ಕಾವ್ಯ ರಚನೆ ಎಂಬುದು ಒಂದು ಸೃಜನಶೀಲ ಕ್ರಿಯೆ; ಎಲ್ಲರಲ್ಲೂ ಅದರ ಅಂಶ ಇದ್ದೆ ಇರುತ್ತದೆ. ಇದನ್ನು ಗುರುತಿಸಿ ಬೆಳೆಸುವ ಮೂಲಕ ಕವಿಗಳು ಪ್ರಬುದ್ಧರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕಥಾ ಬಿಂದು ಮಂಗಳೂರು ಮೂಲದ, 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಒಂದು ಪ್ರಕಾಶನ ಸಂಸ್ಥೆ. ಪ್ರತಿ ವರ್ಷ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾ ಬಂದಿರುವುದು ಸಂಸ್ಥೆಯ ಹೆಮ್ಮೆಯ ಸಾಧನೆ. ಕವಿಗಳನ್ನು ಗುರುತಿಸಿ ಬೆಳೆಸುವುದು ಮತ್ತು ಅವರ ಸೃಜನಾತ್ಮಕ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಾಶಿಸುವುದು ಒಂದು ಪೂರಕ ಕೆಲಸ.
ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟು ಹೊಸ ವರ್ಷದ ಪ್ರಥಮ ಅರ್ಧದಲ್ಲಿ ಸಹಸ್ರ ಕವಿಗಳನ್ನು ಒಟ್ಟು ಸೇರಿಸಿ "ಕಥಾಬಿಂದು ಸಹಸ್ರ ಕವಿ ಸಮ್ಮೇಳನ" ವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮವು ಫೆಬ್ರವರಿ ತಿಂಗಳ ಕೊನೆಯಲ್ಲಿ ಆಯೋಜಿಸಲಾಗಿದೆ. ನಿಖರವಾದ ದಿನಾಂಕವನ್ನು ಸದ್ಯ ಭವಿಷ್ಯದಲ್ಲಿ ಪ್ರಕಟಿಸಲಾಗುವುದು. ಸ್ಥಳ ಉಡುಪಿ, ಅಥವಾ ಕಟೀಲು (ಮಂಗಳೂರು) ಇಲ್ಲಿ ಅದ್ದೂರಿಯಾಗಿ ನೆರವೇರಿಸಲಾಗುವುದು.
ಈ ಮಹತ್ವಾಕಾಂಕ್ಷೆಯ ಸಾಹಿತ್ಯಾತ್ಮಕ ಯೋಜನೆಯ ರೂಪರೇಷೆಗಳು ಇಂತಿವೆ :
1. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು 31.1.25ರ ಒಳಗಾಗಿ ನೋಂದಣಿ ಮಾಡುವುದು ಅಗತ್ಯ. ಕವಿಗೋಷ್ಠಿಗಾಗಿ ಬಂದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ. ಪ್ರಕಟಿತ ಪುಸ್ತಕದ ಒಂದು ಪ್ರತಿಯನ್ನು ಭಾಗವಹಿಸಿದ ಕವಿಗಳಿಗೆ ನೀಡಲಾಗುವುದು.
2. ಕವಿಗಳು 24 ಸಾಲುಗಳ ಒಂದು ಕವನವನ್ನು ಈ ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡು ಬರೆದು ವಾಟ್ಸಪ್ ಮೂಲಕ 9341410153 ಈ ಮೊಬೈಲ್ ಸಂಖ್ಯೆಗೆ ರವಾನಿಸಬೇಕು.
ವಿಷಯಗಳು
* ನಮ್ಮ ಕನ್ನಡ ನಾಡು
* ಕಾವ್ಯ ಸುಂದರಿಯ ಕುರಿತು
* ಪರಿಸರ ಪ್ರೇಮ
* ಪ್ರೇಮವೆಂಬ ಸಂವೇದನೆ
* ಕವಿಯ ಕನಸು
* ದೇಶ ಪ್ರೇಮ
* ಮಹಿಳಾ ದೌರ್ಜನ್ಯ ವಿರೋಧ
* ಮಾನವೀಯ ಮೌಲ್ಯ
* ರೈತರ ಕಾಳಜಿ ಮತ್ತು ಹಿತರಕ್ಷಣೆ
* ಕನ್ನಡ ಶಿಕ್ಷಣ
* ನಾಡು-ನುಡಿ ಏಳ್ಗೆಗೆ ನಾನೇನು ಮಾಡಬಲ್ಲೆ
* ಪ್ರಸ್ತುತ ವಾಸ್ತವ ಪರಿಸ್ಥಿತಿ
ಕಳಿಸಿದ ಕವನವನ್ನೇ ಗೋಷ್ಠಿಯಲ್ಲಿ ಓದಬೇಕು. ಅನಿವಾರ್ಯ ಸಂದರ್ಭಗಳಲ್ಲಿ
ಕೆಲವು ಬದಲಾವಣೆಗಳನ್ನು ಮಾಡವ ಹಕ್ಕು ಕಥಾ ಬಿಂದುವಿಗೆ ಮಾತ್ರ ಇರುವುದು. ಆಯೋಜಕರ ನಿರ್ಣಯ ಅಂತಿಮ.
ನೋAದಣಿ ಎಂದರೆ ಶುಲ್ಕ ಪಾವತಿ ಸ್ಕ್ರೀನ್ಶಾಟ್, 24 ಸಾಲು ಮೀರದಂತೆ ಕವನ, ಕವಿಗಳ ಭಾವಚಿತ್ರ, 5 ಸಾಲು ಮೀರದಂತೆ ವ್ಯಕ್ತಿ ಪರಿಚಯ ಇವಿಷ್ಟು ಒಂದೇ ದಿನಾಂಕದAದು ಕಳಿಸಬೇಕು. ಬಿಡಿಬಿಡಿಯಾಗಿ ಕಳಿಸಿದರೆ ಪರಿಗಣಿಸಲಾಗುವುದಿಲ್ಲ. ಆ ಬಗ್ಗೆ ಬರುವ ವಿಚಾರಣೆಗಳಿಗೆ ಅವಕಾಶವಿಲ್ಲ. ಪುಸ್ತಕ ತಯಾರಿ ಮತ್ತು ಮುದ್ರಣಕ್ಕೆ ಈ ವಿಧಿ ವಿಧಾನ ಅತಿ ಮುಖ್ಯ(ಇದು ಪ್ರಕಟಣೆಯ ಉದ್ದೇಶದಿಂದ)
3. ಎಲ್ಲಾ ಸಂವಹನಗಳು ಕಥಾಬಿಂದು ಅಂತರ್ಜಾಲಾ ಬಳಗದ ಮೂಲಕ ನಡೆಸಲು ಅನುವು ಮಾಡಿಕೊಡಲಾಗುವುದು.
4. ನೋಂದಾಯಿತರ ಪಟ್ಟಿಯನ್ನು ವಾರಕ್ಕೆ ಒಂದು ಬಾರಿ ಪ್ರಕಟಿಸಲಾಗುವುದು.
5. ಬಂದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಬಿಡುಗಡೆ ಮಾಡುವ ಯೋಜನೆ ಇದ್ದು ಮೊದಲ ಕೃತಿಯನ್ನೂ ಕವಿ ಗೋಷ್ಠಿಯ ದಿನ ಪ್ರಕಟ ಮಾಡಲಾಗುವುದು.
6. 50 ಕವಿಗಳ ಗುಂಪುಗಳನ್ನು ಮಾಡಿ ಏಕಕಾಲದಲ್ಲಿ 20 ವೇದಿಕೆಗಳಲ್ಲಿ ಕವಿಗೋಷ್ಠಿ ನಡೆಯುವುದು. ಪ್ರತಿ ಗೋಷ್ಠಿಗೆ ಒಬ್ಬರು ಅಧ್ಯಕ್ಷರು ಇದ್ದು ಒಬ್ಬರು ಸಮ್ಮೇಳನಾ ಅಧ್ಯಕ್ಷರನ್ನು ಕೂಡ ಗುರುತಿಸಲಾಗುವುದು.
7. ಪ್ರಯಾಣದ ವೆಚ್ಚವನ್ನು ಭಾಗವಹಿಸುವರು ಭರಿಸಬೇಕು. ಹಾಗೂ ಬರುವವರಿಗೆ ವಸತಿ ಸೌಲಭ್ಯವನ್ನು ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿ ಮಾದರಿಯಲ್ಲಿ ಒದಗಿಸಲಾಗುವುದು. ಖಾಸಗಿ ಕೋಣೆಗಳ ಅನುಕೂಲತೆ ಇರುವುದಿಲ್ಲ. ಕವಿಗೋಷ್ಠಿಯ ದಿನ ನಿಗದಿತ ಸಮಯದಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಕಥಾಬಿಂದು ಪ್ರಕಾಶನ ಒದಗಿಸುವುದು.
8. ಕಾರ್ಯಕ್ರಮವು ದಿನಪೂರ್ತಿಯದ್ದಾಗಿರುತ್ತದೆ. 9. ಜನವರಿ 25 ರ ಮೊದಲು ಹೆಸರು ನೋಂದಾಯಿಸಿದ ಕವಿಗಳು ರಿಯಾಯಿತಿಯಾಗಿ 200 ರೂ ಮಾತ್ರ ಪಾವತಿಸಿದರೆ ಸಾಕು. ಆ ಬಳಿಕ ನೋಂದಣಿ ಮಾಡುವವರು ಪೂರ್ಣ ಶುಲ್ಕ ರೂ.300 ಪಾವತಿಸಬೇಕು.
9. ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಮೂಲಸೌಕರ್ಯಗಳ ಪರ್ಯಾಪ್ತ ಯೋಜನೆ ಅಗತ್ಯವಾದುದರಿಂದ ನೋಂದಣಿ ಇಲ್ಲದವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮದ ದಿನ ಬಿಡುಗಡೆಯಾಗುವ ಸಂಪಾದಿತ ಕವನಗಳ ಪುಸ್ತಕದಲ್ಲಿ ಮೊದಲು ಬಂದ ಕವನಗಳನ್ನು (ಅರ್ಲಿಬರ್ಡ್) ಆದ್ಯತೆಯ ಮೇರೆಗೆ ಸೇರಿಸಲಾಗುವುದು.
10. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 704353049 (ಡಾ ಕೊಳ್ಚಪ್ಪೆ ಗೋವಿಂದ ಭಟ್) ಇವರನ್ನು ಸಂಪರ್ಕಿಸಬಹುದು. ನೋಂದಣಿಯ ಶುಲ್ಕ ಪಾವತಿ, ಕವನ ಇತ್ಯಾದಿ ಕಳಿಸುವುದು 9341410153 ನಂಬರಿಗೆ ಮಾತ್ರ.
ಆಯೋಜಕರ ಬಗ್ಗೆ
ಆಯೋಜಕರ ವಿಳಾಸ
Kathabindu prakashana,
L. I. G. 6 K. H. B colony Kunjatha bail Manglore 575015
9341410153
ವೆಬ್ಸೈಟ್ ವಿಳಾಸ : W.W.W kathabindu.com
ದಾಖಲೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿ ಇರುವ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಭಾಗವಹಿಸಬೇಕಾಗಿ ವಿನಂತಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ನೋಂದಣಿ ಶುಲ್ಕದ ಮೌಲ್ಯದ ಬೇರೆ ಪುಸ್ತಕಗಳನ್ನು ಭಾಗವಹಿಸಿದ ಎಲ್ಲಾ ಕವಿಗಳಿಗೂ ಪುಸ್ತಕ ಬಹುಮಾನವಾಗಿ ನೀಡಲಾಗುವುದು. ಜೊತೆಗೆ ಪ್ರಮಾಣಪತ್ರವನ್ನು ನೀಡಲಾಗುವುದು.
ಕಥಾಬಿಂದು ಪ್ರಕಾಶನ ಮಂಗಳೂರು
Comments (0)
Post Comment
Report Abuse
Be the first to comment using the form below.