಯಲ್ಲಿ ಕೃತಿಗಳ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಸನ್ಮಾನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ವರ್ಷ 18ನೇ ವಾರ್ಷಿಕೋತ್ಸವ ಹಾಗೂ ಸಾಹಿತ್ಯೋತ್ಸವ ಮತ್ತು 17 ಕೃತಿಗಳ ಬಿಡುಗಡೆಯ ಕಾರ್ಯಕ್ರಮವನ್ನು ಅಕ್ಟೋಬರ್ 26 ರಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳ ಕಟ್ಟೆ..... ಇಲ್ಲಿ ಬೆಳಿಗ್ಗೆ 10ಗಂಟೆಗೆ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾಜಿ ಕ.ಸಾ.ಪ ರಾಜ್ಯಾಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಾಧ್ಯಕ್ಷರು, ಬಿಜೆಪಿ, ದ.ಕ ಜಿಲ್ಲೆ  ಇವರು ಉದ್ಘಾಟನೆಯ ನಂತರ  ಶ್ರೀ ಪಿ. ವಿ. ಪ್ರದೀಪ್ ಕುಮಾರ್, ಲೇಖಕ, ಕಾದಂಬರಿಕಾರ ಇವರ ಪ್ರಸ್ತಾವನೆ ಮಾಡುವರು, ಶ್ರೀ ಶ್ರೀಪತಿ ಭಟ್ ಮಾಲಿಕರು ಶ್ರೀ ಧನಲಕ್ಷ್ಮಿ  ಲಕ್ಷ್ಮಿ ಕ್ಯಾಶ್ ಇಂಡಸ್ಟ್ರೀಸ್ಇವರು ಪ್ರಶಸ್ತಿ ಪ್ರದಾನ ಮಾಡುವರು ಶ್ರೀ ಭುವನಾಭಿರಾಮ ಉಡುಪ ಸಂಪಾದಕರು ಯುಗಪುರುಷ ಮಾಸಪತ್ರಿಕೆ ಇವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಬೆಳ್ಚಡ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಮೊಕ್ತೇಸರರು, ಶ್ರೀ ಸುಂದರ್ ಶೆಟ್ಟಿ ವಿಜಯಾ ಬ್ಯಾಕ್ ನಿ. ಅಧಿಕಾರಿ, ಶ್ರೀಮತಿ ಬಿ. ಸತ್ಯವತಿ ಎಸ್ ಭಟ್ಕೊ ಳಚಪ್ಪು ಹಿರಿಯ ಸಾಹಿತಿಗಳು, ಪಡಂಬೈಲು ಡಾ. ಕೃಷ್ಣಪ್ಪ ಗೌಡ ತಾರಸಿ ಕೃಷಿಕ, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹಿರಿಯ ಸಾಹಿತಿ, ಡಾ.ಸತೀಶ ಎನ್.ಬಂಗೇರ ಮುಂಬೈ ಇವರು ಭಾಗವಹಿಸುವರು. ’ 

ಕಥಾಬಿಂದು ಸಾಹಿತ್ಯೋತ್ಸವ
ಪ್ರಶಸ್ತಿ ಪುರಸ್ಕೃತರು. ‘ಚೇತನ್ಯ ಶ್ರೀ’ ಪ್ರಶಸ್ತಿ ಪುರಸ್ಕೃತರು ಡಾ. ಬಿ. ಎ. ಪಾಲಾಕ್ಷ ಪುಸ್ತಕ ಸೊಗಸು 2023 ‘ಬಾಲ ಮಂದಾರ’ ಕೃತಿ ಶ್ರೀಮತಿ ಪರವೀನ ಬಾನು ಎಂ. ಶೇಖ, ಹಾಗೂ ಶ್ರೀ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ (ಸೌರಭ ರತ್ನ), ಶ್ರೀ ಸತೀಶ್ ಶೆಟ್ಟಿ (ಸಮಾಜ ಸೇವಾರತ್ನ), ಶ್ರೀ ಆರ್. ಎಂ. ಗೋಗೇರಿ (ಸೌರಭ ರತ್ನ), ಡಾ. ಲಕ್ಷ್ಮಿಕಾಂತ್. ಕೆ.ಎಸ್ (ಶಿಕ್ಷಣ ರತ್ನ), ಶ್ರೀ ಕುಮಾರ್ ಆರ್. ಶೆಟ್ಟಿ (ಸೌರಭ ರತ್ನ) ಶ್ರೀ ನಾಗರಾಜ್ ಭಟ್ (ಸೌರಭ ರತ್ನ), ಡಾ. ಶಶಿಕಿರಣ್ ಶೆಟ್ಟಿ (ಸಮಾಜ ಸೇವಾರತ್ನ), ಶ್ರೀಮತಿ ಕವಿತಾ ಗೋಪಾಲ್ (ಸಮಾಜ ಸೇವಾರತ್ನ), ಶ್ರೀಮತಿ ಶೈಲಾ ಬಸವರಾಜ್ (ಸೌರಭ ರತ್ನ), ಶ್ರೀಮತಿ ಅಣ್ಣಮ್ಮ (ಸಮಾಜ ಸೇವಾರತ್ನ), ಶ್ರೀಮತಿ ಪೂರ್ಣಿಮ ಗುರುಮೂರ್ತಿ (ಸೌರಭ ರತ್ನ), ಶ್ರೀಮತಿ ಶೈಲಾ  ಚೆಲುವಯ್ಯ (ಶಿಕ್ಷಣ ರತ್ನ), ಶ್ರೀ ಕೇಶವ ಶಕ್ತಿನಗರ ‘ಯಕ್ಷಗಾನ ಶ್ರೀ’, ಶ್ರೀ ಎ.ವಿಜಯ್ಕು ಮಾರ್ ಸುಳ್ಯ ‘ಗಾಯನ ಶ್ರೀ’, ಶ್ರೀಪಿ.ವಿ.ಮಲ್ಲಿಕಾರ್ಜುನ ‘ಕೃಷಿ ರತ್ನ’ 
ಕಥಾಬಿಂದು ಸಾಹಿತ್ಯೋತ್ಸವ
ಬಿಡುಗಡೆಗೊಳ್ಳಲಿರುವ ಕೃತಿಗಳು.. ಪಿ. ವಿ. ಪ್ರದೀಪ್ ಕುಮಾರ್ ಅವರ ‘ಕಣಜ’, ದೇವನೂರು ಅಚ್ಯುತ ರಾವ್ ಅವರ ನಲ್ಲೆ ಮುಡಿದ ಮಲ್ಲೆ ನೀಮಾ  ಲೋಬೊ  ಅವರ ‘ಅಭಿಸಾರಿಕೆ’ ಮತ್ತು ಮಾತು ಮುಗಿದ ಮೇಲೂ, ರವೀಶ ಕೆ. ಮಳಲಿ ಚೆನ್ನೇನ ಹಳ್ಳಿ ಅವರ ‘ಅವ್ವನೂ ಸುಳ್ ಹೇಳ್ತಾಳ’, ಡಾ. ಜಾನಕಿ ದೇವಿ ಅವರ ‘ಗುರುದೇವ’, ರೇವತಿ ಆರ್. ವೈದ್ಯ ಅವರ ‘ಕವನ ಕಿರಣಗಳು’, ಪುಷ್ಪ ಪ್ರಸಾದ್ ಅವರ ‘ಗುಡಿಗಾರ’, ಅನುಪಮ ಸುಲಾಖೆ ಅವರ ಚಿಲಿ-ಪಿಲಿ, ಶಶಿಕಲಾ ಟೀಚರ್ ಅವರ ‘ಕವನದ ಹಾದಿ’, ಕುವಿಕು ಕಣ್ವತಿರ್ಥ ಅವರ ಬೋಟಿ, ಶೋಭಾ ದಿನೇಶ್ ಉದ್ಯಾವರ ಅವರ ಬೆರಗು ಚುಕ್ಕಿ, ಗೀತಾ ಲೋಕೇಶ್ ಅವರ ಭಾವ ಸಿಂಚನ, ಡಾ. ಶಶಿಕಿರಣ್ ಶೆಟ್ಟಿ ಅವರ ಬದುಕ ಬದಲಿಸುವ ಕತೆಗಳು... ಕವಿತಾ ಗೋಪಾಲ್ ಅವರ ಕತ್ತಲೆಯ ಕಣ್ಣು, ಅನಿತಾ ಶೆಣೈ ಅವರ ಮಿಂಚುಳ್ಳಿ, ವಿಜಯ ಗËರಿಸುತ ಅವರ ‘ಕವನ ಧಾರೆ
ಕಥಾಬಿಂದು ಸಾಹಿತ್ಯೋತ್ಸವ
ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಥಾಬಿಂದು ಸಾಹಿತ್ಯೋತ್ಸವ
ಕಥಾಬಿಂದು ಸಾಹಿತ್ಯೋತ್ಸವ

Comments (0)




Be the first to comment using the form below.