(JavaScript required to view this email address)
Mangalore

News & Articles

ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಹಾಗೂ ವಾಯ್ಸ್ ಆಫ್ ಆರಾಧನಾ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ 2022 ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ದಿನಾಂಕ 1.11.2022 ರಂದು ನೆರವೇರಿತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿ, ಭುವನಾಭಿರಾಮ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ಶ್ರೀಪತಿ ಭಟ್, ದೈಜಿವರ್ಲ್ಡ್ ನ ಹೇಮಾಚಾರ್ಯ, ಲೇಖಕ ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್, ವಾಯ್ಸ್ ಆಫ್ ಆರಾಧನಾ ಸಂಸ್ಥಾಪಕಿ ಶ್ರೀಮತಿ ಪದ್ಮಶ್ರೀ ಭಟ್ ನಿಡ್ಡೋಡಿ, ಚಂದ್ರಶೇಖರ ನಾವಡ ಮತ್ತಿತರರು ಉಪಸ್ಥಿತರಿದ್ದರು.

"ಮಾತೃಭೂಮಿ, ಮಾತೃಭಾಷೆಯ ಬಗೆಗಿನ ಕಾಳಜಿ ಇಲ್ಲದಾಗ ಯಾವ ವ್ಯಕ್ತಿಯೂ ಬೆಳೆಯುವುದಕ್ಕೆ ಸಾಧ್ಯವಿಲ್ಲ" ಎಂದು ಡಾ. ಗಣೇಶ ಅಮೀನ್ ಸಂಕಮಾರ್ ಅವರು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಾವು-ನೀವು ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುತ್ತಾ ಹೇಳಿದರು.
ಈ ಸಂದರ್ಭದಲ್ಲಿ ಶಶಿಕಲಾ ಕಮ್ಮಡೆ, ಸಂತೋಷ ಕುಮಾರ್ ಹೆಗಡೆ, ಶುಭಲಕ್ಷ್ಮಿ ಆರ್. ನಾಯಕ್, ಶಾಂತಾ ಪುತ್ತೂರು, ಚಂದ್ರಹಾಸ ಎಂ. ದೇವಾಡಿಗ, ಸೀತಾರಾಮ್ ಕುಮಾರ್, ಎಚ್. ಜನಾರ್ಧನ ಇವರುಗಳಿಗೆ ಕಥಾಬಿಂದು ರಾಜ್ಯೋತ್ಸವ ಪುರಸ್ಕಾರ 2022 ನೀಡಿ ಗೌರವಿಸಲಾಯಿತು.

ನಂತರ ಖ್ಯಾತ ಪತ್ರಕರ್ತ ಸಾಹಿತಿ ಸಂಘಟಕ ಡಾ. ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಶ್ರೀಮತಿ ರೇಖಾ ಸುದೇಶ್ ರಾವ್ ನಿರ್ವಹಣೆಯಲ್ಲಿ ಕವಿ, ಕವಯಿತ್ರಿಯರಾದ ದೀಪಾ ಪಾವಂಜೆ, ಅನುರಾಧ, ರೇಮಂಡ್ ಡೀಕೂನ ತಾಕೊಡೆ, ಡಾ. ಸುರೇಶ ನೆಗಳಗುಳಿ, ಬದ್ರುದ್ದೀನ್ ಕೂಳೂರು, ಸೌಮ್ಯಾ ಗೋಪಾಲ್, ಗೋಪಾಲಕೃಷ್ಣ ಶಾಸ್ತ್ರಿ, ಸರೋಜಿನಿ, ವೀಣಾ ವಾಮಂಜೂರ್, ರೇಖಾ ನಾರಾಯಣ್ ಪಕ್ಷಿಕೆರೆ, ಶಾಂತಾ ಪುತ್ತೂರು, ದಯಾನಂದ ಪೆರಾಜೆ, ಗೀತಾ ಲಕ್ಷ್ಮೀಶ್, ರೂಪಾ ವಿನಯ್, ಪ್ರಕಾಶ್ ಪಡಿಯಾರ್, ಸುನೀತಾ ಪ್ರದೀಪ್ ಕುಮಾರ್, ದಯಾಮಣಿ ಎಕ್ಕಾರು ಮತ್ತಿತರರು ಕವನ ವಾಚನ ಮಾಡಿದರು.

ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರಾಧನಾ ಭಟ್ ಹಾಗೂ ಸಂಭ್ರಮ ಕಾರ್ತಿಕ್ ಭಟ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ 2022 : ಕವಿಗೋಷ್ಠಿ : ಕಥಾಬಿಂದು ರಾಜ್ಯೋತ್ಸವ ಪುರಸ್ಕಾರ

Comments (0)

Be the first to comment using the form below.