(JavaScript required to view this email address)
Mangalore

News & Articles

ಮಂಗಳೂರು ಸೆಪ್ಟೆಂಬರ್ 27 :
ಕಥಾ ಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಯ ಸಂಸ್ಥಾಪಕರಾದ ಪಿವಿ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಭಾನುವಾರ ತುಳುಭವನದಲ್ಲಿ ನಡೆಯಿತು. ಪಿವಿ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಯುವ ಲೇಖಕಿ ಡಾ ವಿದ್ಯಾ ಲಕ್ಷ್ಮಿ ವಿ ಶೆಟ್ಟಿಯವರು ದೀಪ ಬೆಳಗಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಅತಿಥಿಗಳಾಗಿ ಸುನಿತಾ ಪ್ರದೀಪ್ ಕುಮಾರ್ ಮತ್ತು ಡಾ ಕೊಳ್ಚಪ್ಪೆ ಗೋವಿಂದ ಭಟ್ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. 
ಈ ಕಾರ್ಯಕ್ರಮದಲ್ಲಿ ಪುಷ್ಪಪ್ರಸಾದ್ ಅವರ "ಬಿಂಕವೇಕೆ ಮಂಕೆ...", ಗಂಗಾಧರ ಗೌಡರ್ ಅವರ "ಚಂದ್ರಿಕೆ ನೀನ್ ಚಂದ ಇರೆ...", ಜಾನಕಿ ದೇವಿ ಅವರ "ನಾಯಕಿ", ಮತ್ತು ಆ ಮೃತ್ಯುಂಜಯ ಅವರ ಅಂತರಾಳ ಕೃತಿಗಳು ಲೋಕಾರ್ಪಣೆಗೊಂಡುವು. ಇದೇ ಸಂದರ್ಭದಲ್ಲಿ ಎಂ ಶ್ರೀನಿವಾಸ ಕೊಡ್ಲಿ, ಜೈ ಕರುನಾಡ ರಕ್ಷಣಾ ಸಂಘ ಮತ್ತು ಲತಾ ರವಿ ಅವರಿಗೆ "ಕನ್ನಡ ಶ್ರೀ"  ಪ್ರಶಸ್ತಿ ಪ್ರದಾನ ಮಾಡಲಾಯಿತು. ತದನಂತರ ಕವಯತ್ರಿ ಲಕ್ಷ್ಮೀ ವಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹದಿನೈದು ಕವಿಗಳು ಸ್ವರಚಿತ ಕವನ ವಾಚನ ಮಾಡಿದರು. ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಮಾಡಿದರು.
ಕಥಾಬಿಂದು ಸಾಹಿತ್ಯ ಸಂಭ್ರಮ
ಕಥಾಬಿಂದು ಸಾಹಿತ್ಯ ಸಂಭ್ರಮ - Youtube Video
ಕಥಾಬಿಂದು ಸಾಹಿತ್ಯ ಸಂಭ್ರಮ

Comments (0)




Be the first to comment using the form below.