(JavaScript required to view this email address)
Mangalore

News & Articles

ಮಂಗಳೂರು: ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನ, ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ). ಮಂಗಳೂರು, ಸಮೃದ್ಧಿ ಫೌಂಡೇಷನ್ (ರಿ). ಕೆಂಗೇರಿ ಕೊಮ್ಮಘಟ್ಟ, ಬೆಂಗಳೂರು, ಶ್ರೀ ಮರಳುಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ಭದ್ರಾವತಿ ಕರ್ನಾಟಕ ಆಯೋಜನೆಯಲ್ಲಿ ಶ್ರೀ ಕಾಶಿ ಜಗದ್ಗುರು ಡಾ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಕನ್ನಡ ಕಂಪು ಸರಣಿ 5 - ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ಪ್ರದಾನ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ 18.12.2022 ಸಂಜೆ 6 ಗಂಟೆಗೆ ಜಂಗಮವಾಡಿ ಮಠ ವಾರಣಾಸಿ ಕಾಶಿಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ಧಲಿಂಗಯ್ಯ ಅಧ್ಯಕ್ಷರು, ಶ್ರೀ ಮರಳುಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ಭದ್ರಾವತಿ, ಶ್ರೀ ರುದ್ರಾರಾಧ್ಯ ಅಧ್ಯಕ್ಷರು, ಸಮೃದ್ಧಿ ಫೌಂಡೇಷನ್ (ರಿ). ಕೆಂಗೇರಿ ಕೊಮ್ಮಘಟ್ಟ, ಬೆಂಗಳೂರು, ಶ್ರೀ ರವೀಂದ್ರ ಕಿಣಿ ನಿವೃತ್ತ ಅಭ್ಯಂಗತರು ಮಂಗಳೂರು, ಇವರು ಭಾಗವಹಿಸಲಿದ್ದಾರೆ. ಸತ್ಯಶಾಂತ ಪ್ರತಿಷ್ಠಾನ (ರಿ) ಅರ್ಪಿಸುವ ಶ್ರೀಮತಿ ಶಾಂತ ಕುಂಟಿನಿ ಸಾಹಿತ್ಯ ರಚನೆಯ ಸಿ.ಡಿ. ಬಿಡುಗಡೆಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಹಾಗೂ ಶ್ರೀಮತಿ ಕವಿತಾ ಕಿಣಿ ಅವರಿಂದ ತಬಲಾವಾದನ ಕೂಡಾ ನಡೆಯಲಿದೆ.
ಕನ್ನಡ ಕಂಪು ಸರಣಿ 5 - ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ಪ್ರದಾನ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮದಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ "ಸಾಧನ ಶ್ರೀ" ರಾಷ್ಟ್ರ ಪ್ರಶಸ್ತಿ ಪ್ರದಾನ ನಡೆಯಲಿದ್ದು

ಡಾ ಹರಿಶ್ಚಂದ್ರ ಸಾಲಿಯಾನ್(ಸಾಹಿತ್ಯ),
ಶ್ರೀ ಆನಂದ್ ಕೊರಟಿ (ಪ್ರಕಾಶನ),
ಶ್ರೀ ಶೇಖರ ಪಿ. ಪೂಜಾರಿ (ಸಮಾಜಸೇವೆ),
ಶ್ರೀ ಸುಂದರ ಪೂಜಾರಿ (ಸಮಾಜಸೇವೆ),
ಶ್ರೀ ಕೃಷ್ಣಮೂರ್ತಿ ಪುದುಕೋಳಿ (ಧಾರ್ಮಿಕ),
ಶ್ರೀಮತಿ ಶಾಂತಾ ಕುಂಟಿನಿ (ಸಾಹಿತ್ಯ ಸಂಘಟನೆ),
ಶ್ರೀಮತಿ ಲಕ್ಷ್ಮೀ (ಹಿಂದಿ ಅನುವಾದ),
ಶ್ರೀಮತಿ ಕವಿತಾ ಕಿಣಿ (ತಬಲಾವಾದನ)

ಇವರೆಲ್ಲರೂ "ಸಾಧನ ಶ್ರೀ" ರಾಷ್ಟ್ರಪ್ರಶಸ್ತಿ ಪುರಸ್ಕೃತಗೊಳ್ಳಲಿದ್ದಾರೆ.

Comment (1)




ಶನ

ಶುಭಲಕ್ಷ್ಮೀ ನಾಯಕ commented on December 4th, 2022 at 7:33 PM 
ಸರ್ವರಿಗೂ ಶುಭವಾಗಲಿ ಕಾರ್ಯಕ್ರಮ ಯಶಸ್ವಿಯಾಗಿ ಎಲ್ಲರ ಮೇಲೆ ದೇವತಾನುಗ್ರಹ, ದೈವಾನುಗ್ರಹವಿರಲಿ.
ಶುಭಾಶಯಗಳೊಂದಿಗೆ ಅಭಿನಂದನೆಗಳು.ಶ್ಲಾಘನೀಯ ಕಾಯಕ.