ಮುಂಬಯಿ: ದುಬೈ ಮತ್ತು ಮಲೇಶ್ಶಾ ದೇಶಗಳಲ್ಲಿ ಕನ್ನಡದ ಕಂಪು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಸಂಸ್ಥೆ ಮಂಗಳೂರಿನ 'ಕಥಾಬಿಂದು ಪ್ರಕಾಶನ” ಸಂಸ್ಥೆ. ಈ ಸಂಸ್ಥೆಯ ರೂವಾರಿ ಕಾದಂಬರಿಕಾರ, ಸಂಘಟಕರಾದ ಪಿ.ವಿ. ಪ್ರದೀಪ್ ಕುಮಾರ್ ಅವರು. ಕಥಾ ಬಿಂದು ಪ್ರಕಾಶನ ಮಂಗಳೂರು ಇವರು ತುಮಕೂರು ನಗರ ಘಟಕದ ಸಿರಿಗನ್ನಡ ವೇದಿಕೆ ಹಾಗೂ ಪುತ್ತೂರು ಸಾಹಿತ್ಯ ವೇದಿಕೆಯವರ ಸಹಯೋಗದಲ್ಲಿ ಪ್ರಸ್ತುತ ಪಡಿಸಿದ ಕನ್ನಡ ಸಾಹಿತ್ಯ ಸ೦ಜೆ ಜೂ.2ರಂದು ಸಂಜೆ ಮಾಟುಂಗಾ ಸೆಂಟ್ರಲ್‌ನ ಮೈಸೂರು ಎಸೋಸಿಯೇಶನ್‌ನಲ್ಲಿ ಬಹಳ ಅದ್ಧೂರಿಯಿಂದ ಜರಗಿತು.
ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ, ಉದ್ಯಮಿ ಚಂದ್ರಶೇಖರ ಬೆಳ್ಚಡರು ಸಮಾರಂಭದ ಅಧ್ಯಕ್ಷತೆ ವಹಿಸಿರುವರು. ಮುಂಬಯಿಯ ಹಿರಿಯ ಸಾಹಿತಿ, ಕವಯತ್ರಿ ಡಾ. ಸುನೀತಾ ಶೆಟ್ಟಿಯವರು ಶ್ರೀಲಕ್ಷ್ಮೀಯವರ ಕೃತಿ 640 ಪುಟಗಳ ಶ್ರೀ ಶಿರ್ಡಿ ಸಾಯಿಬಾಬಾರ ಪುಣ್ಯ ಚರಿತ್ರೆ `ಪರಂಜ್ಯೋತಿ' ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಸುನೀತಾ ಶೆಟ್ಟಿಯವರು ಇಂತಹ ಪುಸ್ತಕವನ್ನು ಪ್ರಕಟಿಸಿದ ಲೇಖಕಿಯನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಮುಂಬಯಿ ಸಂಚಾಲಕ ಹಾಗೂ ಸಮಾಜ ಸೇವಕರಾದ ಡಾ. ಸತೀಶ್ ಎನ್. ಬಂಗೇರ, ಪುತ್ತೂರು ಸತ್ಯಶಾಂತ ಪ್ರತಿಷ್ಠಾನದ ಶಾಂತಾ ಕುಂಟಿನಿ, ಪುತ್ತೂರು ಸಾಹಿತ್ಯ ವೇದಿಕೆಯ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಹಾಗೂ ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವರಲ್ಲಿ ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ (ಸಮಾಜ ಸೇವೆ), ಮೈಸೂರಿನ ಎಂ. ಎಸ್. ವೆಂಕಟರಾಮಯ್ಯ (ಸಮಾಜ ಸೇವೆ), ರಾಜು ಪೂಜಾರಿ (ಸಮಾಜ ಸೇವೆ), ಪದ್ಮಾವತಿ ಸಚ್ಚಿದಾನಂದ ಗುಪ್ತ (ಅಲಂಕಾರ, ಪ್ರಸಾಧನ), ಸುಧಾರಾಜು ( ಸಾಹಿತ್ಯ, ಸಂಘಟನೆ), ರಮೇಶ ತೇರದಾಳ (ಚಿತ್ರಕಲೆ), ಚೇತನಾ ಭಟ್. (ಯುವ ಉದ್ಯಮಿ), ವಿನೋದ ಕೆ. ಸಿ. (ಸಮಾಜ ಸೇವೆ), ಗೋಪಾಲಕೃಷ್ಣ ಭಟ್(ಸಂಘಟನೆ), ರಜನಿ ಅಶೋಕ ಜೀರಗ್ಯಾಳ (ಸಾಹಿತ್ಯ), ಉಷಾ ಉಡುಪಿ(ಪತ್ರಿಕೋದ್ಯಮ), ಕವಿತಾ ಕಿಣಿ (ತಬಲಾ ವಾದನ) ಇವರೆಲ್ಲರನ್ನು ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದರಾದ ರಮೇಶ ತೇರದಾಳರ ಚಿತ್ರಕಲೆಯ ಪ್ರದರ್ಶನವನ್ನು ತುಮಕೂರು ವಿಶ್ವ ವಿದ್ಯಾಲಯದ ಉಪನ್ಶಾಸಕಿ ಸುಧಾ ರಾಜು ಉದ್ಭಾಟಿಸಿ, ಶುಭ ಹಾರೈಸಿದರು. ಚಿತ್ರದುರ್ಗ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಬಸವರಾಜ ಟಿ. ಬೆಳಗಟ್ಟಿಯವರು “ಕನ್ನಡ ಸಾಹಿತ್ಯ ಲೋಕದಲ್ಲಿ ಪತ್ತೆದಾರಿ ಕಾದಂಬರಿಗಳು' ಬಗ್ಗೆ ಉಪನ್ಶಾಸ ನೀಡಿದರು.
ಅಂತಾರಾಜ್ಯ ಕವಿಗೋಷ್ಠಿ ಕಾರ್ಯಕ್ರಮವು ಶಾರದಾ ಎ. ಅಂಚನ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕವಿಗಳಾದ ಲಕ್ಷ್ಮೀ ಮೈಸೂರು, ಶಾಂತಾ ಕುಂಟಿನಿ, ಡಾ. ಜಿ.ಪಿ. ಕುಸುಮಾ, ವಾಣಿ ಶೆಟ್ಟಿ, ಅರುಷಾ ಶೆಟ್ಟಿ, ಹೇಮಾ ಸದಾನಂದ ಅಮೀನ್, ಕುಸುಮಾ ಪೂಜಾರಿ, ಡಾ. ಕರುಣಾಕರ ಶೆಟ್ಟಿ, ಸಾದಯ ಹಾಗೂ ಗೋಪಾಲಕೃಷ್ಣ ಭಟ್ ತಮ್ಮ ಕವಿತೆಗಳನ್ನು ವಾಚಿಸಿ ಉಪಸ್ಥಿತರಿದ್ದ ತುಳು- ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಕವಿಗೋಷ್ಠಿಯ ಕಾರ್ಯಕ್ರಮವನ್ನು ಸಾದಯ ಅವರು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಶ್ರದ್ಧಾ ವಿ. ಕುಮಶಿ ಅವರಿಂದ ಭರತನಾಟ್ಯ ಹಾಗೂ ಶಾರದಾ ಎ. ಅಂಚನ್ ರವರು ಚಿತ್ರಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಿ.ವಿ. ಪ್ರದೀಪ ಕುಮಾರ್ ಮತ್ತು ಸುಧಾ ರಾಜುರವರು ನಿರೂಪಿಸಿದರು. ಡಾ. ಸತೀಶ ಎನ್.ಬ೦ಗೇರ ಅವರು ವಂದಿಸಿದರು.
ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಖ್ಯಾತಿಯ ರಮೇಶ ತೇರದಾಳರ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಒಟ್ಟಿನಲ್ಲಿ ಸಂಪೂರ್ಣ ಕಾರಕ್ರಮವು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನೆರವೇರುವಲ್ಲಿ ಕಥಾ ಬಿಂದು ಪ್ರಕಾಶನ ಮ೦ಗಳೂರು ಇವರು ತುಮಕೂರು. ನಗರ ಘಟಕದ ಸಿರಿಗನ್ನಡ ವೇದಿಕೆ ಹಾಗೂ ಪುತ್ತೂರು ಸಾಹಿತ್ಯ ವೇದಿಕೆಯ ಸದಸ್ಯರುಗಳು ಮತ್ತು ಮುಂಬಯಿಯ ಸಾಹಿತ್ಯಾಭಿಮಾನಿಗಳು ಸಹಕರಿಸಿದರು.
Comments (0)
Post Comment
Report Abuse
Be the first to comment using the form below.