(JavaScript required to view this email address)
Mangalore

News & Articles

ಮಂಗಳೂರು: ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ 2018 ಮತ್ತು ಸಾಧಕರಿಗೆ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕಥಾಬಿಂದು ಪ್ರಕಾಶನದ ವತಿಯಿಂದ ಇತ್ತೀಚೆಗೆ ತುಳುಭವನದ ಸಿರಿಚಾವಡಿಯಲ್ಲಿ ನಡೆಯಿತು.

ಮಹೇಶ್‌ ಭಟ್‌ (ಶಿಲ್ಪ ಕಲೆ), ದಿನೇಶ್‌ ಅತ್ತಾವರ(ರಂಗಭೂಮಿ), ಕೃಷ್ಣಪ್ಪ ಗೌಡ (ಕೃಷಿ), ಬದ್ರುದ್ದೀನ್‌ ಕೂಳೂರು (ಸಾಹಿತ್ಯ), ಎಸ್.ಎಸ್. ನಾಯಕ್‌ (ಸಮಾಜಸೇವೆ), ಮಾಸ್ಟರ್‌ ತ್ರಿಶೂಲ್‌ (ಬಹುಮುಖ ಪ್ರತಿಭೆ) ಅವರಿಗೆ ಮೂಡುಬಿದಿರೆ ಧನಲಕ್ಷ್ಮೀ ಇಂಡಸ್ಟ್ರೀಸ್‌ನ ಶ್ರೀಪತಿ ಭಟ್‌ ಪ್ರಶಸ್ತಿ ಪ್ರದಾನ ಮಾಡಿದರು.

ಪಿ.ವಿ. ಪ್ರದೀಪ್‌ ಕುಮಾರ್ ಅವರ ‘ಬೆಂಕಿ ಗುಂಡು’ ಮತ್ತು ‘ಕನಸಿನ ಹೃದಯ’ ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರೀತ್ತಾಯ ಉದ್ಘಾಟಿಸಿದರು. ಶಿವಾನಂದ ಕರ್ಕೇರ, ಬೆಟ್ಟಂಪಾಡಿ ಸುಂದರ್ ಶೆಟ್ಟಿ, ಭುವನಾಭಿರಾಮ ಉಡುಪ, ಮಾಧವ ರಾವ್‌ ಅತಿಥಿಗಳಾಗಿದ್ದರು. ಪ್ರಿಯಾ ಹರೀಶ್, ಸುಧಾ ನಾಗೇಶ್‌ ನಿರೂಪಿಸಿದರು.

Comments (0)




Be the first to comment using the form below.